ಏರ್ ಇಂಡಿಯಾ ವಿಮಾನ ಒಪ್ಪಂದದ ಬಗ್ಗೆ ಹೊಸ ಮಾಹಿತಿ : 470 ಅಲ್ಲ 840 ವಿಮಾನ!!
Team Udayavani, Feb 17, 2023, 6:20 AM IST
ಹೊಸದಿಲ್ಲಿ: ಟಾಟಾ ಸನ್ಸ್ ಮಾಲಕತ್ವದ ಏರ್ ಇಂಡಿಯಾ ಕಂಪೆನಿ ಬುಧವಾರ ಬೋಯಿಂಗ್ ಮತ್ತು ಏರ್‌ಬಸ್ ಕಂಪೆನಿಗಳ ಜತೆಗೆ 470 ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಮುಂದಿನ ಒಂದು ದಶಕದಲ್ಲಿ ಎರಡೂ ಕಂಪೆನಿಗಳಿಂದ ಹೆಚ್ಚುವರಿಯಾಗಿ 370 ವಿಮಾನಗಳನ್ನು ಪಡೆದುಕೊಳ್ಳಲು ಅವಕಾಶ ಇದೆ. ಈ ಮೂಲಕ 840 ವಿಮಾನಗಳ ಖರೀದಿ ಒಪ್ಪಂದ ಮಾಡಿ ದಂತೆ ಆಗಿದೆ ಎಂದು ಏರ್ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ನಿಪುಣ್ ಅಗರ್ವಾಲ್ ಹೇಳಿದ್ದಾರೆ.
ಈ ಮೂಲಕ ಕಂಪೆನಿ ದಾಖಲೆ ನಿರ್ಮಿಸಿದೆ ಎಂದು ಅವರು ಲಿಂಕ್ಡ್ ಇನ್‌ನಲ್ಲಿ ಬರೆದುಕೊಂಡಿ ರುವ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. “ಏರ್ ಬಸ್‌ನಿಂದ 250 ಹಾಗೂ ಬೋಯಿಂಗ್‌ನಿಂದ 220 ವಿಮಾನಗಳು ಸೇರಿ ಒಟ್ಟು 470 ವಿಮಾನಗಳ ಖರೀದಿ ಅಂತಿಮಗೊಂಡಿದೆ. ಇದರ ಹೊರತಾಗಿ ಮುಂದಿನ ಒಂದು ದಶಕದಲ್ಲಿ 2 ಕಂಪೆನಿಗಳಿಂದ ಹೆಚ್ಚುವರಿಯಾಗಿ 70 ವಿಮಾನಗಳ ಖರೀದಿಯ ಆಯ್ಕೆ ಮತ್ತು ಹಕ್ಕುಗಳನ್ನು ಏರ್ ಇಂಡಿಯಾ ಪಡೆದುಕೊಂಡಿದೆ’ ಎಂದು ಮಾಹಿತಿ ನೀಡಿದ್ದಾರೆ.
ನಿರ್ವಹಣೆ ಬಗ್ಗೆ: ಜಿಇ ಏರೋಸ್ಪೇಸ್, ರೋಲ್ಸ್- ರಾಯ್ಸ, ಮತ್ತು ಸಿಎಫ್ಎಂ ಇಂಟರ್‌ನ್ಯಾಶನಲ್ ಕಂಪೆನಿಗಳೊಂದಿಗೆ ವಿಮಾನಗಳ ಎಂಜಿನ್‌ಗಳ ನಿರ್ವಹಣೆ ಮತ್ತು ಉಸ್ತುವಾರಿಗಾಗಿ ಏರ್ ಇಂಡಿಯಾ ದೀರ್ಘಾವಧಿ ಒಪ್ಪಂದ ಮಾಡಿ ಕೊಂಡಿದೆ’ ಎಂದು ಹೇಳಿದ್ದಾರೆ.
“ಆಧುನಿಕ ವಿಮಾನ ಯಾನ ಇತಿಹಾಸದಲ್ಲೇ ವಿಮಾನ ಯಾನ ಸಂಸ್ಥೆಯಿಂದ ಅತೀ ಹೆಚ್ಚು ವಿಮಾನಗಳ ಖರೀದಿ ಒಪ್ಪಂದಗಳಲ್ಲಿ ಇದು ಒಂದಾಗಿದೆ.
17 ವರ್ಷಗಳಲ್ಲೇ ಏರ್ ಇಂಡಿಯಾ ಕಂಪೆನಿಯು ವಿಮಾನಗಳ ಖರೀದಿ ಒಪ್ಪಂದ ಮಾಡಿಕೊಂಡಿರು ವುದು ಇದೇ ಮೊದಲು. ಈ ವರ್ಷದ ಅಂತ್ಯದಲ್ಲಿ ಮೊದಲ ಎ350 ವಿಮಾನವು ಏರ್ ಇಂಡಿಯಾ ತೆಕ್ಕೆಗೆ ಸೇರಲಿದೆ’ ಎಂದು ನಿಪುಣ್ ಅಗರ್ವಾಲ್ ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.