MK ಅಳಗಿರಿ ಯೂ ಟರ್ನ್: ಸ್ಟಾಲಿನ್ ನಾಯಕತ್ವ ಒಪ್ಪುವೆ, ಪಕ್ಷ ಸೇರುವೆ
Team Udayavani, Aug 30, 2018, 3:28 PM IST
ಚೆನ್ನೈ : ಎರಡು ದಿನಗಳ ಹಿಂದೆ ಎಂ ಕೆ ಸ್ಟಾಲಿನ್ ಡಿಎಂಕೆ ಪಕ್ಷಾಧ್ಯಕ್ಷರಾಗಿ ಆಯ್ಕೆಯಾಗಿದ್ದಾಗ ಬೆದರಿಕೆ ಹಾಕಿದ್ದ ಸಹೋದರ ಎಂ ಕೆ ಅಳಗಿರಿ ಈಗ ತನ್ನ ರಾಗ ಬದಲಾಯಿಸಿದ್ದಾರೆ.
ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷವನ್ನು ತಾನು ಮತ್ತೆ ಸೇರಲು ಸಿದ್ಧನಿದ್ದೇನೆ ಎಂದು ಎಂದು ಈ ಹಿಂದೆ ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಉಚ್ಚಾಟಿತರಾಗಿದ್ದ ಅಳಗಿರಿ ಹೇಳಿದ್ದಾರೆ.
“ನಾವು ಡಿಎಂಕೆ ಸೇರಲು ಸಿದ್ಧರಿದ್ದೇವೆ; ಆದರೆ ಆತ (ಸ್ಟಾಲಿನ್) ನಮ್ಮನ್ನು ಸ್ವೀಕರಿಸಲು ಸಿದ್ಧನಿಲ್ಲ’ ಎಂದು ಅಳಗಿರಿ ಇಂದು ಮಧುರೆಯಲ್ಲಿ ಹೇಳಿದರು.
ಸ್ಟಾಲಿನ್ ಎರಡು ದಿನಗಳ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂದರ್ಭದಲ್ಲೇ ಅಳಗಿರಿ “ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೆ ಅದರ ಪರಿಣಾಮವನ್ನು ಪಕ್ಷ ಎದುರಿಸಬೇಕಾದೀತು’ ಎಂಬ ಎಚ್ಚರಿಕೆ ನೀಡಿದ್ದರು.
ಈ ಹಿಂದೆ ಅಳಗಿರಿ, “ಸ್ಟಾಲಿನ್ ಪಕ್ಷದ ಕಾರ್ಯಾಧ್ಯಕ್ಷರಾಗಿರುವ ಹೊರತಾಗಿಯೂ ಕಾರ್ಯವೆಸಗುತ್ತಿಲ್ಲ’ ಎಂದು ಟೀಕಿಸಿದ್ದರು. ಇದೀಗ ಅಳಗಿರಿ “ಸೆ.5ರಂದು ರಾಲಿ ಯಲ್ಲಿ ಸೇರುವ ಪಕ್ಷದ ಎಲ್ಲ ಜಿಲ್ಲಾ ಕಾರ್ಯದರ್ಶಿಗಳೊಂದಿಗೆ ಸಮಾಲೋಚಿಸಿ ಮುಂದಿನ ಕಾರ್ಯತಂತ್ರವನ್ನು ರೂಪಿಸುತ್ತೇನೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್‌ಪೋಸ್ಟ್‌ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್‌ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.