ಗಂಗಾ ನದಿಗೇ ನೋಟಿಸ್ ನೀಡಿದ ಹೈಕೋರ್ಟ್!
Team Udayavani, Apr 29, 2017, 1:34 AM IST
ನೈನಿತಾಲ್: ತನ್ನ ದಡದಲ್ಲಿ ನಿರ್ಮಾಣ ಕಾಮಗಾರಿಗಾಗಿ ನೆಲ ತೋಡಲು ಅವಕಾಶ ಮಾಡಿಕೊಟ್ಟ ಗಂಗಾ ನದಿಗೇ ಉತ್ತರಾಖಂಡ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ! ಹೌದು, ಇದು ಅಚ್ಚರಿ ಎನಿಸಿದರೂ ಸತ್ಯ. ಸಂರಕ್ಷಣೆ ಮತ್ತು ಕಾಪಾಡುವ ದೃಷ್ಟಿಯಿಂದ ಉತ್ತರಾಖಂಡ ಹೈಕೋರ್ಟ್ ಗಂಗಾ ಮತ್ತು ಯುಮುನಾ ನದಿಗಳಿಗೆ ‘ಮಾನವ ಸ್ಥಾನಮಾನ’ ಕೊಟ್ಟಿತ್ತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ಹೈಕೋರ್ಟ್, ನದಿಯ ದಡದಲ್ಲಾಗುತ್ತಿರುವ ಕಾಮಗಾರಿ ಪ್ರಶ್ನಿಸಿ ಈ ನೋಟಿಸ್ ಜಾರಿ ಮಾಡಿದೆ.
ಖಾದ್ರಿ ಖಡಗ್ ಗ್ರಾಮದ ಬಳಿ ಗಂಗಾ ನದಿ ದಡದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಇದು ನಿಯಮಗಳಿಗೆ ವಿರುದ್ಧ ಎಂದು ಪಿಐಎಲ್ನಲ್ಲಿ ಆಕ್ಷೇಪಿಸಲಾಗಿತ್ತು. ಹೀಗಾಗಿ ಹೈಕೋರ್ಟ್ ಗಂಗಾನದಿ, ಕೇಂದ್ರ ಸರಕಾರ, ಕೇಂದ್ರ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಹೃಷಿಕೇಶದ ನಗರ ಪಾಲಿಕೆಗೆ ನೋಟಿಸ್ ನೀಡಿದೆ. ಮೇ 8ರೊಳಗೆ ಉತ್ತರಿಸುವಂತೆ ಸೂಚಿಸಿದೆ. ನದಿಯ ಪರ ಸರಕಾರದ ಮುಖ್ಯ ಕಾರ್ಯದರ್ಶಿ, ಅಡ್ವೊಕೇಟ್ ಜನರಲ್ ಮತ್ತು ನಮಾಮಿ ಗಂಗೆ ಯೋಜನೆಯ ನಿರ್ದೇಶಕರು ಉತ್ತರಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.