ಯುವಜನರಿಗೆ ಮೋದಿ ದೀಪಾವಳಿ ಕೊಡುಗೆ
Team Udayavani, Oct 21, 2022, 7:00 AM IST
ಹೊಸದಿಲ್ಲಿ: ದೇಶದ 10 ಲಕ್ಷ ಯುವಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಮೊದಲ ಹಂತವಾಗಿ ಶನಿವಾರ 75 ಸಾವಿರ ಮಂದಿಗೆ ಉದ್ಯೋಗ ಪತ್ರ ನೀಡಲಿದ್ದಾರೆ.
ವಿವಿಧ ಇಲಾಖೆಗಳ ಸಹ ಯೋಗ ದಲ್ಲಿ ಶನಿವಾರ ರೋಜ್ ಗಾರ್ ಯೋಜನೆಯ ವರ್ಚುವಲ್ ಕಾರ್ಯ ಕ್ರಮ ನಡೆಯ ಲಿದ್ದು, ಉದ್ಯೋಗ ಪತ್ರ ಹಂಚಿಕೆ ಮಾಡ ಲಾಗುತ್ತದೆ.
ಈ ಬಗ್ಗೆ ಪ್ರಧಾನಿ ಕಚೇರಿಯೇ ಮಾಹಿತಿ ನೀಡಿದ್ದು, ಈ ಹಿಂದೆ ನೀಡಿದ್ದ ಭರವಸೆಯಂತೆ ಉದ್ಯೋಗ ನೀಡಲಾಗುತ್ತಿದೆ ಎಂದು ಹೇಳಿದೆ.
ಈ ಉದ್ಯೋಗ ಮೇಳದ ಬಳಿಕ ಸಮರೋಪಾದಿಯಲ್ಲಿ 10 ಲಕ್ಷ ಮಂದಿಗೆ ಉದ್ಯೋಗ ನೀಡ ಲಾಗುತ್ತದೆ ಎಂದು ತಿಳಿಸಿದೆ.
ಸದ್ಯದಲ್ಲೇ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯ ಲಿದ್ದು, ಇದರ ಬೆನ್ನಲ್ಲೇ ಈ ಕಾರ್ಯ ಕ್ರಮ ನಡೆಸುವುದರಿಂದ ಬಿಜೆಪಿಗೆ ಅನುಕೂಲವಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.
38 ಇಲಾಖೆಗಳು :
ಒಟ್ಟಾರೆ ಕೇಂದ್ರ ಸರಕಾರದ 38 ಇಲಾಖೆಗಳು ಈ ಉದ್ಯೋಗ ಮೇಳ ದಲ್ಲಿ ಭಾಗಿಯಾಗಲಿವೆ. ಗ್ರೂಪ್ ಎ ಮತ್ತು ಬಿ (ಗೆಜೆಟೆಡ್) ಹಾಗೂ ಗ್ರೂಪ್ ಸಿ ಮತ್ತು ಡಿ (ನಾನ್-ಗೆಜೆಟೆಡ್) ಉದ್ಯೋಗಗಳನ್ನು ನೀಡ ಲಾಗು ತ್ತಿದೆ. ಅಲ್ಲದೆ ಸಶಸ್ತ್ರ ಪಡೆ, ಸಬ್ ಇನ್ಸ್ಪೆಕ್ಟರ್ಗಳು, ಕಾನ್ಸ್ಟೆàಬಲ್, ಎಲ್ಡಿಸಿ, ಸ್ಟೆನೋ, ಪಿಎ, ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತು ಎಂಟಿಎಸ್ ಸೇರಿದಂತೆ ಇತರ ಹುದ್ದೆಗಳನ್ನು ತುಂಬಲಾಗುತ್ತದೆ. ಯುಪಿಎಸ್ಸಿ, ಎಸ್ಎಸ್ಸಿ ಅಥವಾ ರೈಲ್ವೇ ನೇಮಕ ಮಂಡಳಿ ಮೂಲಕ ಈ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.