ಜಯಾ ಸಾವಿಗೆ ಹೃದಯಾಘಾತವೇ ಕಾರಣ
Team Udayavani, Feb 7, 2017, 10:57 AM IST
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ಶಶಿಕಲಾ ನಟರಾಜನ್ ಪ್ರಮಾಣ ವಚನ ಸ್ವೀಕಾರ ಮಾಡುವ ಮುನ್ನವೇ ಮಾಜಿ ಮುಖ್ಯಮಂತ್ರಿ ದಿ| ಜಯಲಲಿತಾ ಅವರ ಸಾವಿನ ಕಾರಣಗಳ ಕುರಿತಂತೆ ಸ್ಪಷ್ಟನೆ ನೀಡಲು ಸ್ವತಃ ಅಲ್ಲಿನ ಸರಕಾರವೇ ಮುಂದಾಗಿದೆ.
ಜಯಾಗೆ ಚಿಕಿತ್ಸೆ ನೀಡಿದ ಬ್ರಿಟನ್ ವೈದ್ಯ ಡಾ| ರಿಚರ್ಡ್ ಬೀಲೆ, ಅಪೋಲೋ ಆಸ್ಪತ್ರೆಯ ವೈದ್ಯರು ಮತ್ತು ಮದ್ರಾಸ್ ಮೆಡಿಕಲ್ ಕಾಲೇಜಿನ ವೈದ್ಯರು ಒಂದು ಗಂಟೆಗೂ ಹೆಚ್ಚು ಕಾಲ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. “ಜಯಾ ಸಾವಿಗೆ ಹೃದಯಾಘಾತವೇ ಕಾರಣ ವಾಗಿದ್ದು, ಯಾರೂ ವಿಷವಿಕ್ಕಿರಲಿಲ್ಲ’ ಎಂದು ವೈದ್ಯರು ಹೇಳಿದ್ದಾರೆ.
ವಿಶೇಷವೆಂದರೆ ಪತ್ರಿಕಾಗೋಷ್ಠಿ ಕರೆದ ಬಗ್ಗೆ ವರದಿಗಾರರು ಪ್ರಶ್ನಿಸಿದಾಗ, ಇದು ಸರಕಾರಿ ಯೋಜಿತ ಪತ್ರಿಕಾಗೋಷ್ಠಿ ಎಂದೂ ವೈದ್ಯರು ಉತ್ತರ ನೀಡಿದ್ದಾರೆ. ಆದರೆ ಇದರ ಹಿಂದೆ ಯಾವುದೇ ರಾಜಕೀಯ ಒತ್ತಡವಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ವೈದ್ಯರ ಜತೆ ಸೇರಿ ಡಾ| ರಿಚರ್ಡ್ ಬೀಲೆ ಸ್ಪಷ್ಟನೆ.
ಅನುಮಾನ: ಜಯಾ ಮಾತನಾಡುತ್ತಿರಲಿಲ್ಲ.
ಹೃದಯಾಘಾತವಾಗುವ ವರೆಗೆ ಜಯಾ ಮಾತನಾಡುತ್ತಲೇ ಇದ್ದರು, ಡಿ. 4ರ ಸಂಜೆ ವರೆಗೆ ಮಾತನಾಡಿದ್ದರು. ಜಯಾಗೆ ಇಷ್ಟವಾದ ಟಿವಿ, ಇಷ್ಟವಾದ ಆಹಾರ, ಪುನರ್‌ವಸತಿ, ನನ್ನ ಮಕ್ಕಳ ಬಗ್ಗೆ ಮಾತನಾಡಿದ್ದೆ. ಇವುಗಳೇ ಅವರ ಜತೆ ಆಡಿದ್ದ ಕಡೆಯ ಮಾತುಗಳು.
ಅನುಮಾನ: ಪ್ರಜ್ಞೆಯೇ ಇರಲಿಲ್ಲ.
ಜಯಾಗೆ ಏನಾಗುತ್ತಿದೆ ಎಂಬುದು ಪೂರ್ಣ
ವಾಗಿ ಗೊತ್ತಿತ್ತು. ಬ್ರಿಟನ್‌ಗೆ ಕರೆದೊಯ್ಯುವ ಪ್ರಸ್ತಾವವಿದೆ ಎಂದು ಹೇಳಿದ್ದೆ. ವೈದ್ಯನಾಗಿ “ನಾನೇ ಇನ್‌ಚಾರ್ಜ್’, ನಿಮ್ಮನ್ನು ಕರೆದೊಯ್ಯುತ್ತೇನೆ ಎಂದಾಗ, “ಇಲ್ಲ, ಈ ರಾಜ್ಯಕ್ಕೆ ನಾನೇ ಇನ್‌ಚಾರ್ಜ್’ ಎಂದಿದ್ದರು.
ಅನುಮಾನ: ಸಾವಿಗೆ ಹೃದಯಾಘಾತ ಕಾರಣವಲ್ಲ.
ದೇಹದ ಅಂಗಗಳಿಗೆ ಆಗಿದ್ದ ಹಾನಿಯಿಂದಾಗಿ ಉಂಟಾಗಿದ್ದ ಸೋಂಕು ಮತ್ತು ಹೃದಯಾ ಘಾತವೇ ಅವರು ಬೇಗನೇ ಸಾವನ್ನಪ್ಪಲು ಕಾರಣವಾಯಿತು. ಹೃದಯಾಘಾತವಾದ ಬಳಿಕ 20 ನಿಮಿಷಗಳವರೆಗೆ ಅವರನ್ನು ಕಾಪಾಡಲು ಪ್ರಯತ್ನಿಸಿದ್ದೆವು, ಆದರೆ ಆಗಲಿಲ್ಲ.
