Air India ಕಟ್ಟಡಕ್ಕೆ ಈಗ ಮಹಾ ಸರಕಾರ ಮಾಲಕ! :1,601 ಕೋಟಿ ರೂ.ಗೆ ಖರೀದಿ
Team Udayavani, Mar 15, 2024, 6:30 AM IST
ಮುಂಬಯಿ: ಮುಂಬಯಿನಲ್ಲಿರುವ ಪ್ರಖ್ಯಾತ ಏರ್ ಇಂಡಿಯಾ ಕಟ್ಟಡವನ್ನು ಮಹಾರಾಷ್ಟ್ರ ಸರಕಾರ 1,601 ಕೋಟಿ ರೂ.ಗೆ ಖರೀದಿಸಿದೆ.
ನಾರಿಮನ್ ಪಾಯಿಂಟ್‌ನಲ್ಲಿರುವ ಈ ಏರ್ ಇಂಡಿಯಾ ಕಟ್ಟಡವು ಇದಕ್ಕೂ ಮುನ್ನ ಎಐ ಅಸೆಟ್ಸ್ ಹೋಲ್ಡಿಂಗ್ ಕಂಪೆನಿ ಲಿ.(ಎಐಎಎಚ್‌ಎಲ್) ಸುಪರ್ದಿಯಲ್ಲಿತ್ತು. ಗುರುವಾರ ಕೇಂದ್ರ ಸರಕಾರವು ಕಟ್ಟಡದ ಆಸ್ತಿ ಮಾಲಕತ್ವವನ್ನು ಎಐಎಎಚ್‌ಎಲ್‌ನಿಂದ ಮಹಾರಾಷ್ಟ್ರ ಸರಕಾರಕ್ಕೆ ವರ್ಗಾಯಿಸಿದೆ.
ಜೆ.ಆರ್.ಡಿ. ಟಾಟಾ ಅವರ ಕನಸಿಗೆ ಅನುಗುಣವಾಗಿ ನ್ಯೂಯಾರ್ಕ್ ಮೂಲದ ವಾಸ್ತುಶಿಲ್ಪಿ ಜಾನ್ ಬರ್ಗಿ ಅವರು ಈ ಕಟ್ಟಡವನ್ನು ವಿನ್ಯಾಸಗೊಳಿಸಿದ್ದರು. 1970ರಲ್ಲಿ ಕಟ್ಟಡ ನಿರ್ಮಿಸಲಾಯಿತು. ಈ ಕಟ್ಟಡವು ಆಗಿನ ಕಾಲದಲ್ಲಿ ಎಲಿವೇಟರ್‌ಗಳು, ನಿಯಾನ್ ಸಂಕೇತದ ಬೋರ್ಡ್‌ಗಳು, ಎರಡು ಹಂತದ ನೆಲಮಹಡಿ ಪಾರ್ಕಿಂಗ್ ವ್ಯವಸ್ಥೆ ಹೊಂದಿದ್ದ ದೇಶದ ಮೊದಲ 23 ಅಂತಸ್ತಿನ ಕಟ್ಟಡವಾಗಿತ್ತು.
ಏರ್ ಇಂಡಿಯಾದ ಆಸ್ತಿಗಳು, ಸಾಲದ ಮೇಲ್ವಿಚಾರಣೆಗಾಗಿ ಎಐಎ ಎಚ್‌ಎಲ್ ಅನ್ನು ಸ್ಥಾಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
Maharashtra poll ; ಕಣದಲ್ಲಿ ಉಳಿದಿದ್ದು 4,140 ಅಭ್ಯರ್ಥಿಗಳು
DMK ನಾಶವೇ ಹೊಸ ಪಕ್ಷದ ಉದ್ದೇಶ: ವಿಜಯ್ ವಿರುದ್ಧ ಸ್ಟಾಲಿನ್ ಕಿಡಿ
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.