ಎಲೆಕ್ಷನ್ ಬಳಿಕ “ಕೈ’ ಹುದ್ದೆಗಳಲ್ಲಿ ಬದಲು?
Team Udayavani, Oct 22, 2020, 12:49 AM IST
ಹೊಸದಿಲ್ಲಿ: ಬಿಹಾರ ವಿಧಾನಸಭೆ ಚುನಾವಣೆ ಮುಗಿದ ಕೂಡಲೇ ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ತರಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಮುಂದಾಗಿದ್ದಾರೆ. ಹಿರಿಯ ನಾಯಕರನ್ನು ಪಕ್ಕಕ್ಕಿಟ್ಟು ಈಗಾಗಲೇ ಹಲವು ರಾಜ್ಯಗಳಲ್ಲಿ ಹೊಸ ಮುಖಗಳನ್ನು ಉಸ್ತುವಾರಿಯಾಗಿ ನೇಮಿಸಿರುವ ಸೋನಿಯಾ, ಮತ್ತಷ್ಟು ಹೊಸಬರಿಗೆ ಮಹತ್ವದ ಹುದ್ದೆಗಳನ್ನು ನೀಡಲಿದ್ದಾರೆ ಎಂದು “ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಕಳೆದ ತಿಂಗಳು “ಪಕ್ಷಕ್ಕೆ ಸದೃಢ, ಪರಿಪೂರ್ಣ ನಾಯಕತ್ವದ ಅವಶ್ಯಕತೆ ಇದೆ’ ಎಂದು 23 ಪ್ರಮುಖರು ಸೋನಿಯಾಗೆ ಬಹಿರಂಗ ಪತ್ರ ಬರೆದಿದ್ದರು. ಪಕ್ಷ ಸಂಘಟನೆಯ ಪುನರ್‌ರಚನೆಗೆ ಈ ಪತ್ರವೇ ಕಾರಣ ಎನ್ನಲಾಗುತ್ತಿದೆ.
ಯಾವ ಹುದ್ದೆ ಬದಲು?: ಪಕ್ಷದ ಕಿಸಾನ್ ಸೆಲ್ ಮುಖ್ಯಸ್ಥ ನಾನಾ ಪಟೋಲೆ “ಮಹಾ’ ವಿಧಾನಸಭೆಗೆ ಸ್ಪೀಕರ್ ಆಗಿ, ಒಬಿಸಿ ವಿಭಾಗ ಅಧ್ಯಕ್ಷ ತಾಮ್ರಧ್ವಜ್ ಸಾಹು ಛತ್ತೀಸಗಢದ ಗೃಹ ಸಚಿವರಾಗಿ, ಪರಿಶಿಷ್ಟ ವರ್ಗ ವಿಭಾಗ ಮುಖ್ಯಸ್ಥ ನಿತಿನ್ ರಾವತ್ “ಮಹಾ’ ಇಂಧನ ಸಚಿವರಾಗಿ, ಸಂವಹನ ವಿಭಾಗ ಅಧ್ಯಕ್ಷ ರಣದೀಪ್ ಸುಜೇವಾಲಾ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಇವರ ಪಕ್ಷದ ಹುದ್ದೆಗಳಿಗೆ ಹೊಸ ನೇಮಕಾತಿ ನಡೆಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Wedding: ಚಳಿಗೆ ಮದುವೆ ಮಂಟಪದಲ್ಲೇ ಪ್ರಜ್ಞೆ ತಪ್ಪಿದ ವರ… ನನಗೆ ಈ ಹುಡುಗ ಬೇಡವೆಂದ ವಧು
MUST WATCH
ಹೊಸ ಸೇರ್ಪಡೆ
Panaji: ಡಿ.19 ರಂದು ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಸನ್ಮಾನ, ಗೌರವ
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Signature Bag: ನಿನ್ನೆ ಪ್ಯಾಲೆಸ್ತೀನ್ ಬೆಂಬಲ, ಇಂದು ಬಾಂಗ್ಲಾ ಪರ ಕೈ ಚೀಲ ತಂದ ಸಂಸದೆ!
Tragedy: 18 ವರ್ಷ ವ್ರತದ ಬಳಿಕ ಹುಟ್ಟಿದ ಕಂದಮ್ಮನನ್ನು 14 ತಿಂಗಳಲ್ಲೇ ಕಳೆದುಕೊಂಡ ಕುಟುಂಬ
Haryana: 11 ವರ್ಷ ಕಾನೂನು ಸಮರ-3 ಕೋಟಿ ರೂ. ಜೀವನಾಂಶ; 44 ವರ್ಷದ ದಾಂಪತ್ಯ ಅಂತ್ಯ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.