ಗುಜರಾತ್, ಮಹಾರಾಷ್ಟ್ರ: ಪೆಟ್ರೋಲ್ 2, ಡೀಸಿಲ್ 1 ರೂ. ಇಳಿಕೆ
Team Udayavani, Oct 10, 2017, 3:27 PM IST
ಮುಂಬಯಿ : ಮಹಾರಾಷ್ಟ್ರ ಸಚಿವ ಸಂಪುಟ ಇಂದು ಮಂಗಳವಾರ ಪೆಟ್ರೋಲ್ ದರವನ್ನು ಲೀಟರ್‌ಗೆ 2 ರೂ. ಮತ್ತು ಡೀಸಿಲ್ ದರವನ್ನು ಲೀಟರ್‌ಗೆ 1 ರೂ. ಇಳಿಸಲು ನಿರ್ಧರಿಸಿದೆ. ಇಳಿಸಲ್ಪಟ್ಟ ಈ ಹೊಸ ದರಗಳು ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.
ಇಂದು ಬೆಳಗ್ಗೆ ಗುಜರಾತ್ ಸರಕಾರ ಪೆಟ್ರೋಲ್ ಮತ್ತು ಡೀಸಿಲ್ ಮೇಲಿನ ವ್ಯಾಟ್ ದರವನ್ನು ಶೇ.4 ಇಳಿಸಿತು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರು ತಮ್ಮ ಸರಕಾರದ ಈ ನಿರ್ಧಾರವನ್ನು ಪ್ರಕಟಿಸಿದ್ದರು.
ದೀಪಾವಳಿ ಹಬ್ಬ ಸನ್ನಿಹಿತವಾಗುತ್ತಿವಂತೆಯೇ ಈ ಎರಡು ರಾಜ್ಯಗಳು ಪೆಟ್ರೋಲ್, ಡೀಸಿಲ್ ಬೆಲೆ ಇಳಿಸಿರುವುದು ಜನರಿಗೆ ಅಪ್ಯಾಯಮಾನವೆನಿಸಿದೆ. ಈ ವರ್ಷಾಂತ್ಯ ಈ ಎರಡೂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.
ಕೇಂದ್ರ ಸರಕಾರದ ಸೂಚನೆಯನ್ನು ಅನುಸರಿಸಿ ಗುಜರಾತ್ ಸರಕಾರ ಪೆಟ್ರೋಲ್ ಮತ್ತು ಡೀಸಿಲ್ ಮೇಲಿನ ವ್ಯಾಟ್ ಅನ್ನು ಶೇ.4ರಷ್ಟು ಇಂದು ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಇಳಿಸಿದೆ ಎಂದು ಮುಖ್ಯಮಂತ್ರಿ ರೂಪಾಣಇ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.