ಅಭಿನಂದನ್ ಗೇಮ್ ಆ್ಯಪ್
ವಾಯುಪಡೆ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್
Team Udayavani, Aug 1, 2019, 5:18 AM IST
ನವದೆಹಲಿ: ಭಾರತೀಯ ವಾಯುಪಡೆಯ (ಐಎಎಫ್) ಕಾರ್ಯಾಚರಣೆಗಳನ್ನು ಹೋಲುವ ‘ಏರ್ ಫೋರ್ಸ್: ಎ ಕಟ್ ಅಬವ್’ ಎಂಬ ಮೊಬೈಲ್ ಗೇಮ್ ಆ್ಯಪ್ ಒಂದನ್ನು ಭಾರತೀಯ ವಾಯುಪಡೆ, ಬುಧವಾರ ಲೋಕಾರ್ಪಣೆಗೊಳಿಸಿದೆ. ಆ್ಯಂಡ್ರಾಯ್ಡ ಹಾಗೂ ಐಒಎಸ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅದರಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ದಮಾನ್ ಹೋಲುವ ಪಾತ್ರವಿದೆ. ಬಾಲಕೋಟ್ ದಾಳಿಯ ವೇಳೆ ಪಾಕಿಸ್ತಾನದ ಸೇನೆಗೆ ಸಿಕ್ಕಿಹಾಕಿಕೊಂಡು ಆನಂತರ ಬಿಡುಗಡೆಯಾಗಿದ್ದರು.
ಏನಿದರ ವಿಶೇಷ?: ಐಒಎಫ್ ನಡೆಸುವ ವಾಯುದಾಳಿಯ ಕಾರ್ಯಾಚರಣೆಗಳನ್ನು ಗೇಮ್‌ನಲ್ಲಿ ಅಳವಡಿಸಲಾಗಿದೆ. ಇದನ್ನು ಆಡುವವರು ಐಎಎಫ್ನ ಯುದ್ಧ ವಿಮಾನಗಳಾದ ಸುಖೋಯ್, ಮಿಗ್-17, ಮಿಡ್-ಏರ್ ಫ‌್ಯುಯೆಲ್ ಟ್ಯಾಂಕರ್ ಇತ್ಯಾದಿ ಮಾದರಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆಟ ಆರಂಭಕ್ಕೂ ಮುನ್ನ ಅವುಗಳ ಚಾಲನಾ ತರಬೇತಿ ಪಡೆಯಬಹುದು. ಉದಾಹರಣೆಗೆ, ಗಂಟೆಗೆ 830 ಕಿ.ಮೀ. ವೇಗದಲ್ಲಿ ಹಾರುವ ಹಾಕ್ 132 ವಿಮಾನ ತರಬೇತಿಯನ್ನು ಪಡೆದು ಆನಂತರ ಅದನ್ನು ಗೇಮ್‌ನಲ್ಲಿ ಬಳಸಬಹುದು. ಇದರಿಂದಾಗಿ, ಐಎಎಫ್ ಯುದ್ಧ ವಿಮಾನಗಳ ತಾಂತ್ರಿಕತೆಯ ಪರಿಚಯ ಯುವಕರಿಗೆ ಸಿಗಲಿದೆ ಎಂಬ ಆಶಯ ಐಎಎಫ್ನದ್ದು. ಒಟ್ಟಿನಲ್ಲಿ, ಭಾರತೀಯ ವಾಯುಪಡೆಗೆ ಸೇರುವಂತೆ ಯುವಜನತೆಯನ್ನು ಪ್ರೇರೇಪಿಸುವ ಉದ್ದೇಶದಿಂದ ಈ ಗೇಮ್ ಬಿಡುಗಡೆಗೊಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Maharashtra Politics: ಹೋಳಾಗಿರುವ ಎನ್‌ಸಿಪಿ ಎರಡೂ ಬಣ ಶೀಘ್ರದಲ್ಲೇ ಒಂದಾಗುವ ಸಾಧ್ಯತೆ?
RSS ಭಾಗವತ್‌ರ ಮಂದಿರ ಮಸೀದಿ ಹೇಳಿಕೆಗೆ ಈಗ “ಪಾಂಚಜನ್ಯ’ ಸಮರ್ಥನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test; ಸಿಡ್ನಿ ಸಂಘರ್ಷಕ್ಕೆ ಭಾರತ ಸಿದ್ಧ :ರೋಹಿತ್-ಗಂಭೀರ್ ಮನಸ್ತಾಪ ತೀವ್ರ?
ಜೈಲಲ್ಲಿ ತಾರತಮ್ಯ ತಪ್ಪಿಸಲು ಕೇಂದ್ರದಿಂದ ಕೈಪಿಡಿ ತಿದ್ದುಪಡಿ
Lalu Prasad Yadav: “ಐಎನ್‌ಡಿಐಎ’ಗೆ ಬರೋದಿದ್ದರೆ ನಿತೀಶ್‌ಗೆ ಸ್ವಾಗತ
Dawood Ibrahim: 23 ವರ್ಷಗಳ ಹಿಂದೆ ಖರೀದಿಸಿದ್ದ ದಾವೂದ್ ಆಸ್ತಿ ಈಗ ವರ್ಗಾವಣೆ
Udupi; ಗೀತಾರ್ಥ ಚಿಂತನೆ 144: ವೇದಗಳಿಗೆ ಇನ್ನೊಂದು ಅಪೌರುಷೇಯವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.