90 ನಿಮಿಷಗಳಲ್ಲಿ ಗುರಿ ಸಾಧಿಸಿ, ಸಿಗರೇಟು ಸೇದಿದೆವು!
ಬಾಲಕೋಟ್ ಕಾರ್ಯಾಚರಣೆ ಬಗ್ಗೆ ಐಎಎಫ್ ಪೈಲಟ್‌ಗಳ ಮಾತು
Team Udayavani, Jun 26, 2019, 5:36 AM IST
ಗ್ವಾಲಿಯರ್: ‘ಪಾಕಿಸ್ತಾನದ ಬಾಲಕೋಟ್‌ನಲ್ಲಿ ಜೈಶ್-ಎ-ಮೊಹಮ್ಮದ್ ಉಗ್ರರ ಮೇಲಿನ ದಾಳಿಯನ್ನು ಕೇವಲ 90 ನಿಮಿಷಗಳ ಅವಧಿಯಲ್ಲಿ ಪೂರ್ಣಗೊಳಿಸಿದ್ದೆವು. ನಮ್ಮ ಕುಟುಂಬದ ಸದಸ್ಯರಿಗೂ ಈ ಬಗ್ಗೆ ಸುಳಿವು ನೀಡಿರರಲಿಲ್ಲ. ಮಿಷನ್ ಮುಕ್ತಾಯದ ಬಳಿಕ ನೆಮ್ಮದಿಯಿಂದ ಸಿಗರೇಟು ಸೇದಿ ಹೊಗೆ ಬಿಟ್ಟೆವು.’
-ಹೀಗೆಂದು ಹೆಮ್ಮೆಯಿಂದ ಹೇಳಿಕೊಂಡದ್ದು ದಾಳಿಯಲ್ಲಿ ಪಾಲ್ಗೊಂಡಿದ್ದ ವಾಯುಪಡೆಯ ಪೈಲಟ್‌ಗಳು. ತಮ್ಮ ಹೆಸರು ಬಹಿರಂಗಪಡಿಸಲು ಇಚ್ಛಿಸದ ಈ ಪೈಲಟ್‌ಗಳು ಅಂದಿನ ದಾಳಿಯ ವಿವರವನ್ನು ಬಿಚ್ಚಿಟ್ಟಿದ್ದಾರೆ. ಫೆ.14ರಂದು ಪುಲ್ವಾಮಾ ದಾಳಿಯಲ್ಲಿ 40 ಮಂದಿ ಸಿಆರ್‌ಪಿಎಫ್ ಯೋಧರ ಹತ್ಯೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿರುವ ಬಾಲಕೋಟ್‌ನಲ್ಲಿದ್ದ ಉಗ್ರ ಸಂಘಟನೆಯ ಶಿಬಿರಗಳನ್ನು ನಿರ್ದಾಕ್ಷಿಣ್ಯವಾಗಿ ಫೆ.27ರಂದು ನಾಶಗೊಳಿಸಲಾಗಿತ್ತು.
ಪತ್ನಿಯ ಪ್ರಶ್ನೆಗೆ ಉತ್ತರಿಸಲಿಲ್ಲ: ಅತ್ಯಂತ ರಹಸ್ಯವಾಗಿಯೇ ನಿರ್ಣಯಿಸಲಾಗಿದ್ದ ಈ ಕಾರ್ಯಾಚರಣೆಯ ಬಗ್ಗೆ ನಮ್ಮ ಕುಟುಂಬದ ಆಪ್ತರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಬಹಿರಂಗವಾಗುತ್ತಲೇ ಪತ್ನಿ ಈ ಬಗ್ಗೆ ನನ್ನಲ್ಲಿ ಪ್ರಶ್ನೆ ಮಾಡಿ, ದಾಳಿಯಲ್ಲಿ ನೀವೂ ಭಾಗಿಯಾಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಳು. ಅದಕ್ಕೆ ಏನೂ ಉತ್ತರಿಸದೇ ನಿದ್ದೆ ಮಾಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಎಲ್ಒಸಿ ದಾಟಿದೆವು
