ಏರ್ ಏಷ್ಯಾ ವಿಮಾನದಲ್ಲಿ ತಾಂತ್ರಿಕ ದೋಷ: ಬೆಂಗಳೂರಿಗೆ ಬರಬೇಕಿದ್ದ ವಿಮಾನ ಪುಣೆಯಲ್ಲೇ ಬಾಕಿ
Team Udayavani, Nov 7, 2022, 9:40 AM IST
ಪುಣೆ : ಭಾನುವಾರ ರಾತ್ರಿ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟಿದ್ದ ಏರ್ಏಷ್ಯಾ ವಿಮಾನವು ಟೇಕ್ ಆಫ್ ಆಗದೆ ಪುಣೆ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿದೆ.
ಎಲೆಕ್ಟ್ರಾನಿಕ್ ಸೆಂಟ್ರಲೈಸ್ಡ್ ಏರ್ಕ್ರಾಫ್ಟ್ ಮಾನಿಟರ್ (ECAM) ನಿಂದ ಬ್ರೇಕ್-ಹಾಟ್ ಎಚ್ಚರಿಕೆಯ ಸಿಗ್ನಲ್ ಬಂದ ಕಾರಣ ಏರ್ ಏಷ್ಯಾ ಫ್ಲೈಟ್ I5-1427 ತನ್ನ ಪ್ರಯಾಣವನ್ನು ವಿಳಂಬಿಸಿದೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ (ಡಿಜಿಸಿಎ) ಮೂಲಗಳ ಪ್ರಕಾರ, ಬ್ರೇಕ್ ಫ್ಯಾನ್ ನಲ್ಲಿ ತಾಂತ್ರಿಕ ತೊಂದರೆ ಕಂಡು ಬಂದ ಕಾರಣ ವಿಮಾನಯಾನ ತನ್ನ ಪ್ರಯಾಣವನ್ನು ವಿಳಂಬ ಮಾಡಿದೆ, ಅಲ್ಲದೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇತ್ತ ವಿಮಾನದಲ್ಲಿದ್ದ ಪ್ರಯಾಣಿಕರು ವಿಮಾನಯಾನ ವಿಳಂಬದ ಕುರಿತು ಅಸಮಾಧಾನ ತೋಡಿಕೊಂಡಿದ್ದಾರೆ.
ಇದನ್ನೂ ಓದಿ : ಅದ್ದೂರಿ ಮದುವೆಯಾಗಿ ಹಣ ದುಂದುವೆಚ್ಚ ಮಾಡದಿರಿ… ನವಜೋಡಿಗಳಿಗೆ ಪ್ರಧಾನಿ ಕಿವಿಮಾತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.