ಲಾಲು ಜಾಗರಣೆ; ಬಿಸ್ಕತ್, ಚಹಾ ಸೇವಿಸಿದ ಆರ್ಜೆಡಿ ಮುಖ್ಯಸ್ಥ
Team Udayavani, Dec 25, 2017, 12:05 PM IST
ರಾಂಚಿ: ಮೇವು ಹಗರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ಗೆ ಶನಿವಾರ ರಾತ್ರಿ ನಿದ್ದೆಯೇ ಬಂದಿಲ್ಲ. ಹೀಗೆಂದು ಜೈಲಿನ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಭಾನುವಾರ ಬೆಳಗ್ಗೆ ಅವರಿಗೆ ಚಹಾ ಮತ್ತು ಬಿಸ್ಕತ್ಗಳನ್ನು ನೀಡಲಾಯಿತು.
ಭಾನುವಾರ ರಜಾದಿನವಾದ್ದರಿಂದ ಯಾರಿಗೂ ಭೇಟಿಗೆ ಅನುಮತಿ ನೀಡಲಾಗಿರಲಿಲ್ಲ. ಆದರೆ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 12ರ ವರೆಗೆ ಬೆಂಬಲಿಗರಿಗೆ, ಕುಟುಂಬಸ್ಥರಿಗೆ ಭೇಟಿಗೆ ಅವಕಾಶ ಮಾಡಿಕೊಡಲಾಗುತ್ತದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಜೈಲಿನ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ, ಆರ್ಜೆಡಿ ಮುಖ್ಯಸ್ಥ ಮನವಿ ಮಾಡಿಕೊಂಡರೆ ಅವರಿಗೆ ಸೊಳ್ಳೆಯಿಂದ ರಕ್ಷಣೆ ನೀಡುವಂಥ ಸೊಳ್ಳೆ ಪರದೆ ನೀಡಲಾಗುತ್ತದೆ. ಒಂದು ದಿನಪತ್ರಿಕೆ, ಟಿವಿ ನೋಡಲು ಅವಕಾ ಶ ಕಲ್ಪಿಸಲಾಗುತ್ತದೆ ಎಂದಿದ್ದಾರೆ. ಅವರಿಗೆ ಮನೆಯ ಊಟ ನೀಡಲು ಅನುಮತಿ ಇದೆಯಾದರೂ, ಅವರೇ ಸ್ವತಃ ಸೆಲ್ನಲ್ಲಿ ಅಡುಗೆ ಮಾಡುವ ಅವಕಾಶ ನೀಡಲಾಗಿದೆ. 2014ರಲ್ಲಿ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವುದರಿಂದ ಅವರು ಕಟ್ಟುನಿಟ್ಟಿನ ಆಹಾರ ಪದ್ಧತಿಯಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.