ತಾಂತ್ರಿಕ ದೋಷ: ಸಮುದ್ರಕ್ಕೆ ಇಂಧನ ಸುರಿದು ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ
ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ
Team Udayavani, Feb 24, 2023, 4:07 PM IST
ತಿರುವನಂತಪುರಂ: ಸುಮಾರು 168 ಪ್ರಯಾಣಿಕರನ್ನು ಹೊತ್ತು ಕೋಝಿಕೋಡ್ ನಿಂದ ದಮ್ಮಾಮ್ ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
ಏರ್ ಇಂಡಿಯಾ ವಿಮಾನವು ಕ್ಯಾಲಿಕಟ್‌ನ ಕರಿಪುರ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 9.44 ರ ಸುಮಾರಿಗೆ ಟೇಕಾಫ್ ಆದ ಕೆಲವೇ ಹೊತ್ತಿನಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ ಅದರಂತೆ ಪೈಲೆಟ್ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆಕ್ಕೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿತ್ತು.
ಆದರೆ ವಿಮಾನ ಭೂ ಸ್ಪರ್ಶ ಮಾಡುವ ಮೊದಲು ವಿಮಾನದಲ್ಲಿದ್ದ ಹೆಚ್ಚಿನ ಇಂಧನವನ್ನು ಅರೇಬಿಯನ್ ಸಮುದ್ರಕ್ಕೆ ಸುರಿಸಲಾಗಿತ್ತು ಬಳಿಕ ಭೂಸ್ಪರ್ಶ ಮಾಡಲಾಯಿತು ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
ವಿಮಾನದ ಹಿಂಭಾಗ ರನ್ ವೇಗೆ ಸ್ಪರ್ಶವಾಗಿತ್ತು :
ಕೋಝಿಕೋಡ್ ನಿಂದ ವಿಮಾನ ಟೇಕ್ ಆಫ್ ಆಗುವ ವೇಳೆ ವಿಮಾನದ ಹಿಂಭಾಗ ರನ್ ವೇಗೆ ಸ್ಪಷವಾಗಿದೆ ಎಂದು ಹೇಳಲಾಗಿದ್ದು ಇದರಿಂದಲೇ ತಾಂತ್ರಿಕ ದೋಷ ಕಂಡುಬಂದಿರಬಹುದು ಎಂದು ಹೇಳಲಾಗಿದೆ ಅದರಂತೆ ಭೂ ಸ್ಪರ್ಶ ಮಾಡುವ ವೇಳೆ ಹೆಚ್ಚಿನ ಅವಘಡ ಸಂಭವಿಸುವ ಮುನ್ನೆಚ್ಚರಿಕೆಯಿಂದಾಗಿ ವಿಮಾನದಲ್ಲಿದ್ದ ಹೆಚ್ಚಿನ ಇಂಧನವನ್ನು ಸಮುದ್ರಕ್ಕೆ ಸುರಿಯಲಾಗಿದೆ ಎನ್ನಲಾಗಿದೆ.
ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ:
ತಾಂತ್ರಿಕ ದೋಷ ಕಂಡುಬಂದ ಕೂಡಲೇ ವಿಮಾನದ ಪೈಲೆಟ್ ವಿಮಾನಯಾನ ಸಂಸ್ಥೆಗೆ ಮಾಹಿತಿ ನೀಡಿದ್ದು ಕೂಡಲೇ ಹತ್ತಿರದ ವಿಮಾನ ನಿಲ್ದಾಣವಾದ ತಿರುವನಂತಪುರಂ ವಿಮಾನ ನಿಲ್ದಾಣಕ್ಕೆ ಮಾಹಿತಿ ನೀಡಲಾಗಿದೆ ಕೂಡಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲಾ ತುರ್ತು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು, ಒಂದು ವೇಳೆ ಭೂಸ್ಪರ್ಶವಾಗುವ ಸಂದರ್ಭದಲ್ಲಿ ಬೆಂಕಿ ಅನಾಹುತ ಏನಾದರು ಸಂಭವಿಸಿದರೆ ಅದಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು, ಅದರಂತೆ ಮುನ್ನೆಚ್ಚರಿಕೆ ವಹಿಸಿದ ಪೈಲೆಟ್ ವಿಮಾನದಲ್ಲಿದ್ದ ಹೆಚ್ಚುವರಿ ಇಂಧನವನ್ನು ಸಮುದ್ರಕ್ಕೆ ಸುರಿದಿದ್ದಾರೆ, ಅದೃಷ್ಟವಶಾತ್ ಯಾವುದೇ ತೊಂದರೆ ಇಲ್ಲದೆ ವಿಮಾನ ಭೂಸ್ಪರ್ಶವಾಗಿದ್ದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಇದನ್ನೂ ಓದಿ: ಮದುಮಗನಿಗೆ ಹಳದಿ ಹಚ್ಚುತ್ತಿದ್ದಂತೆ ವ್ಯಕ್ತಿ ಸಾವು; ಮದುವೆ ಮನೆಯಲ್ಲಿ ಆಗಿದ್ದೇನು?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.