ಪ್ರಯಾಣಿಕರು ಇನ್ನು ಅತಿಥಿಗಳು: ಏರ್ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ
Team Udayavani, Jan 28, 2022, 7:15 AM IST
ಹೊಸದಿಲ್ಲಿ: ಕೇಂದ್ರ ಸರಕಾರದ ಸ್ವಾಮ್ಯದಲ್ಲಿ ಇದ್ದ ಏರ್ ಇಂಡಿಯಾ 69 ವರ್ಷಗಳ ಬಳಿಕ ಟಾಟಾ ಸನ್ಸ್‌ಗೆ ಹಸ್ತಾಂತರವಾಗಿದೆ. ಹೊಸ ವ್ಯವಸ್ಥೆಯಲ್ಲಿ ಹೇಗಿರಬೇಕು ಎಂಬ ಬಗ್ಗೆ ಆಡಳಿತ ಮಂಡಳಿ ಏರ್ ಇಂಡಿಯಾ ಉದ್ಯೋಗಿಗಳಿಗೆ ಸೂಚನೆ ನೀಡಿದೆ.
ಏರ್ ಇಂಡಿಯಾವನ್ನು ಸ್ವಾಧೀಪಡಿಸಿಕೊಂಡ ತತ್‌ಕ್ಷಣ ಬದಲಾವಣೆಗಳ ಪರ್ವ ಆರಂಭವಾಗಿದೆ. “ಪ್ರಯಾಣಿಕರು ಇನ್ನು ಅತಿಥಿಗಳು’ ಎಂದು ಟಾಟಾ ಗೌರವಾಧ್ಯಕ್ಷ ರತನ್ ಟಾಟಾ ಅವರ ವಿಶೇಷ ಮುದ್ರಿತ ಸಂದೇಶ ಪ್ರಸಾರವಾಗಿದೆ. ಸರಿಯಾದ ಸಮಯಕ್ಕೆ ಟೇಕಾಫ್-ಲ್ಯಾಂಡಿಂಗ್ ಆಗಬೇಕು, ಪ್ರಯಾಣಕ್ಕೆ 10 ನಿಮಿಷ ಮೊದಲೇ ವಿಮಾನದ ಬಾಗಿಲು ಮುಚ್ಚಲು ಕ್ರಮ ಕೈಗೊಳ್ಳುವಂತೆ ಸಿಬಂದಿಗೆ ಸೂಚಿಸಲಾಗಿದೆ.
ಮುಂದಿನ ಏಳು ದಿನಗಳಲ್ಲಿ ವರ್ಚಸ್ಸು, ಮನೋವೃತ್ತಿ, ಗ್ರಹಿಕೆ ಬದಲಾಗಬೇಕು ಎಂದು ಸೂಚಿಸ ಲಾಗಿದ್ದು, ನಾಲ್ಕು ವಿಮಾನಗಳಲ್ಲಿ ಊಟದ ವ್ಯವಸ್ಥೆ ಆಮೂಲಾಗ್ರ ಬದಲಾವಣೆ ಜಾರಿಗೊಳಿಸಲಾಗಿದೆ. ಗುರು ವಾರದಿಂದಲೇ ಅನ್ವಯವಾಗು ವಂತೆ ಮುಂಬಯಿ- ಬೆಂಗಳೂರು, ಮುಂಬಯಿ-ದಿಲ್ಲಿ (2 ವಿಮಾನ), ಮುಂಬಯಿ- ಅಬುಧಾಬಿ ವಿಮಾನ ಗಳಲ್ಲಿ ಊಟದ ವ್ಯವಸ್ಥೆ ಬದಲಾಗಿದೆ. ಸಿಬಂದಿ ಅತ್ಯುತ್ತಮವಾಗಿ ಕಾಣುವಂತೆ ಡ್ರೆಸ್ ಮಾಡಬೇಕು ಮತ್ತು ನಿಯಮ ಪಾಲನೆ ಮಾಡಬೇಕು ಎಂದು ಆದೇಶಿಸಲಾಗಿದೆ.
ಸಾಲ ನೀಡಲು ಬ್ಯಾಂಕ್‌ಗಳ ಉಮೇದು :
ಭಾರತೀಯ ಸ್ಟೇಟ್ ಬ್ಯಾಂಕ್ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಟಾಟಾ ಸನ್ಸ್‌ಗೆ ಸಾಲ ನೀಡಲು ಮುಂದಾಗಿದೆ. ಏರ್ ಇಂಡಿಯಾ ಮತ್ತೆ ಮೂಲ ಮಾಲಕನ ತೆಕ್ಕೆಗೆ ಬಂದಿರುವುದರಿಂದ ಬ್ಯಾಂಕ್‌ಗಳ ಒಕ್ಕೂಟ ಈ ನಿರ್ಧಾರ ಪ್ರಕಟಿಸಿದೆ. ಸಾಲದ ಜತೆಗೆ ದುಡಿ ಯುವ ಬಂಡವಾಳ (ವರ್ಕಿಂಗ್ ಕ್ಯಾಪಿಟಲ್)ವನ್ನು ಟಾಟಾಕ್ಕೆ ನೀಡಲು ಮುಂದಾಗಿವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಒಕ್ಕೂಟದಲ್ಲಿದ್ದು, ಇನ್ನೂ ಹಲವು ಬ್ಯಾಂಕ್‌ಗಳು ಸಾಲ ನೀಡಲು ಮುಂದೆ ಬಂದಿವೆ.
ಪ್ರಧಾನಿ ಜತೆಗೆ ಭೇಟಿ :
ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಗುರು ವಾ ರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅನಂತರ ಏರ್ ಇಂಡಿಯಾದ ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಅಧಿ ಕಾರಿಗಳ ಜತೆಗೆ ಸಮಾಲೋಚನೆ ನಡೆಸಿದ್ದಾರೆ. 69 ವರ್ಷಗಳ ಬಳಿಕ ಟಾಟಾ ಸನ್ಸ್ ತೆಕ್ಕೆಗೆ ಮರಳಿ ಏರ್ ಇಂಡಿಯಾ ಬಂದಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಜತೆಗೆ ಸಂಸ್ಥೆಯ ಉದ್ಯೋಗಿಗಳಿಗೆ ಮುಂದಿನ ದಿನಗಳಲ್ಲಿ ಉತ್ತಮ ದಿನಗಳು ಬರಲಿವೆ ಎಂದೂ ಇ-ಮೈಲ್ ಕಳುಹಿಸಿದ್ದಾರೆ.
ಟಾಟಾ ಸನ್ಸ್‌ಗೆ ಸಿಕ್ಕಿದ್ದೇನು? :
ಶೇ. 100 :
ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಲಿ., ಏರ್ ಇಂಡಿಯಾ ಸ್ಯಾಟ್ಸ್ ಏರ್‌ಪೋರ್ಟ್ ಸರ್ವಿಸಸ್ ಪ್ರೈ,ಲಿ.ಯ ಶೇ. 50 ಷೇರುಗಳು
18,000 ಕೋಟಿ ರೂ. : ಟಾಟಾ ಕೇಂದ್ರಕ್ಕೆ ನೀಡಿದ ಮೊತ್ತ
117- ವಿಶಾಲ ವಿಮಾನಗಳು
24- ಸಣ್ಣ ವಿಮಾನಗಳು
4,400 : ದೇಶೀಯ ಲ್ಯಾಂಡಿಂಗ್ ವ್ಯವಸ್ಥೆಗಳು
1,800: ಅಂತಾರಾಷ್ಟ್ರೀಯ ಲ್ಯಾಂಡಿಂಗ್ ವ್ಯವಸ್ಥೆಗಳು ಮುಂಬಯಿ, ಹೊಸದಿಲ್ಲಿಯಲ್ಲಿ ಇರುವ ಏರ್ ಇಂಡಿಯಾ ಕಂಪೆನಿಯ ಕಟ್ಟಡಗಳು
1.10 ಲಕ್ಷ ಕೋಟಿ ರೂ. :
ಹತ್ತು ವರ್ಷಗಳ ಅವಧಿಯಲ್ಲಿ ಕೇಂದ್ರ ಸರಕಾರವು ಏರ್ ಇಂಡಿಯಾಕ್ಕೆ ನೀಡಿದ್ದ ಮೊತ್ತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.