ಕಪ್ಪು ಮೈಬಣ್ಣದ ಪತ್ನಿಗೆ ವರದಕ್ಷಿಣೆಗಾಗಿ ತ್ರಿವಳಿ ತಲಾಕ್
Team Udayavani, Jan 8, 2018, 11:35 AM IST
ಬರೇಲಿ, ಉತ್ತರ ಪ್ರದೇಶ : ತ್ರಿವಳಿ ತಲಾಕನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ; ಆದರೂ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ವರದಕ್ಷಿಣೆಗಾಗಿ ತನ್ನ ಪತಿ ತನಗೆ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ಮುಸ್ಲಿಂ ಮಹಿಳೆಯೊಬ್ಬಳು ದೂರಿದ್ದಾಳೆ.
ತ್ರಿವಳಿ ತಲಾಕ್ ನೀಡಲ್ಪಟ್ಟ ಮಹಿಳೆಯ ಹೆಸರು ತರನ್ನಂ. ಈಕೆಗೆ 2016ರಲ್ಲಿ ಮದುವೆಯಾಗಿತ್ತು. ಆಕೆಯ ಮೈ ಬಣ್ಣ ಸ್ವಲ್ಪ ಕಪ್ಪಿತ್ತು. ಈ ಕಾರಣಕ್ಕೆ ಮಾತ್ರವಲ್ಲದೆ ಇನ್ನೂ ಹೆಚ್ಚು ಡೌರಿ ಹಣ ತರಬೇಕೆಂದು ಒತ್ತಾಯಿಸಿದ ಆಕೆಯ ಗಂಡನು ಕೊನೆಗೆ ಆಕೆಗೆ ತ್ರಿವಳಿ ತಲಾಕ್ ನೀಡಿದ್ದಾನೆ ಎಂದು ವರದಿಗಳು ತಿಳಿಸಿವೆ.
“ದಿನಂಪ್ರತಿ ಎಂಬಂತೆ ನನಗೆ ನನ್ನ ಗಂಡ ರಫೀಕ್ ಹೊಡೆಯುತ್ತಿದ್ದ. ಕೆಲವು ಬಾರಿ ಆತ ನನ್ನನ್ನು ಕೊಲ್ಲಲು ಕೂಡ ಮುಂದಾಗುತ್ತಿದ್ದ; ಎರಡು ದಿನಗಳ ಹಿಂದೆ ನಾನು ನನ್ನ ಕುಟುಂಬದವರನ್ನು ಭೇಟಿಯಾಗಲು ತವರಿಗೆ ಹೋಗಿದ್ದೆ; ಆತ ಅಲ್ಲಿಗೂ ಬಂದು ನನಗೆ ಜೀವ ಬೆದರಿಕೆ ಒಡ್ಡಿದ; ಕೊಲ್ಲಲೂ ಯತ್ನಿಸಿದ; ನನ್ನ ತಂದೆ ಮಧ್ಯಸ್ಥಿಕೆ ವಹಿಸಿ ರಾಜಿಗೆ ಯತ್ನಿಸಿದಾಗ ಆತ ಅವರನ್ನೂ ಹೊಡೆದ. ಆ ಸಂದರ್ಭದಲ್ಲೇ ಆತ ಕೋಪಾವೇಶದಲ್ಲಿ ಮೂರು ಬಾರಿ ತಲಾಕ್ ಉಚ್ಚರಿಸಿ ನನಗೆ ವಿಚ್ಛೇದನ ನೀಡಿದ’ ಎಂದು ತರನ್ನಂ ತನ್ನ ಸಂಕಟವನ್ನು ತೋಡಿಕೊಂಡಿದ್ದಾಳೆ.
ಉತ್ತರ ಪ್ರದೇಶದಲ್ಲಿ ಮುಸ್ಲಿಂ ಪುರುಷರು ತೀರ ಕ್ಷುಲ್ಲಕ ಕಾರಣಗಳಿಗೆ ತಮ್ಮ ಪತ್ನಿಗೆ ತ್ರಿವಳಿ ತಲಾಕ್ ನೀಡುವ ಹಲವಾರು ಪ್ರಕರಣಗಳು ವರದಿಯಾಗಿವೆ.ಸುಪ್ರೀಂ ಕೋರ್ಟ್ ಈಚೆಗೆ ತ್ರಿವಳಿ ತಲಾಕ್ ನಿಷೇಧಿಸಿದ ಬಳಿಕವೂ ಈ ಪಿಡುಗು ಮುಂದುವರಿದಿರುವುದಕ್ಕೆ ಹಲವು ಪ್ರಕರಣಗಳು ಸಾಕ್ಷಿಯಾಗಿವೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.