![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 19, 2019, 7:39 AM IST
ಶ್ರೀಹರಿಕೋಟಾ: ಮುಂಬರುವ ಜುಲೈನಲ್ಲಿ ಚಂದ್ರನ ಅಂಗಳಕ್ಕೆ ತೆರಳಲು ಸಿದ್ಧತೆ ನಡೆಸಿರುವ ಇಸ್ರೋ, 2023ಕ್ಕೆ ಶುಕ್ರಗ್ರಹದ ಮೇಲೆ ಸವಾರಿ ಮಾಡಲು ತಯಾರಿ ನಡೆಸಿದೆ. ಜತೆಗೆ ಮುಂದಿನ 10 ವರ್ಷಗಳಲ್ಲಿ 7 ಯಾನ ಕೈಗೊಳ್ಳಲು ಯೋಜನೆ ರೂಪಿಸಿದೆ.
ಚಂದ್ರಯಾನ -2 ಜತೆಗೆ ಎಕ್ಸ್‌ಪೋಸ್ಯಾಟ್ ಹಾಗೂ ಆದಿತ್ಯ ಎಲ್1 ಯೋಜನೆಗಳನ್ನು ಈಗಾಗಲೇ ಘೋಷಿಸಲಾಗಿದೆ ಇನ್ನು ಮಂಗಳಯಾನ-2, ಶುಕ್ರಯಾನ, ಚಂದ್ರಯಾನ 3 ಹಾಗೂ ಸೌರವ್ಯವಸ್ಥೆ ಯಾಚೆಗಿನ ಶೋಧದ ಎಕ್ಸೋವಲ್ಡ್ಸ್ರ್ ಯೋಜನೆಯನ್ನು ಇಸ್ರೋ ವಿವರಿಸಿದೆ.
ಶುಕ್ರ ಗ್ರಹವನ್ನು ಭೂಮಿಯ ಅವಳಿ ಗ್ರಹ ಎಂದೇ ಕರೆಯಲಾಗುತ್ತದೆ. ಇದರ ಗಾತ್ರ, ವ್ಯಾಪ್ತಿ, ಗುರುತ್ವ ಸೇರಿದಂತೆ ಹಲವು ಅಂಶಗಳಲ್ಲಿ ಶುಕ್ರ ಭೂಮಿಯನ್ನು ಹೋಲುತ್ತದೆ. ಮೇಲ್ಮೈ ಹಾಗೂ ವಾತಾವರಣ ಅಧ್ಯಯನ ಮತ್ತು ಸೌರ ವಿಕಿರಣದ ಜೊತೆಗೆ ಪ್ರತಿಕ್ರಿಯೆಯನ್ನು ಶುಕ್ರಯಾನದಲ್ಲಿ ಅಧ್ಯಯನ ನಡೆಸಲಾಗುತ್ತದೆ. ಶುಕ್ರಯಾನದಲ್ಲಿ 20 ಪೇಲೋಡ್‌ಗಳನ್ನು ಉಡಾವಣೆ ಮಾಡಲು ಯೋಜಿಸಲಾಗಿದೆ ಎಂದು ಶ್ರೀಹರಿಕೋಟಾದಲ್ಲಿ ಇಸ್ರೋ ಅಧ್ಯಕ್ಷ ಶಿವನ್ ಅವರು ಹೇಳಿದ್ದಾರೆ.
ಇಸ್ರೋ ಯೋಜನೆ
ಎಕ್ಸ್‌ಪೋಸ್ಯಾಟ್ -2020
ಐದು ವರ್ಷದ ಯೋಜನೆ ಇದಾಗಿದ್ದು, ಬಾಹ್ಯಾಕಾಶದ ವಿಕಿರಣದ ಅಧ್ಯಯನಕ್ಕೆ ರಾಮನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಿರ್ಮಿಸಿದ ಪೊಲಾರಿಮೀಟರ್ ಎಂಬ ಸಲಕರಣೆಯನ್ನು ಹೊತ್ತೂಯ್ದು ಕಕ್ಷೆಗೆ ತಲುಪಿಸಲಾಗುತ್ತದೆ.
ಆದಿತ್ಯ ಎಲ್1 – 2021
ಇದರಲ್ಲಿ ಸೂರ್ಯನ ಪ್ರಭಾವಳಿಯನ್ನು ತಲುಪಲಾಗುತ್ತದೆ. ಇದರಿಂದ ಭೂಮಿಯಲ್ಲಿ ಉಂಟಾಗುತ್ತಿರುವ ಹವಾಮಾನ ವೈಪರೀತ್ಯ ಮತ್ತು ಅದರ ಪರಿಣಾಮಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಊಹಿಸಬಹುದಾಗಿದೆ. ಈ ನೌಕೆಯು ಭೂಮಿಯಿಂದ 15 ಲಕ್ಷ ಕಿ.ಮೀ ದೂರದಲ್ಲಿ ಇರಲಿದೆ.
ಮಂಗಳಯಾನ 2- 2022
ಸಾಮಾನ್ಯ ಉಡಾವಣೆಯಲ್ಲಿ ಮಾಡುವಂತೆ ಆರ್ಬಿ ಟರ್, ಲ್ಯಾಂಡರ್ ಹಾಗೂ ರೋವರ್ ಅನ್ನು ಮಂಗಳ ನಲ್ಲಿಗೆ ಕಳುಹಿ ಸದೆ ಕೇವಲ ಆರ್ಬಿಟರ್ ಕಳುಹಿಸುವ ಮೂಲಕ ವಿಶಿಷ್ಟ ಸಾಧನೆ ಮಾಡುವ ಕಲ್ಪನೆಯನ್ನು ಇಸ್ರೋ ಈ ಯಾನದಲ್ಲಿ ಹೊಂದಿದೆ.
ಚಂದ್ರಯಾನ 3 – 2024
ಈ ಯೋಜನೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದ್ದು, ಚಂದ್ರಯಾನ 2 ರ ಯಶಸ್ಸು ಹಾಗೂ ಅಧ್ಯಯನದ ನಂತರ ಈ ಬಗ್ಗೆ ಸ್ಪಷ್ಟ ರೂಪ ಸಿಗಲಿದೆ ಎಂದು ಹೇಳಲಾಗಿದೆ.
ಎಕ್ಸೋವಲ್ಡ್ಸ್ರ್ – 2028
ಇದು ನಮ್ಮ ಸೌರ ವ್ಯವಸ್ಥೆಯಾಚೆಗಿನ ಶೋಧವಾಗಿದ್ದು, ಭಾರತದ ಅತ್ಯಂತ ಪ್ರತಿಷ್ಠಿತ ಹಾಗೂ ಮಹತ್ವದ ಯೋಜನೆಯಾಗಿರಲಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದೆ.
ಶುಕ್ರಯಾನ -2023
ವಿಶ್ವದ ಗಮನ ಸೆಳೆದಿರುವ ಈ ಯೋಜನೆಯಲ್ಲಿ ಇಸ್ರೋ 20 ಪೇಲೋಡ್‌ಗಳನ್ನು ಶುಕ್ರ ಗ್ರಹಕ್ಕೆ ಕಳುಹಿಸಲಿದ್ದು, ಮಹತ್ವದ ಅಧ್ಯಯನ ನಡೆಸಲಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.