ಏರ್‌ಇಂಡಿಯಾ ವಿಮಾನ ಬರೋಬ್ಬರಿ 8 ಗಂಟೆ ತಡ
Team Udayavani, Nov 16, 2019, 3:51 PM IST
ಹೊಸದಿಲ್ಲಿ: ರೈಲುಗಳು, ಬಸ್ಸುಗಳು ಗಂಟೆ ಗಟ್ಟಲೆ ತಡವಾಗುವುದು ಗೊತ್ತು. ಆದರೆ ವಿಮಾನಗಳು? ಎಲ್ಲೂ ಇಲ್ಲ. ಆದರೆ ಹೀಗೆ ವಿಳಂಬ ಪ್ರಯಾಣಕ್ಕೆ ಕುಖ್ಯಾತಿ ಪಡೆದಿರುವ ಏರ್ ಇಂಡಿಯಾ ವಿಮಾನವೊಂದು ಬರೋಬ್ಬರಿ 8 ಗಂಟೆ ತಡವಾಗಿದೆ.
ಅಷ್ಟೇ ಅಲ್ಲ, ತಡವಾದ ಹೊತ್ತಿಗೆ ಪ್ರಯಾಣಿಕರನ್ನು ನಾಲ್ಕು ಬಾರಿ ಇಳಿಸಿ, ಹತ್ತಿಸಿ ಮಾಡಲಾಗಿದೆ! ಸುಮಾರು 150 ಮಂದಿ ಪ್ರಯಾಣಿಕರಿದ್ದು, ಅಕ್ಷರಶಃ ತಾಳ್ಮೆಗೆಟ್ಟಿದ್ದರಂತೆ.
ಪುಣೆಯಿಂದ ದೆಹಲಿಗೆ ತೆರಳಬೇಕಿದ್ದ ಏರ್ ಇಂಡಿಯಾ 854 ವಿಮಾನವೇ ಇಷ್ಟೊಂದು ತಡವಾದ ವಿಮಾನ. ಗುರುವಾರ ಈ ವಿಮಾನ ಪುಣೆಯಿಂದ ರಾತ್ರಿ 10.15ಕ್ಕೆ ಹೊರಟು ಮಧ್ಯರಾತ್ರಿ 12.25 ಕ್ಕೆ ದಿಲ್ಲಿಗೆ ಬಂದಿತ್ತು.
ಬಳಿಕ ಕೆಲವೇ ಸಮಯದ ಅಂತರದಲ್ಲಿ ಅದು ಮತ್ತೆ ಪುಣೆಗೆ ಹೊರಡಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ವಿಮಾನ ಹೊರಡಲೇ ಇಲ್ಲ.
ಪ್ರಯಾಣಿಕರನ್ನು ಕೂರಿಸಿ-ಇಳಿಸುವುದನ್ನು ವಿಮಾನ ಸಿಬಂದಿ ನಾಲ್ಕು ಬಾರಿ ಮಾಡಿದರು. ಅಂತೂ ಇಂತೂ ಕೊನೆಗೆ ಶುಕ್ರವಾರ ಬೆಳಗ್ಗೆ 8.15ಕ್ಕೆ ವಿಮಾನ ಮತ್ತೆ ಪುಣೆಗೆ ತಲುಪಿದೆ.
ವಿಮಾನ ಹೀಗೆ ವಿಳಂಬವಾದ್ದರಿಂದ ಪುಣೆಯಿಂದ ದಿಲ್ಲಿಗೆ ಬಂದು ಅಂ.ರಾ. ವಿಮಾನಗಳನ್ನು ಹತ್ತಬೇಕಿದ್ದ ಹಲವು ಪ್ರಯಾಣಿಕರಿಗೆ ವಿಮಾನಗಳು ತಪ್ಪಿವೆ. ಈ ಕಾರಣಕ್ಕೆ ಹಲವು ಪ್ರಯಾಣಿಕರು ಏರ್ ಇಂಡಿಯಾ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.