ಗಾಯಕಿ ಮೀಷಾಗೆ 100 ಕೋಟಿ ಮಾನಹಾನಿ ನೊಟೀಸ್ ನೀಡಿದ ಅಲಿ ಝಫರ್
Team Udayavani, Apr 25, 2018, 7:11 PM IST
ಹೊಸದಿಲ್ಲಿ : ತನ್ನ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ತನ್ನ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿರುವ ಕಾರಣಕ್ಕೆ ಪ್ರಖ್ಯಾತ ಪಾಕ್ ಗಾಯಕಿ ಮೀಷಾ ಶಫಿ ಅವರಿಗೆ ಪಾಕ್ ಗಾಯಕ, ನಟ ಅಲಿ ಝಫರ್ ನೂರು ಕೋಟಿ ರೂ.ಗಳ ಮಾನಹಾನಿ ನೊಟೀಸ್ ಜಾರಿ ಮಾಡಿರುವುದಾಗಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಇದೇ ವೇಳೆ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ಅಲಿ ಝಫರ್ ಸಂಪೂರ್ಣ ಸುಳ್ಳೆಂದು ಹೇಳಿದ್ದಾರೆ. ಅಲಿ ಝಫರ್ ಅವರು 2010ರಲ್ಲಿ ತೇರೇ ಬಿನ್ ಲಾಡೆನ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದವರಾಗಿದ್ದಾರೆ.
ಮೀಷಾ ಶಫೀ ಅವರು ತಾನು ಮಾಡಿರುವ ಸುಳ್ಳು ಆರೋಪಗಳಿಗಾಗಿ ಕ್ಷಮೆ ಯಾಚಿಸಬೇಕು ಎಂದು ಕೂಡ ಅಲಿ ಝಫರ್ ಆಗ್ರಹಿಸಿದ್ದಾರೆ.
ಇದಕ್ಕೆ ಉತ್ತರವೆಂಬಂತೆ ಮೀಷ ಅವರು ಟ್ವಿಟರ್‌ನಲ್ಲಿ ತಾನು ಗೊತ್ತುಪಡಿಸಿಕೊಂಡಿರುವ ವಕೀಲರ ಮಾಹಿತಿ ನೀಡಿದ್ದು ತನ್ನ ವಿಷಯದಲ್ಲಿನ ಯಾವುದೇ ತಾಜಾ ಮಾಹಿತಿಳಿಗೆ ಮಾಧ್ಯಮದವರು ಅವರನ್ನು ಸಂಪರ್ಕಿಸುವಂತೆ ಕೋರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.