ಮಧ್ಯಪ್ರದೇಶದ ಬಳಿಕ ರಾಜಸ್ಥಾನ: ಮಕ್ಕಳ ಅತ್ಯಾಚಾರಿಗಳಿಗೆ ಗಲ್ಲು
Team Udayavani, Mar 9, 2018, 7:30 PM IST
ಜೈಪುರ : ಹನ್ನೆರಡರ ಕೆಳ ಹರೆಯದ ಬಾಲಕಿಯರ ಮೇಲೆ ಅತ್ಯಾಚಾರ ನಡೆಸುವ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ತಿದ್ದುಪಡಿ ಮಸೂದೆಯನ್ನು ರಾಜಸ್ಥಾನ ವಿಧಾನಸಭೆ ಇಂದು ಶುಕ್ರವಾರ ಪಾಸು ಮಾಡಿತು.
ಇದೇ ರೀತಿಯ ಮಸೂದೆಯನ್ನು ಈ ಮೊದಲೇ ಪಾಸು ಮಾಡಿರುವ ಮಧ್ಯ ಪ್ರದೇಶವು ಅತ್ಯಾಚಾರಿಗಳಿಗೆ ಮರಣ ದಂಡನೆ ಶಿಕ್ಷೆ ನೀಡುವ ದೇಶದ ಮೊದಲ ರಾಜ್ಯವಾಗಿದ್ದು ಇದೀಗ ರಾಜಸ್ಥಾನ ಎರಡನೇ ರಾಜ್ಯ ಎನಿಸಿದೆ.
12 ವರ್ಷಕ್ಕಿಂತ ಕಡಿಮೆ ವಯಸ್ಸಿ ಬಾಲಕಿಯರನ್ನು ರೇಪ್ ಮಾಡುವ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆ ವಿಧಿಸುವ ಮಸೂದೆಯನ್ನು ರಾಜಸ್ಥಾನ ಸರಕಾರ ಕಳೆದ ಮಂಗಳವಾರ ಮಂಡಿಸಿತ್ತು.
ಮಸೂದೆಯನ್ನು ಜಾರಿಗೆ ತರುವಲ್ಲಿನ ಕಾರಣಗಳು ಮತ್ತು ಉದ್ದೇಶಗಳನ್ನು ಸ್ಪಷ್ಟಪಡಿಸುವ ಆರಂಭಿಕ ಭಾಗದಲ್ಲಿ ರಾಜಸ್ಥಾನ ಸರಕಾರ ಹೀಗೆ ಹೇಳಿದೆ :
ಸಮಾಜದಲ್ಲೀಗ ಆಗೀಗ ಎಂಬಂತೆ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ, ಗ್ಯಾಂಗ್ ರೇಪ್ ನಡೆಯುತ್ತಿರುವುದನ್ನು ನಾವು ಗಮನಿಸಿದ್ದೇವೆ. ಈ ರೀತಿಯ ಅಪರಾಧಗಳು ಅತ್ಯಂತ ಕ್ರೂರವಾಗಿದ್ದು ಇದಕ್ಕೆ ಬಲಿಪಶುವಾಗುವ ಮಕ್ಕಳ ಬದುಕು ನರಕಪ್ರಾಯವಾಗಿರುತ್ತದೆ.
ಆದುದರಿಂದ ಹನ್ನೆರಡಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ರಕ್ಷಿಸುವ ಸಲುವಾಗಿ, ಅವರ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಯೋಗ್ಯವಾದ ವಾತಾವರಣವನ್ನು ಸೃಷ್ಟಿಸುವ ಸಲುವಾಗಿ ಇಂತಹ ಅಪರಾಧಗಳನ್ನು ಉಕ್ಕಿನ ಕೈಗಳಿಂದ ದಂಡಿಸಬೇಕಾದ ಅಗತ್ಯವಿದೆ.
ಅಂತೆಯೇ 12ರ ಕೆಳಹರೆಯದ ಬಾಲಕಿಯರ ಮೇಲೆ ಅತ್ಯಾಚಾರ, ಗ್ಯಾಂಗ್ ರೇಪ್ ನಡೆಸುವ ಅಪರಾಧಿಗಳಿಗೆ ಮರಣ ದಂಡನೆ, ಇಲ್ಲವೇ ಜೀವಾವಧಿ ಶಿಕ್ಷೆ ಅಥವಾ ಜೀವನ ಪೂರ್ತಿ ಜೈಲು ಶಿಕ್ಷೆ ನೀಡುವುದನ್ನು ಈ ಮಸೂದೆಯು ಉದ್ದೇಶಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.