Air India: ವಿಮಾನದಲ್ಲಿ ನ.17ರಿಂದ ಹಲಾಲ್ ಪ್ರಮಾಣಿತ ಮಾಂಸಾಹಾರಿ ಖಾದ್ಯ ಸ್ಥಗಿತ
Team Udayavani, Nov 12, 2024, 7:45 AM IST
ಹೊಸದಿಲ್ಲಿ: ಏರ್ ಇಂಡಿಯಾ ವಿಮಾನಗಳಲ್ಲಿ ನ.17ರಿಂದ ಅನ್ವಯವಾಗುವಂತೆ ಹಲಾಲ್ ಪ್ರಮಾಣೀಕೃತ ಮಾಂಸಾಹಾರಿ ಖಾದ್ಯಗಳನ್ನು ಹಿಂದೂ ಮತ್ತು ಸಿಕ್ಖ್ ಸಮುದಾಯದವರಿಗೆ ಪೂರೈಸಲಾಗುವುದಿಲ್ಲ. ಇಂಥ ಆಹಾರ ಬೇಕಿದ್ದರೆ ಟಿಕೆಟ್ ಕಾಯ್ದಿರಿಸುವ ವೇಳೆ “ಮುಸ್ಲಿಂ ಮೀಲ್’ ಎಂದು ನಮೂದಿಸಬೇಕಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ಪ್ರಕಟಿಸಿದೆ.
ಸೌದಿ ರಾಷ್ಟ್ರದ ವಲಯಗಳಲ್ಲಿ ಮತ್ತು ಹಜ್ ವಿಮಾನಗಳಲ್ಲಿ ಹಲಾಲ್ ಪ್ರಮಾಣೀಕೃತ ಖಾದ್ಯಗಳನ್ನು ನೀಡಲಾಗುತ್ತದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಕಳೆದ 10 ವರ್ಷಗಳಿಂದ ವಿಮಾನಯಾನ ಸಂಸ್ಥೆಗಳಲ್ಲಿ ಹಲಾಲ್ ಆಹಾರ ವಿತರಣೆಯನ್ನು ಅನೇಕ ಹಿಂದೂ ಮತ್ತು ಸಿಕ್ಖ್ ಸಂಘಟನೆಗಳು ಸತತವಾಗಿ ಪ್ರಶ್ನಿಸುತ್ತಿದ್ದವು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.