ಐಎಎಫ್ ಏರ್ ಮಾರ್ಶಲ್ ನಿವೃತ್ತಿ: ಉಚ್ಚಾಟನೆ ಎಂದ ಪಾಕ್ ಮಾಧ್ಯಮ
Team Udayavani, Mar 2, 2019, 7:11 AM IST
ಹೊಸದಿಲ್ಲಿ : ಭಾರತದ ವಿರುದ್ಧ ಪಾಕ್ ಮಾಧ್ಯಮಗಳು ಸುಳ್ಳು ಸುಳ್ಳನ್ನೇ ವರದಿ ಮಾಡುತ್ತಿರುವುದಕ್ಕೆ ಹಲವಾರು ನಿದರ್ಶನಗಳು ಈಚಿನ ದಿನಗಳಲ್ಲಿ ಸಿಕ್ಕಿವೆ. ಈ ಸರಣಿಯಲ್ಲಿ ಹೊಸ ನಿದರ್ಶನವಾಗಿ ಕಳೆದ ಫೆ.28ರಂದು 39 ವರ್ಷಗಳ ಸುದೀರ್ಘ ಸೇವೆಯ ಬಳಿಕ ನಿವೃತ್ತರಾಗಿದ್ದ ಭಾರತೀಯ ವಾಯು ಪಡೆಯ ಏರ್ ಮಾರ್ಶಲ್ ಚಂದ್ರಶೇಖರನ್ ಹರಿ ಕುಮಾರ್ ಅವರನ್ನು ಭಾರತ ಸರಕಾರ ಸೇವೆಯಿಂದ ಉಚ್ಚಾಟಿಸಿದೆ ಎಂಬ ಸುಳ್ಳು ವರದಿಯನ್ನು ಪಾಕ್ ಮಾಧ್ಯಮಗಳು ಪ್ರಕಟಿಸಿದವು; ಅನಂತರ ಸತ್ಯಾಂಶ ತಿಳಿದ ಪಾಕ್ ಮಾಧ್ಯಮಗಳು ಇಂಗು ತಿಂದು ಮಂಗನಂತಾದವು.
”ಪಾಕ್ ವಾಯು ದಾಳಿಗೆ ನಲುಗಿ ಭಾರತ ತನ್ನ 2 ಫೈಟರ್ ಜೆಟ್ ಗಳನ್ನು ಕಳೆದುಕೊಂಡು ಓರ್ವ ಪೈಲಟ್ ಸೆರೆಯಾಗಿರುವುದಕ್ಕಾಗಿ ಭಾರತ ಸರಕಾರ ಏರ್ ಮಾರ್ಶಲ್ ಹರಿ ಕುಮಾರ್ ಅವರನ್ನು ಉಚ್ಚಾಟಿಸಿದೆ” ಎಂದು ಪಾಕಿಸ್ಥಾನದ “ದ ನ್ಯೂಸ್ ಇಂಟರ್ ನ್ಯಾಶನಲ್ ಮೊದಲಾಗಿ ಪ್ರಕಟಿಸಿತ್ತು. ಪಾಕಿಸ್ಥಾನದ ಹೆಚ್ಚಿನೆಲ್ಲ ಪತ್ರಿಕೆಗಳು, ನ್ಯೂಸ ವೆಬ್ ಪೋರ್ಟಲ್ ಗಳು ಈ ಸುಳ್ಳನ್ನೇ ಅನುಸರಿಸಿ ವರದಿ ಮಾಡಿದವು.
ಅದಾಗಿ ಭಾರತೀಯ ವಾಯು ಪಡೆ ಹೊರಡಿಸಿದ ತನ್ನ ಅಧಿಕೃತ ಹೇಳಿಕೆಯಲ್ಲಿ, 39 ವರ್ಷ ಸಾಧನಶೀಲ ಸೇವೆಸಲ್ಲಿಸಿದ ಏರ್ ಮಾರ್ಶಲ್ ಹರಿ ಕುಮಾರ್ ಅವರು ಫೆ.28ರಂದು ನಿವೃತ್ತರಾಗಿದ್ದಾರೆ ಎಂದು ತಿಳಿಸಿತು.
ಭಾರತೀಯ ವಾಯು ಪಡೆಗೆ 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಸಿ ಎಚ್ ಕುಮಾರ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ವಾಯುಸೇನಾ ಪದಕ, ವಿಶಿಷ್ಟ ಸೇವಾ ಪದಕ ಲಭಿಸಿತ್ತಲ್ಲದೆ ಅವರನ್ನು 2017ರ ಜನವರಿ 1ರಂದು ರಾಷ್ಟ್ರಪತಿಗಳ ಗೌರವ ಏರ್ ಫೋರ್ಸ್ ಎಡಿಸಿಯಾಗಿ ನೇಮಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu – Kashmir: ಮತ್ತೆ ಅಟ್ಟಹಾಸ ಮೆರೆದ ಉಗ್ರರು… ಇಬ್ಬರನ್ನು ಅಪಹರಿಸಿ ಹ*ತ್ಯೆ
Maharashtra: ಮತ ನೀಡಿದರೆ ಮದುವೆ ಮಾಡಿಸುವೆ: ಶರದ್ ಬಣದ ನಾಯಕ
India-Afghanistan: ಆಫ್ಘನ್ ಜೊತೆಗೆ ಬಾಂಧವ್ಯ ಪುನಃಸ್ಥಾಪನೆಗೆ ಭಾರತ ಸಜ್ಜು?
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
MUST WATCH
ಹೊಸ ಸೇರ್ಪಡೆ
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Vitla: ನಾಲ್ಕೂ ದಿಕ್ಕಿನಿಂದ ಬರುವ ರಸ್ತೆಗಳಲ್ಲಿ ಗುಂಡಿಯೋ ಗುಂಡಿ
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bellary; ವಕ್ಫ್ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ
Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.