ಪರೀಕ್ಷೆಗಿನ್ನು ಎಐ ಕೆಮರಾ ಕಣ್ಣು; ಎಲ್ಲ ಪರೀಕ್ಷಾ ಅಕ್ರಮ ತಡೆಗೆ ಕ್ರಮ
ನೀಟ್, ಯುಜಿಸಿ ನೆಟ್ ಪರೀಕ್ಷೆ ಅಕ್ರಮಗಳ ನಡುವೆ ಯುಪಿಎಸ್‌ಸಿ ನಿರ್ಧಾರ
Team Udayavani, Jun 25, 2024, 7:25 AM IST
ಹೊಸದಿಲ್ಲಿ: ನೀಟ್-ಯುಜಿ ಮತ್ತು ಯುಜಿಸಿ ನೆಟ್ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆದು ಸಿಬಿಐ ತನಿಖೆಗೆ ಆದೇಶವಾಗಿರುವ ನಡುವೆಯೇ ಅಂತಹ ತಪ್ಪುಗಳು ಪುನರಾವರ್ತನೆ ಆಗದಂತೆ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿ ಎಸ್‌ಸಿ) ಮಹತ್ವದ ಹೆಜ್ಜೆಯನ್ನಿ ಟ್ಟಿದೆ. ಪರೀಕ್ಷೆಯಲ್ಲಿ ಅಕ್ರಮ ಗಳಾಗುವುದನ್ನು ತಡೆಯಲು ಎಐಆಧಾರಿತ ಸಿಸಿಟಿವಿ, ಆಧಾರ್ ಆಧಾರಿತ ಬೆರಳಚ್ಚು ವ್ಯವಸ್ಥೆಯಂತಹ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ
ಕೊಳ್ಳಲು ನಿರ್ಧರಿಸಿದೆ.
ಯುಪಿಎಸ್‌ಸಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿ ಕೊಳ್ಳಲು ಜೂ. 10ರಂದೇ ನಿರ್ದಿಷ್ಟ ಕಂಪೆನಿಗಳಿಂದ ಬಿಡ್ ಆಹ್ವಾನಿಸಿದೆ. ಇದರ ಮೂಲಕ ಸೇವಾ ಪರೀಕ್ಷೆಗಳನ್ನು ಯಾವುದೇ ತಪ್ಪಿಲ್ಲದೆ ನಡೆಸಲು ಸಜ್ಜಾಗಿದೆ.
ಯುಪಿಎಸ್‌ಸಿಯಡಿ ಪ್ರತೀ ವರ್ಷ 23 ಬೇರೆಬೇರೆ ಪರೀಕ್ಷೆಗಳು ನಡೆಯುತ್ತವೆ. ಪೂರ್ವಭಾವಿ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಒಟ್ಟು 10 ಲಕ್ಷ ಮಂದಿ ಸೇರಿ ಒಟ್ಟು 26 ಲಕ್ಷ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಕೇಂದ್ರದ ಎ ಮತ್ತು ಬಿ ಗುಂಪಿಗೆ ಸೇರಿದ ಹುದ್ದೆಗಳಿಗೆ ಯುಪಿಎಸ್‌ಸಿ ಆಯ್ಕೆ ನಡೆಸುತ್ತದೆ.
ದಿಲ್ಲಿಯಲ್ಲೂ ನೀಟ್ ಅಕ್ರಮ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಮಹಾ ರಾಷ್ಟ್ರದ ಇಬ್ಬರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾದ ಬೆನ್ನಲ್ಲೇ ದಿಲ್ಲಿಯಲ್ಲೂ ಅಕ್ರಮ ಪತ್ತೆಯಾಗಿದೆ. ಶಿಕ್ಷಕ ಜಲೀಲ್ ಉಮರ್‌ಖಾನ್ ಪಠಾಣ್ ಬಂಧನಕ್ಕೆ ಒಳಗಾಗಿದ್ದರೆ, ಸಂಜಯ್ ತುಕಾರಾಮ್ ಜಾಧವ್ ಪರಾರಿಯಾಗಿದ್ದಾನೆ. ಹಲವು ವಿದ್ಯಾರ್ಥಿಗಳ ಅಡ್ಮಿಟ್ ಕಾರ್ಡ್, ವಾಟ್ಸ್‌ಆ್ಯಪ್ ಚಾಟ್ ಮತ್ತು ಫೋನ್ ನಂಬರ್‌ಗಳು ದೊರೆತಿವೆ ಎಂದು ಪೊಲೀಸರು ಹೇಳಿದ್ದಾರೆ.
ಏನೇನು
ತಂತ್ರಜ್ಞಾನಗಳಿಗೆ ಆದ್ಯತೆ?
ಯುಪಿಎಸ್‌ಸಿ ಆಧಾರ್ ಕಾರ್ಡ್ ಆಧಾರಿತವಾದ ಬೆರಳಚ್ಚು ಮಾದರಿ, ಮುಖ ಗುರುತಿಸುವಂತಹ ತಂತ್ರಜ್ಞಾನ ಉಪಯೋಗಿ ಸಲು ಬಯಸಿದೆ. ಇ-ಪ್ರವೇಶ ಪತ್ರ ಪಡೆಯಲು ಕ್ಯುಆರ್ ಕೋಡ್‌ಗಳನ್ನು ಸ್ಕ್ಯಾನ್ ಮಾಡುವ ತಂತ್ರಜ್ಞಾನ ಬಳಸುವ ಗುರಿಯಿದೆ. ಸಂಪೂರ್ಣ ಪರೀಕ್ಷೆಯ ಮೇಲೆ ಎಐ ಆಧಾರಿತ ಸಿಸಿಟಿವಿಗಳ ಮೂಲಕ ಕಣ್ಗಾವಲು ಇರಿಸಲಾಗುತ್ತದೆ. ಇದರ ಮೂಲಕ ಅಭ್ಯರ್ಥಿಗಳ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಮೋಸ, ಅಸಮರ್ಪಕ ವರ್ತನೆಗಳು, ಬೇರೆಯವರ ಹೆಸರಿನಲ್ಲಿ ಪರೀಕ್ಷೆಗೆ ಹಾಜರಾಗುವುದನ್ನು ತಪ್ಪಿ ಸಲು ಗಂಭೀರ ಗಮನ ಹರಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.