ಗಣರಾಜ್ಯ ದಿನದಂದು ಮನ್ ಕಿ ಬಾತ್ ಟ್ಯಾಬ್ಲೋ
Team Udayavani, Jan 23, 2018, 6:20 AM IST
ಹೊಸದಿಲ್ಲಿ: ಪ್ರಸಕ್ತ ಸಾಲಿನ ಗಣರಾಜ್ಯ ದಿನ ಹಲವು ವಿಶೇಷಗಳನ್ನು ಒಳಗೊಂಡಿದೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ, ಇದೇ ಮೊದಲ ಬಾರಿಗೆ ಆಕಾಶವಾಣಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿಯವರ “ಮನ್ ಕಿ ಬಾತ್’ ಸ್ತಬ್ಧಚಿತ್ರ ಪ್ರದರ್ಶಿತವಾಗಲಿದೆ. ಅದೂ ಸೇರಿ ