ಸೇನೆಯಲ್ಲಿ ಮತ್ತೆ ಸರಣಿ ಹನಿಟ್ರ್ಯಾಪ್ ಪ್ರಕರಣ
Team Udayavani, Jan 14, 2019, 12:55 AM IST
ಹೊಸದಿಲ್ಲಿ: ಹೆಂಗಳೆಯರ ಹೆಸರಿನಲ್ಲಿ ಭಾರತೀಯ ಯೋಧರನ್ನು ಹನಿಟ್ರ್ಯಾಪ್‌ಗೆ ಕೆಡವಿ ಅವರಿಂದ ಭಾರತೀಯ ಸೇನೆಯ ಅಮೂಲ್ಯ ಮತ್ತು ರಹಸ್ಯ ಮಾಹಿತಿಗಳನ್ನು ದೋಚುವ ಪ್ರಕರಣಗಳು ಇತ್ತೀಚೆಗೆ ಬೆಳಕಿಗೆ ಬಂದ ಬೆನ್ನಿಗೇ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಇಂಥದ್ದೇ ಮತ್ತೂಂದು ಪ್ರಕರಣ ಬಯಲಾಗಿದೆ.
ಈ ಬಾರಿ ಹನಿಟ್ರ್ಯಾಪ್‌ಗೆ ಒಳಗಾದವರು ಜೈಸಲ್ಮೇರ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಪಾಯಿ ಸೋಮವೀರ ಸಿಂಗ್. ಸದ್ಯಕ್ಕೆ ಅವರನ್ನು ಬಂಧಿಸಿ ವಿಚಾರಣೆ ಗೊಳಪಡಿಸಲಾಗಿದ್ದು, ಇವರಿಗೆ ಮೋಸ ಮಾಡಿರುವ ವ್ಯಕ್ತಿ ಭಾರತದ ಇತರೆ 50 ಸೈನಿಕರಿಗೂ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಜೈಸಲ್ಮೇರ್‌ನ ಸೇನಾ ಶಿಬಿರದ ಶಸ್ತ್ರಾಸ್ತ್ರ ಸಂಗ್ರಹಾಗಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ಸೋಮವೀರ್ ಸಿಂಗ್‌ಗೆ ಫೇಸ್‌ಬುಕ್‌ನಲ್ಲಿ ಅನಿಕಾ ಚೋಪ್ರಾ ಎಂಬಾಕೆ ಯೊಂದಿಗೆ ಸ್ನೇಹ ವಾಗಿತ್ತು. ಕಾಲಕ್ರಮೇಣ, ಈ ಸ್ನೇಹ ಸಲುಗೆಯಾಗಿ ಇದರ ಆಧಾರದಲ್ಲಿ ಆಕೆ ಕೇಳಿದ್ದ ಭಾರತೀಯ ಸೇನೆಯ ಕೆಲವು ಮಾಹಿತಿಗಳನ್ನು ಸಿಂಗ್ ನೀಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈಗಾಗಲೇ ವಿವಾಹವಾಗಿರುವ ಸಿಂಗ್, ಈಕೆಯ ಸ್ನೇಹ ಬೆಳೆಸಿದ ಬಳಿಕ ತನ್ನ ಪತ್ನಿಗೆ ವಿಚ್ಛೇದನ ನೀಡಲೂ ಮುಂದಾಗಿದ್ದರು ಎನ್ನಲಾಗಿದೆ.
ಸೇನಾ ಕ್ಯಾಪ್ಟನ್ ಎಂದಿದ್ದಳು!
ತನ್ನನ್ನು, ಸೇನಾ ನರ್ಸಿಂಗ್ ಆಸ್ಪತ್ರೆಯೊಂದರ ಕ್ಯಾಪ್ಟನ್ ಎಂದು ಹೇಳಿ ನಂಬಿಸಿದ್ದಳು ಅನಿಕಾ. ಅಲ್ಲದೆ, ಫೇಸ್‌ಬುಕ್‌ನಲ್ಲಿ ಹಸಿರು ಸೀರೆ ಉಟ್ಟು, ತೆಳ್ಳಗೆ ಬೆಳ್ಳಗಿನ, ಮುಗುಳ್ನಗುತ್ತಿರುವ ಚೆಲು ವೆಯ ಫೋಟೋವೊಂದನ್ನು ಹಾಕಿದ್ದಳು. ಆ ಫೋಟೋವನ್ನು ನೋಡಿ ಸಿಂಗ್ ಮೋಹದ ಬಲೆಯಲ್ಲಿ ಬಿದ್ದಿದ್ದ ಎನ್ನಲಾಗಿದೆ.
ಬ್ಲ್ಯಾಕ್‌ಮೇಲ್
ಈ ಖಾತೆಯನ್ನು ಪಾಕಿಸ್ಥಾನ ದಿಂದ ನಿರ್ವಹಿ ಸಲಾಗುತ್ತಿದ್ದು, ಇದರ ಅರಿವಿಲ್ಲದೆ, ಸಿಂಗ್ ಹಾಗೂ ಇತರ 50 ಭಾರತೀಯ ಯೋಧರು ಮೋಸ ಹೋಗಿದ್ದಾರೆನ್ನಲಾಗಿದೆ. ಸಿಂಗ್ ವಿಚಾರದಲ್ಲಿ, ಮೊದಲಿಗೆ ಸ್ನೇಹ ಪೂರ್ವಕವಾಗಿ ಮಾಹಿತಿ ಪಡೆದು ಅನಂತರ ಬ್ಲ್ಯಾಕ್‌ವೆುàಲ್ ಮಾಡಿ ಮಾಹಿತಿ ಪಡೆಯಲಾಗಿದೆ. ಸಿಂಗ್ ನೀಡಿದ ಕೆಲವು ಮಾಹಿತಿಗಳಿಗೆ ಹಣ ವನ್ನೂ ನೀಡಲಾಗಿದೆ ಎಂದು ಸೇನೆ ತಿಳಿಸಿದೆ.
ಪತ್ತೆಯಾಗಿದ್ದು ಹೇಗೆ?
ಅಸಲಿಗೆ, ಇದೊಂದು ಫೇಕ್ ಖಾತೆಯಾಗಿತ್ತು ಎಂಬುದು ಸೇನೆಯ ಗುಪ್ತಚರ ಇಲಾಖೆಯ ವಿವರಣೆ. ನಾಲ್ಕೈದು ತಿಂಗಳಿಂದೀಚೆಗೆ, ಜಮ್ಮುವಿನಿಂದ ಸೋಮವೀರ್ ಸಿಂಗ್‌ಗೆ ಕೆಲವು ದೂರವಾಣಿ ಕರೆಗಳು ಬರಲಾರಂಭಿಸಿದ್ದವು. ಇದನ್ನು ಗಮನಿಸಿದ್ದ ಸೇನೆಯ ಗುಪ್ತಚರ ಇಲಾಖೆ, ಸಿಂಗ್ ಅವರ ಚಲನ ವಲನಗಳ ಮೇಲೆ ನಿಗಾ ಇಟ್ಟಿತ್ತು. ಅವರ ಫೇಸ್‌ಬುಕ್ ಚಟುವಟಿಕೆಗಳನ್ನು ಅವಲೋಕಿಸಿದಾಗ ಕರ್ಮಕಾಂಡ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.