ಇಪಿಎಫ್ ಹೂಡಿಕೆ ಮೇಲೆ ತೆರಿಗೆ: ಎ. 1ರಿಂದ ಜಾರಿ
Team Udayavani, Mar 18, 2022, 7:30 AM IST
ಹೊಸದಿಲ್ಲಿ: ನೌಕರರ ಭವಿಷ್ಯ ನಿಧಿಯ (ಇಪಿಎಫ್) ಬಡ್ಡಿ ದರವನ್ನು ಶೇ. 8.5ರಿಂದ ಶೇ. 8.1ಕ್ಕೆ ಇಳಿಸುವ ಮೂಲಕ ನೌಕರ ವರ್ಗಕ್ಕೆ ಆಘಾತ ಕೊಟ್ಟಿದ್ದ ಕೇಂದ್ರ ಸರಕಾರ ಈಗ ಮತ್ತೂಂದು ಶಾಕ್ ನೀಡಲು ಮುಂದಾಗಿದೆ.
ಯಾವುದೇ ನೌಕ ರನ ಇಪಿಎಫ್ನಲ್ಲಿನ ಹೂಡಿಕೆ ವಾರ್ಷಿಕ ಎರಡೂವರೆ ಲಕ್ಷ ರೂ. ದಾಟಿದರೆ ಆ ಹಣದ ಮೇಲೆ ತೆರಿಗೆ ಬೀಳಲಿದೆ. ತೆರಿಗೆಯ ಪ್ರಮಾಣವನ್ನು ಸರಕಾರ ತಿಳಿಸಿಲ್ಲ. ಆದರೆ ಹೊಸ ನಿಯಮ ಎ. 1ರಿಂದ ಜಾರಿಯಾಗುವ ಸಾಧ್ಯತೆಗಳಿವೆ.
ಇನ್ನು ಸರಕಾರಿ ನೌಕರರ ಇಪಿಎಫ್ ಹೂಡಿಕೆ ಮೇಲೆ ರಿಯಾಯಿತಿ ನೀಡಲಾಗಿದ್ದು, ಅವರ ಹೂಡಿಕೆಯು ವಾರ್ಷಿಕ 5 ಲಕ್ಷ ರೂ. ದಾಟಿದರೆ ಮಾತ್ರ ಆ ಮೊತ್ತದ ಮೇಲೆ ತೆರಿಗೆ ಹಾಕಲಾಗುತ್ತದೆ. ತೆರಿಗೆ ವಿಧಿಸಲೆಂದೇ ಇಪಿಎಫ್ ಖಾತೆಗಳನ್ನು ತೆರಿಗೆಗೆ ಅರ್ಹ ಹಾಗೂ ತೆರಿಗೆಗೆ ಅನರ್ಹ ಖಾತೆಗಳೆಂದು ವರ್ಗೀಕರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.