ಮದುವೆಯಾಗಲು ಒತ್ತಾಯಿಸಿದ ಪ್ರೇಯಸಿಯನ್ನು ಕೊಂದು ಶವ ಬಿಸಾಕಿದ!
Team Udayavani, Jun 1, 2021, 9:40 AM IST
ಮುಂಬೈ: ಆದಷ್ಟು ಬೇಗ ಮದುವೆಯಾಗು ಎಂದು ಒತ್ತಾಯ ಮಾಡುತ್ತಿದ್ದ ಪ್ರೇಯಸಿಯ ಕಿರಿಕಿರಿ ತಾಳಲಾರದೆ ವ್ಯಕ್ತಿಯೋರ್ವ ಆಕೆಯನ್ನು ಕೊಲೆ ಮಾಡಿದ ಘಟನೆ ನವೀ ಮುಂಬೈನಲ್ಲಿ ನಡೆದಿದೆ.
ಮೇ.29ರಂದು ಪನ್ವೇಲ್ ನಲ್ಲಿ ಯುವತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಪೊಲೀಸರು ದೇಹವನ್ನು ಪೋಸ್ಟ್ ಮಾರ್ಟಮ್ ಗೆ ಕಳುಹಿಸಿ, ತನಿಖೆ ಆರಂಭಿಸಿದ್ದರು. ಆದರೆ ಯಾವುದೇ ಐಡಿ ಅಥವಾ ಡಾಕ್ಯುಮೆಂಟ್ ಇಲ್ಲದ ಕಾರಣ ಮೃತದೇಹವನ್ನು ಗುರುತಿಸಲು ಕಷ್ಟವಾಗಿತ್ತು.
ರವಿವಾರ, ಸ್ಥಳೀಯ ಆಟೋ ಚಾಲಕರೊಬ್ಬರು ತನಗೆ ದಾರಿಯಲ್ಲಿ ಸಿಕ್ಕ, ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಕಟ್ಟಿದ್ದ ಪರ್ಸ್, ಆಧಾರ್ ಕಾರ್ಡ್ ಮತ್ತು ಮಹಿಳೆಯ ಬಟ್ಟೆಯ ಕಟ್ಟನ್ನು ಪೊಲೀಸರಿಗೆ ತಂದೊಪ್ಪಿಸಿದ್ದರು. ಅದೇ ದಿನ ಸಾವನ್ನಪ್ಪಿದ ಯುವತಿಯ ಸೋದರನು ಮೃತದೇಹವನ್ನು ಗುರುತಿಸಿದ್ದ.
ಇದನ್ನೂ ಓದಿ:ಸಿನಿಮಾ ಅವಕಾಶ ಹೆಸರಲ್ಲಿ ಸತತ ಅತ್ಯಾಚಾರ: ಬಾಲಿವುಡ್ ನ 9 ಮಂದಿಯ ವಿರುದ್ಧ ಮಾಡೆಲ್ ದೂರು
ಯುವತಿಯ ಸಹೋದರನನ್ನು ವಿಚಾರಣೆ ಮಾಡಿದಾಗ, ತಂಗಿಗೆ ಪನ್ವೇಲ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಚಂದ್ರಕಾಂತ್ ಗಾಯ್ಕರ್ ಎಂಬಾತನ ಜೊತೆ ಪ್ರೇಮ ಸಂಬಂಧವಿದ್ದು, ಮೊಬೈಲ್ ಫೋನ್ ಸಂಭಾಷಣೆಯಲ್ಲಿ ಅವರಿಬ್ಬರು ಗಲಾಟೆ ಮಾಡುತ್ತಿದ್ದನ್ನು ತಾನು ಕೇಳಿದ್ದೇನೆ ಎಂದಿದ್ದ.
ಪೊಲೀಸರು ಚಂದ್ರಕಾಂತ್ ನನ್ನು ಕೂಡಲೇ ಕರೆಸಿ ವಿಚಾರಣೆ ನಡೆಸಿದ್ದಾರೆ. ತಾನು ಕೃತ್ಯ ನಡೆಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಯುವತಿಯನ್ನು ಕಳೆದ ಆರು ತಿಂಗಳಿನಿಂದ ಪ್ರೀತಿಸುತ್ತಿದ್ದು, ವಿವಾಹವಾಗಲು ಪೀಡಿಸುತ್ತಿದ್ದಳು. ಇದರಿಂದ ಬೇಸತ್ತ ಚಂದ್ರಕಾಂತ್ ಆಕೆಗೆ ಕೆಟಮೈನ್ ಇಂಜೆಕ್ಷನ್ ನೀಡಿ ಆಕೆಯನ್ನು ಕೊಲೆ ಮಾಡಿದ್ದಾನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.