ಡಿ.15ಕ್ಕೆ ಅಗ್ನಿ-5 ಪರೀಕ್ಷೆ? ಬಂಗಾಲ ಕೊಲ್ಲಿಯಲ್ಲಿ ವಿಮಾನ ಹಾರಾಟಕ್ಕೆ ನಿಷೇಧ
Team Udayavani, Dec 12, 2022, 6:55 AM IST
ಹೊಸದಿಲ್ಲಿ: ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಲ್ಲಿ ಡಿ.15 ಅಥವಾ 16ರಂದು ಅಗ್ನಿ-5 ಖಂಡಾಂತರ ಕ್ಷಿಪಣಿ ಪರೀಕ್ಷೆ ನಡೆಸಲು ಭಾರತ ತೀರ್ಮಾನಿಸಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಬಂಗಾಲ ಕೊಲ್ಲಿಯಲ್ಲಿ ವಿಮಾನಗಳು ಹಾರಾಡದಂತೆ ನೋಟಿಸ್ ಟು ಏರ್‌ಮನ್/ನೋಟಿಸ್ ಟು ಏರ್ ಮಿಷನ್ಸ್ ನೀಡಲಾಗಿದೆ.
ನಾರ್ವೆಯ ಮಾರಿಟೈಮ್ ಆಪ್ಟಿಮಾ ಕಂಪೆನಿ ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಚೀನದ ಗೂಢಚರ್ಯೆ ಹಡಗು “ಯುವಾನ್ ವಾಂಗ್ 5′ ಪ್ರವೇಶ ಮಾಡಿದೆ ಎಂಬ ಮಾಹಿತಿಯ ನಡುವೆಯೇ ಈ ಪರೀಕ್ಷೆ ನಡೆಯಲಿದೆ. ಅಗ್ನಿ-5 ಉಡಾವಣೆಯ ಮಾಹಿತಿ ತಿಳಿದೇ ವಿವಿಧ ಟ್ರ್ಯಾಕಿಂಗ್ ಮತ್ತು ಕಣ್ಗಾವಲು ಸಾಧನಗಳನ್ನು ಅಳವಡಿಸಿರುವ ಚೀನದ ಪತ್ತೆದಾರಿ ಹಡಗು ಹಿಂದೂ ಮಹಾಸಾಗರ ಪ್ರವೇಶಿಸಿದೆ ಎಂದು ಹೇಳಲಾಗಿದೆ.
ವಿಶೇಷತೆಗಳೇನು?
ಅಗ್ನಿ-5 ಮೇಲ್ಮೈ ಯಿಂದ ಮೇಲ್ಮೆ„ಗೆ ಚಲಿಸುವ ಬ್ಯಾಲಿಸ್ಟಿಕ್ ಕ್ಷಿಪಣಿ. 5,000 ಕಿ.ಮೀ. ವರೆಗಿನ ಗುರಿಯನ್ನು ನಿಖರವಾಗಿ ಕ್ರಮಿಸುವ ಸಾಮರ್ಥ್ಯ
ಚೀನದ ಯಾವುದೇ ಪ್ರದೇಶಕ್ಕೆ ಸುಲಭವಾಗಿ ಕ್ರಮಿಸಬಹುದಾಗಿದೆ.
1,500 ಕೆ.ಜಿ.- ಇಷ್ಟು ತೂಕದ ಸಿಡಿತಲೆ ಹೊತ್ತೂಯ್ಯುವ ಸಾಮರ್ಥ್ಯ
50,000 ಕೆ.ಜಿ. ತೂಕ ಒಯ್ಯುವ ಸಾಮರ್ಥ್ಯ
1989 ಅಗ್ನಿ ಕ್ಷಿಪಣಿ ಸರಣಿ ಪರೀಕ್ಷೆ ಆರಂಭ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.