8 ವರ್ಷಗಳಲ್ಲಿಯೇ ಮೊದಲ ಬಾರಿಗೆ ಪಾಕಿಸ್ತಾನದ ನೆಲದೊಳಕ್ಕೆ ನುಗ್ಗಿ ನಡೆಸಿದ ದಾಳಿ ಬಗ್ಗೆ ಮತ್ತೂಬ್ಬ ಸ್ಕ್ವ್ಯಾಡ್ರನ್ ಲೀಡರ್ ವಿವರ ನೀಡಿದರು. ‘ಗಡಿ ನಿಯಂತ್ರಣ ರೇಖೆಯ ಮೂಲಕ ಹಲವು ಯುದ್ಧ ವಿಮಾನಗಳನ್ನು ನುಗ್ಗಿಸಿದೆವು. ಕೇವಲ 2 ದಿನಗಳ ಹಿಂದಷ್ಟೇ ದಾಳಿ ಬಗ್ಗೆ ನಮಗೆ ಸೂಚನೆ ಬಂದಿತ್ತು.’ ಎಂದಿದ್ದಾರೆ. ‘ಫೆಬ್ರವರಿ 25ರಂದು ಬೆಳಗ್ಗೆ 4 ಗಂಟೆಗೆ ಮಿರಾಜ್ 2000 ಯುದ್ಧ ವಿಮಾನಕ್ಕೆ ಸ್ಪೈಸ್ 2000 ಮಿಸೈಲ್ಗಳನ್ನು ಲೋಡ್ ಮಾಡಲಾಯಿತು. ಉಗ್ರ ಸಂಘಟನೆಯ ತರಬೇತಿ ಶಿಬಿರಗಳು ಇರುವ ಸ್ಥಳವನ್ನು ಏರ್‌ಕ್ರಾಫ್ಟ್ಗೆ ಅಪ್‌ಲೋಡ್ ಮಾಡಲಾಯಿತು. ಬೆಳಗ್ಗೆ 2 ಗಂಟೆಗೆ ನಾವು ಹಾರಾಟ ಶುರು ಮಾಡಿವು’ ಎಂದಿದ್ದಾರೆ.
ದಿನಚರಿ ಬದಲಾಗಲಿಲ್ಲ
ಕಠಿಣಾತಿ ಕಠಿಣ ಕಾರ್ಯಾಚರಣೆ ಹೊರತಾಗಿಯೂ ಐಎಎಫ್ನ ಹಿರಿಯ ಅಧಿಕಾರಿಗಳ ಫೆ.26ರ ದಿನಚರಿಯಲ್ಲಿ ಬದಲಾಗಲಿಲ್ಲ ಎಂದು ಐತಿಹಾಸಿಕ ಸಾಧನೆಯ ಚಿತ್ರಣ ನೀಡಿದ ಸ್ಕ್ವಾಡರ್ನ್ ಲೀಡರ್ ಹೇಳುತ್ತಿದ್ದಂತೆ, ಅವರ ಮಾತುಗಳಲ್ಲಿದ್ದ ಹೆಮ್ಮೆ ಗೋಚರಿಸಿತು. ಯಾರಿಗೂ ಅನುಮಾನ ಬಾರದೇ ಇರಲಿ ಎಂದು ದೇಶದ ಪೂರ್ವ ಭಾಗಕ್ಕೆ ತೆರಳಿ ಅಲ್ಲಿಂದ ಕಾಶ್ಮೀರಕ್ಕೆ ಹೋದೆವು ಎಂದಿದ್ದಾರೆ. ಉಗ್ರ ಸಂಘಟನೆಯ ತರಬೇತಿ ಶಿಬಿರ ನಾಶ ಮಾಡಿದ ಬಳಿಕ ಒಂದರ ಮೇಲೊಂದು ಸಿಗರೇಟು ಸೇದಿ ನಿರಾಳರಾದೆವು ಎಂದಿದ್ದಾರೆ ಪೈಲಟ್‌ಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
ISRO: ಬಾಹ್ಯಾಕಾಶ ಯೋಜನೆಯ ಪ್ರತಿ 1.ರೂ.ಗೂ ಭಾರತಕ್ಕೆ2.52 ರೂ. ಲಾಭ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Financial Status: 42,000 ಕೋಟಿ ರೂ. ಸಾಲದ ಸುಳಿಯಲ್ಲಿ ಎಸ್ಕಾಂಗಳು!
Flights: ಇನ್ಮುಂದೆ ವಿಮಾನಗಳಲ್ಲಿ 7 ಕೆ.ಜಿ. ಮೀರದ ಕೇವಲ 1 ಬ್ಯಾಗ್‌ಗಷ್ಟೇ ಅವಕಾಶ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.