ಕಲಾಪೋತ್ತರ ಕೋಲಾಹಲ
Team Udayavani, Aug 13, 2021, 7:30 AM IST
ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನವನ್ನು 2 ದಿನಗಳಿಗೆ ಮುನ್ನವೇ ಮೊಟಕುಗೊಳಿಸಿದ್ದು ಈಗ ಸರಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಇಡೀ ಕಲಾಪ ಹಾಳಾಗಲು ವಿಪಕ್ಷಗಳೇ ಕಾರಣ ಎಂದು ಕೇಂದ್ರ ಸರಕಾರ ಆರೋಪಿಸಿದರೆ, ಸರಕಾರವೇ ಹೊಣೆ ಎಂದು ವಿಪಕ್ಷಗಳು ತಿರುಗೇಟು ನೀಡಿವೆ. ಕೇಂದ್ರ ಸರಕಾರ ಶೇ. 60 ಮಂದಿಯ ಧ್ವನಿಯನ್ನು ಹತ್ತಿಕ್ಕಿ, ಸಂಸತ್ ಕಲಾಪವೇ ಇಲ್ಲದಂತೆ ಮಾಡಿದೆ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕೇಂದ್ರ ಸಚಿವ ಸಂಪುಟದ ಎಂಟು ಸಚಿವರು ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ವಿಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಅಧಿವೇಶನ ಹಾಳು ಮಾಡಲು ಪ್ರಧಾನ ಕಾರಣ. ಈ ಬಗ್ಗೆ ವಿಪಕ್ಷಗಳು ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದ್ದಾರೆ. ಮಸೂದೆಗಳನ್ನು ಅಂಗೀಕರಿಸಬಾರದು ಎಂದು ವಿಪಕ್ಷ ಗಳು ಬೆದರಿಕೆ ಒಡ್ಡಿದ್ದವು ಎಂಬ ಗಂಭೀರ ಆರೋಪವನ್ನೂ ಮಾಡಿ ದ್ದಾರೆ. ವಿಪಕ್ಷಗಳ ಮುಖಂಡರು ಆರೋಪಿಸಿದಂತೆ ಬುಧವಾರ ರಾಜ್ಯಸಭೆಗೆ ಹೊರಗಿನವರು ಯಾರೂ ಬಂದಿಲ್ಲ. ಎಲ್ಲವೂ ಅವರ ನಾಟಕ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಆರೋಪ ಸುಳ್ಳು :
ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ವಾಣಿಜ್ಯ ಮತ್ತು ಕೈಗಾರಿಕೆ ಖಾತೆ ಸಚಿವ ಪಿಯೂಷ್ ಗೋಯಲ್, ಬುಧವಾರ ರಾಜ್ಯಸಭೆಯಲ್ಲಿ ಮಹಿಳಾ ಸಂಸದರನ್ನು ಎಳೆದಾಡಲಾಗಿದೆ ಎಂಬ ವಿಪಕ್ಷಗಳ ಆರೋಪ ಸುಳ್ಳು. ಅವರೇ ಮಹಿಳಾ ಮಾರ್ಷಲ್ ಒಬ್ಬರ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ. 18 ಪುರುಷರು ಮತ್ತು 12 ಮಂದಿ ಮಹಿಳಾ ಮಾರ್ಷಲ್‌ಗಳು ಸೇರಿ 30 ಮಂದಿ ಇದ್ದರು. ಹೊರಗಿನಿಂದ ಯಾರೂ ಬಂದೇ ಇಲ್ಲ ಎಂದರು.
ಇಂಥ ನಾಚಿಕೆಗೇಡಿನ ಘಟನೆ ಬಗ್ಗೆ ತನಿಖೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಸದನದಲ್ಲಿ ಚರ್ಚೆಗೆ ಅವಕಾಶ ಕೊಟ್ಟಿಲ್ಲ ಎಂಬ ರಾಹುಲ್ ಆರೋಪಕ್ಕೆ ಉತ್ತರಿಸಿ, ವಿಪಕ್ಷಗಳಿಗೆ ಅನು ಕೂಲ ಇದ್ದಾಗ ಚರ್ಚೆಗೆ ಸಹಮತ ವ್ಯಕ್ತಪಡಿಸುತ್ತಾರೆ. ಬೇಡವಾದಾಗ ಗಲಾಟೆ ಮಾಡುತ್ತಾರೆ ಎಂದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖಾ¤ರ್ ಅಬ್ಟಾಸ್ ನಖೀÌ, ಕಾರ್ಮಿಕ ಸಚಿವ ಭೂಪೀಂದರ್ ಯಾದವ್, ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್, ವಿದೇಶಾಂಗ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್, ಸಂಸದೀಯ ವ್ಯವಹಾರಗಳ ಖಾತೆ ಸಹಾಯಕ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ಕೂಡ ರಾಜ್ಯಸಭೆಯಲ್ಲಿ ಬುಧವಾರ ವಿಪಕ್ಷಗಳು ನಡೆಸಿದ ಅನುಚಿತ ವರ್ತನೆ ಖಂಡಿಸಿ ಮಾತನಾಡಿದರು.
ಮುಂದಿನ ಅಧಿವೇಶನದಲ್ಲಾದರೂ ಸರಕಾರ -ವಿಪಕ್ಷಗಳು ಸಹಮತದಿಂದ ಚರ್ಚಿಸಿ ಸುಗಮ ಕಲಾಪಕ್ಕೆ ಅನುವು ಮಾಡಿ ಕೊಳ್ಳಬೇಕು. ಉಭಯ ಪಕ್ಷಗಳ ತೀವ್ರ ಪ್ರತಿರೋಧ ಯಾ ಅತ್ಯುತ್ಸಾಹ ಒಳ್ಳೆಯದಲ್ಲ. – ಎಚ್.ಡಿ. ದೇವೇಗೌಡ, ಮಾಜಿ ಪ್ರಧಾನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.