300 ಕಾಲೇಜುಗಳು ಬಂದ್?
Team Udayavani, Dec 3, 2017, 6:25 AM IST
ಹೊಸದಿಲ್ಲಿ: ನಿರೀಕ್ಷಿತ ಮಟ್ಟದಲ್ಲಿ ದಾಖಲಾತಿ ಸಾಧಿಸದ ದೇಶದ ಸುಮಾರು 300 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಿಸಲು ಇಂಜಿನಿಯರಿಂಗ್ ಕಾಲೇಜುಗಳನ್ನು ನಿಯಂತ್ರಿಸುವ ಅಖೀಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಚಿಂತನೆ ನಡೆಸಿದೆ. ಶೀಘ್ರವೇ ಆ ಕಾಲೇಜುಗಳಿಗೆ ಈ ಸಂಬಂಧ ಸೂಚನೆ ನೀಡಲಾಗುತ್ತದೆ.
ಕಳೆದ ಮೂರು ವರ್ಷಗಳಿಂದ ಈ ಖಾಸಗಿ ಕಾಲೇಜುಗಳು ಸರಾಸರಿಯಾಗಿ ಶೇ.30ರಷ್ಟು ದಾಖಲಾತಿಯನ್ನೂ ಸಾಧಿಸಿಲ್ಲವಾದ್ದರಿಂದ ಆ ಕಾಲೇಜುಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇತ್ತೀಚೆಗೆ, ಉತ್ತಮ ಮಟ್ಟದಲ್ಲಿ ದಾಖಲಾತಿ ಮಾಡಿಕೊಳ್ಳದ ಸುಮಾರು 500 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಮೇಲೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನಿಗಾ ವಹಿಸಿದೆ. ಇದಲ್ಲದೆ, ನಿರೀಕ್ಷಿತ ಮಟ್ಟದಲ್ಲಿ ದಾಖಲಾತಿ ಸಾಧಿಸದ ಕಾಲೇಜುಗಳಿಗೆ ಈಗಾಗಲೇ ಸೂಚನೆ ಹೊರಡಿಸಿರುವ ಎಐಸಿಟಿಇ, ಮುಂದಿನ ವರ್ಷದಿಂದ ಯಾವುದೇ ದಾಖಲಾತಿ ಮಾಡಿಕೊಳ್ಳದಂತೆ ಹಾಗೂ ಈಗಿರುವ ತಮ್ಮ ಕಾಲೇಜುಗಳ ಸ್ಥಾನಮಾನವನ್ನು ವಿಜ್ಞಾನ ಕಾಲೇಜು ಅಥವಾ ರಜಾಕಾಲದ ಅಧ್ಯಯನ ಕೇಂದ್ರಗಳೆಂದು ಬದಲಾಯಿಸುವ ಬಗ್ಗೆಯೂ ಆಲೋಚಿ ಸುವಂತೆ ಸೂಚಿಸಿದೆ ಎನ್ನಲಾಗಿದೆ.
ಎಐಸಿಟಿಇ ವೆಬ್‌ಸೈಟ್ ಪ್ರಕಾರ, ದೇಶದಲ್ಲಿ ಸುಮಾರು 3,000 ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಿವೆ. ಇವುಗಳ ಒಟ್ಟಾರೆ ದಾಖಲಾತಿ ಪ್ರಮಾಣ 13.56 ಲಕ್ಷದಷ್ಟಿದೆ. ಇವುಗಳಲ್ಲಿ ಸುಮಾರು 800 ಕಾಲೇಜುಗಳಿಗೆ ತಮ್ಮಲ್ಲಿನ ಶೇ. 50ರಷ್ಟು ಸೀಟುಗಳನ್ನೂ ತುಂಬಿಸಲು ಸಾಧ್ಯವಾಗದಂಥ ಪರಿಸ್ಥಿತಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.