ಕಲ್ಲಿಕೋಟೆ ದುರಂತ: ಮಂಗಳೂರು ವಿಮಾನ ದುರಂತದಷ್ಟೇ ತೀವ್ರವಾದ ಘಟನೆ
Team Udayavani, Aug 7, 2020, 9:40 PM IST
ಕಲ್ಲಿಕೋಟೆ: ದುಬೈನಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸಂಜೆ 7.45ರ ಸುಮಾರಿಗೆ ದೊಡ್ಡ ಅಪಘಾತ ಸಂಭವಿಸಿದೆ.
ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿದ್ದು, ಇದು ದಶಕಗಳ ಹಿಂದೆ ನಡೆದ ಮಂಗಳೂರು ವಿಮಾನ ದುರಂತವನ್ನು ನೆನಪಿಸಿದೆ.
ಈ ವಿಮಾನದಲ್ಲಿ 180 ಪ್ರಯಾಣಿಕರು ಇದ್ದರು ಎಂದು ತಿಳಿದು ಬಂದಿದ್ದು, ಪೈಲಟ್ ಸಾವಿನ ಸುದ್ದಿ ಹೊರಬರುತ್ತಿದೆ. 2 ಮಕ್ಕಳು ಸಾವನ್ನಪ್ಪಿದ್ದರು ಎಂಬ ಮಾಹಿತಿಯೂ ಇದೆ.
ವಿಮಾನದ ಮುಂಭಾಗದ ಭಾಗವು ಭಾರೀ ಪ್ರಮಾಣದಲ್ಲಿ ಹಾನಿಗೊಂಡಿದೆ. ಅಪಘಾತದ ತೀವ್ರತೆಗೆ ವಿಮಾನ ಎರಡು ತುಂಡುಗಳಾಗಿದೆ. ಗಾಯಗೊಂಡ ಜನರನ್ನು ಆಸ್ಪತ್ರೆಗೆ ಕರೆದೊಯ್ಯುಲು ಆ್ಯಂಬುಲೆನ್ಸ್‌ಗಳು ಈಗಾಗಲೇ ಆಗಮಿಸಿವೆ. ಭಾರೀ ಮಳೆಯಿಂದಾಗಿ ಈ ವಿಮಾನ ಅಪಾಘಾತಕ್ಕೆ ಈಡಾಗಿದೆ ಎಂದು ಹೇಳಲಾಗುತ್ತದೆ.
ಬಯಲು 30 ಅಡಿ ಆಳದ ಕಂದಕ
ಭಾರೀ ಮಳೆಯಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ವರದಿಗಳ ಪ್ರಕಾರ, ಈ ವಿಮಾನವು ರಾತ್ರಿ 7.38ಕ್ಕೆ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಈ ಸಮಯದಲ್ಲಿ ಭಾರಿ ಮಳೆಯಾಗುತ್ತಿತ್ತು. ಈ ಮಧ್ಯೆ ಲ್ಯಾಂಡ್ ಆದ ವಿಮಾನ ರನ್‌ವೇಗೆ ತಲುಪಿದ ಕೆಲವೇ ಕ್ಷಣದಲ್ಲಿ ರನ್ ವೇ ಇಂದ ಜಾರಿದೆ. ಬಳಿಕ ಇದು 30 ಅಡಿ ಆಳದಕ್ಕೆ ತಳ್ಳಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಲ್ಲಿಕೋಟೆ: ರನ್ ವೇನಿಂದ ಜಾರಿ ಕಮರಿಗೆ ಉರುಳಿದ ವಿಮಾನ ; ಪೈಲಟ್ ಸಹಿತ 14 ಸಾವು
ಮಂಗಳೂರಿನಲ್ಲೂ ಇದೇ ಆಗಿತ್ತು
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಬೆಳಗ್ಗೆ 6.15ಕ್ಕೆ ನಡೆದ ವಿಮಾನ ಅಪಘಾತಕ್ಕೆ ಸರಿ ಸಮಾನಾಗಿ ಈ ದುರಂತವನ್ನು ಪರಿಗಣಿಸಲಾಗುತ್ತದೆ. ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. 135 ಮಂದಿ ವಯಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. ಈ ದುರ್ಘಟನೆಯಲ್ಲಿ 8 ಮಂದಿ ಬದುಕುಳಿದಿದ್ದರು.
ಕ್ಯಾಲಿಕಟ್‌ನಂತೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ವಿಮಾನ ದುರಂತಕ್ಕೀಡಾಗಿತ್ತು. ರನ್‌ವೇಗೆ ಇಳಿದ ವಿಮಾನ ಸ್ವಲ್ಪ ದೂರ ಕ್ರಮಿಸಿ ನೋಡುತ್ತಿದ್ದಂತೆಯೇ ವಿಮಾನ ಎರಡು ತುಂಡಾಗಿ ಹೊತ್ತಿ ಉರಿದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.