Kirti Chakra ಪಡೆದ ಬಳಿಕ ಸೊಸೆಯ ವಿರುದ್ದ ಕ್ಯಾ.ಅಂಶುಮಾನ್ ಹೆತ್ತವರ ಆರೋಪಗಳ ಸುರಿಮಳೆ
Team Udayavani, Jul 12, 2024, 11:55 AM IST
ಹೊಸದಿಲ್ಲಿ: ಕೆಲ ದಿನಗಳ ಹಿಂದಷ್ಟೇ ತನ್ನ ಮಗ ಅಂಶುಮಾನ್ ಸಿಂಗ್ (Captain Anshuman Singh) ಅವರಿಗೆ ಮರಣೋತ್ತರವಾಗಿ ರಾಷ್ಟ್ರಪತಿ ಅವರು ಪ್ರದಾನಿಸಿದ ಕೀರ್ತಿ ಚಕ್ರ (Kirti Chakra) ಪ್ರಶಸ್ತಿಯನ್ನು ಸೊಸೆ ಸ್ಮೃತಿ ತನ್ನೊಂದಿಗೆ ಕೊಂಡೊಯ್ದಿದ್ದಾರೆ ಎಂದು ಅಂಶುಮನ್ ತಂದೆ ಆರೋಪಿಸಿದ್ದಾರೆ.
ಕಳೆದ ವರ್ಷದ ಜುಲೈನಲ್ಲಿ ಸಿಯಾಚಿನ್ ನ ಭಾರತೀಯ ಸೇನಾ ಕ್ಯಾಂಪ್ ನಲ್ಲಿ ನಡೆದ ಅಗ್ನಿ ದುರಂತದಲ್ಲಿ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅಸುನೀಗಿದ್ದರು. ಅಗ್ನಿ ಕೆನ್ನಾಲಿಗೆಯಿಂದ ಇತರರನ್ನು ರಕ್ಷಿಸುವ ವೇಳೆ ಅಂಶುಮನ್ ಸಿಂಗ್ ಹುತಾತ್ಮರಾಗಿದ್ದರು. ಕೆಲ ದಿನಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಮರಣೋತ್ತರ ಗೌರವ ನೀಡಿದ್ದರು.
ಇದೀಗ ಸುದ್ದಿವಾಹಿನಿ ಜತೆ ಮಾತನಾಡಿದ ಅಂಶುಮಾನ್ ತಂದೆ ರವಿಪ್ರತಾಪ್ ಸಿಂಗ್ ಅವರು, ತಮ್ಮ ಪುತ್ರನಿಗೆ ಮರಣೋತ್ತರವಾಗಿ ಸರ್ಕಾರ ನೀಡಿದ ಕೀರ್ತಿ ಚಕ್ರವನ್ನು ಅವರ ಸೊಸೆ ಸ್ಮೃತಿ ಅವರ ಫೋಟೋ ಆಲ್ಬಮ್, ಬಟ್ಟೆ ಮತ್ತು ಇತರ ನೆನಪುಗಳೊಂದಿಗೆ ಗುರುದಾಸ್‌ಪುರದ ಮನೆಗೆ ತೆಗೆದುಕೊಂಡು ಹೋದರು ಎಂದು ಹೇಳಿಕೊಂಡಿದ್ದಾರೆ.
“ನಾವು ಅಂಶುಮಾನ್ ಅವರನ್ನು ಸ್ಮೃತಿಯೊಂದಿಗೆ ವಿವಾಹ ಮಾಡಿದ್ದೆವು. ಮದುವೆಯ ನಂತರ, ಅವರು ನನ್ನ ಮಗಳೊಂದಿಗೆ ನೋಯ್ಡಾದಲ್ಲಿ ಇರಲು ಪ್ರಾರಂಭಿಸಿದರು. ಜುಲೈ 19, 2023 ರಂದು, ಅಂಶುಮಾನ್ ಸಾವಿನ ಬಗ್ಗೆ ನಮಗೆ ಮಾಹಿತಿ ಬಂದಾಗ, ನಾನು ಅವರನ್ನು ಲಕ್ನೋಗೆ ಕರೆದಿದ್ದೆ, ಆದರೆ ಅಂತ್ಯಕ್ರಿಯೆಯ ನಂತರ ಅವಳು (ಸ್ಮೃತಿ) ಗುರುದಾಸ್‌ಪುರಕ್ಕೆ ಹಿಂತಿರುಗಿದಳು” ಎಂದು ರವಿ ಪ್ರತಾಪ್ ಸಿಂಗ್ ತಿಳಿಸಿದರು.
ಅಂಶುಮಾನ್ ಅವರಿಗೆ ಕೀರ್ತಿ ಚಕ್ರ ನೀಡಿದಾಗ, ಆತನ ತಾಯಿ ಮತ್ತು ಸ್ಮೃತಿ ಗೌರವ ಸ್ವೀಕರಿಸಲು ತೆರಳಿದ್ದರು. ರಾಷ್ಟ್ರಪತಿಗಳು ನನ್ನ ಮಗನ ತ್ಯಾಗಕ್ಕೆ ಕೀರ್ತಿ ಚಕ್ರ ನೀಡಿ ಗೌರವಿಸಿದರು, ಆದರೆ ನನಗೆ ಅದನ್ನು ಒಮ್ಮೆಯೂ ಮುಟ್ಟಲು ಸಾಧ್ಯವಾಗಲಿಲ್ಲ ಎಂದು ರವಿ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೆನಪಿಸಿಕೊಂಡ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ತಾಯಿ ಮಂಜು, “ಜುಲೈ 5 ರಂದು ರಾಷ್ಟ್ರಪತಿ ಭವನದಲ್ಲಿ ಸ್ಮೃತಿ ಅವರೊಂದಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದೆವು, ನಾವು ಕಾರ್ಯಕ್ರಮದಿಂದ ಹೊರಡುವಾಗ, ಸೇನಾಧಿಕಾರಿಗಳ ಹೇಳಿಕೆಯ ಮೇರೆಗೆ ನಾನು ಫೋಟೋಗಾಗಿ ಕೀರ್ತಿ ಚಕ್ರವನ್ನು ಹಿಡಿದಿದ್ದೇನೆ. ಆದರೆ ಅದರ ನಂತರ, ಸ್ಮೃತಿ ನನ್ನ ಕೈಯಿಂದ ಕೀರ್ತಿ ಚಕ್ರವನ್ನು ತೆಗೆದುಕೊಂಡಳು” ಎಂದು ಆರೋಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir: ಕಂದಕಕ್ಕೆ ಉರುಳಿದ ಸೇನಾ ವಾಹನ; ಕುಂದಾಪುರದ ಯೋಧ ಅನೂಪ್ ಹುತಾತ್ಮ
Sabarimala: ಶಬರಿಮಲೆ- ಭಕ್ತರ ಸಂಖ್ಯೆ ಹೆಚ್ಚಳ; ವ್ಯಾಪಾರಿಗಳಿಗೆ 10.87 ಲಕ್ಷ ರೂ. ದಂಡ
Rajasthan:150 ಅಡಿ ಆಳದ ಕೊಳವೆ ಬಾವಿಗೆ ಬಿದ್ದ ಮಗು; 3 ದಿನಕ್ಕೆ ಕಾಲಿಟ್ಟ ರಕ್ಷಣಾ ಕಾರ್ಯ
Maharashtra: ಬಾಸ್ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.