ಅನುಮಾನ: ಚಿಕಿತ್ಸೆಗೆ ಬೇರೆಡೆ ಕರೆದೊಯ್ಯ ಬಹುದಿತ್ತು.
ಲಂಡನ್‌ಗೆ ಕರೆದೊಯ್ಯಲು ಹಲವು ಬಾರಿ ಯತ್ನಿಸಿದರೂ ಜಯಾ ಒಪ್ಪಲಿಲ್ಲ.
ಅನುಮಾನ: ಯಾರಿಗೂ ಜಯಲಲಿತಾ ಅವರನ್ನು ತೋರಿಸಿರಲಿಲ್ಲ.
ಹಂಗಾಮಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಆಸ್ಪತ್ರೆಗೆ ಬಂದಾಗ, ಗ್ಲಾಸ್ ಗೋಡೆ ಯಿಂದಲೇ ಜಯಾರನ್ನು ನೋಡಿದ್ದರು. ಆಗ ಜಯಾ ಥಮ್ಸ್ ಅಪ್ ಸಂಕೇತ ಮಾಡಿ, ಚೆನ್ನಾಗಿದ್ದೇನೆ ಎಂದಿದ್ದರು. ಆಸ್ಪತ್ರೆಗೆ ಗವರ್ನರ್ ಅವರೇ ಹೋದರೂ ಮುಖ ತೋರಿಸಿರಲಿಲ್ಲ ಎಂಬ ಆರೋಪಕ್ಕೆ ಪ್ರತ್ಯುತ್ತರವಿದು.
ಅನುಮಾನ: ಜಯಾ ಸಹಿ ಹಾಕಿರಲಿಲ್ಲ.
ರಾಜ್ಯದ ಉಪ ಚುನಾವಣೆ ವೇಳೆ ದಾಖಲೆಗಳಿಗೆ ಜಯಾ ಅವರೇ ಸಹಿ ಮಾಡಿದ್ದರು. ಈ ಸ್ಪಷ್ಟನೆಗೆ ಕಾರಣ ಅವರು ಸಹಿ ಮಾಡಿರಲಿಲ್ಲ, ಬದಲಾಗಿ ಹೆಬ್ಬೆರಳ ಗುರುತು ಪಡೆಯಲಾಗಿತ್ತು ಎಂಬ ಆರೋಪ.
ಅನುಮಾನ: ಜಯಾಗೆ ವಿಷ ನೀಡಲಾಗಿತ್ತು.
ಜಯಲಲಿತಾ ಅವರಿಗೆ ವಿಷ ಉಣಿಸಿ ರಲಿಲ್ಲ. ಅವರ ಸಾವಿನ ಹಿಂದೆ ಯಾವುದೇ ನಿಗೂಢ ಕಾರಣಗಳೂ ಇಲ್ಲ. ಇದರಲ್ಲಿ ಯಾವುದೇ ಸಂಚೂ ಇಲ್ಲ.
ಅನುಮಾನ: ಜಯಾ ಚಿಕಿತ್ಸೆಗೆ ಕೋಟ್ಯಂತರ ರೂ. ಖರ್ಚಾಗಿದೆ.
ಜಯಲಲಿತಾ ಚಿಕಿತ್ಸೆಗಾಗಿ ಅವರ ಮನೆಯವರೇ 5.5 ಕೋಟಿ ರೂಪಾಯಿ ನೀಡಿದ್ದರು. ಈ ಹಣವನ್ನು ಬಳಸಿಕೊಂಡೇ ಚಿಕಿತ್ಸೆ ನೀಡಲಾಗಿತ್ತು.
ಅನುಮಾನ: ಜಯಾ ಕಾಲು ಕತ್ತರಿಸಲಾಗಿತ್ತು.
ಇಲ್ಲ, ಜಯಾ ಆಸ್ಪತ್ರೆಯಲ್ಲಿ ಇದ್ದ 75 ದಿನಗಳೂ ಆಕೆಯ ಕಾಲು ಕತ್ತರಿಸಲಾಗಿರಲಿಲ್ಲ.
ಅನುಮಾನ: ಮುಖದ ಮೇಲೆ ಗಾಯವಾಗಿತ್ತು.
ಮುಖದ ಮೇಲೆ ಮೂರು ಚುಕ್ಕೆಗಳಿ ದ್ದವು. ಆದರೆ ಅವು ತೀರಾ ಆಳದಲ್ಲಿರಲಿಲ್ಲ. ಅವು ಯಾವಾಗ ಆಗಿದ್ದವು ಎಂಬುದು ಜಯಾ ಅವರಿಗೇ ಗೊತ್ತಿರಲಿಲ್ಲ.
ಅನುಮಾನ: ತುಟಿ ದಪ್ಪವಾಗಿತ್ತು.
ಹೌದು, ತುಟಿ ದಪ್ಪವಾಗಿದ್ದು ಸತ್ಯ. ಇದಕ್ಕೆ ಕಾರಣ ಟ್ರೆಚೋಸ್ಟಮಿ ಎಂಬ ಚಿಕಿತ್ಸೆ. ಅಂದರೆ, ಉಸಿರಾಡಲು ಅನುವಾಗಲಿ ಎಂದು ಬಾಯಿಯಿಂದಲೇ ಪೈಪ್ ಅಳವಡಿಸುವ ಚಿಕಿತ್ಸೆ ಇದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
IPL Auction 2025: ಇಂದು, ನಾಳೆ ಐಪಿಎಲ್ ಬೃಹತ್ ಹರಾಜು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Channapatna; ಜನಾದೇಶಕ್ಕೆ ತಲೆಬಾಗುತ್ತೇನೆ, ಪಲಾಯನ ಮಾಡಲ್ಲ: ನಿಖಿಲ್
Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.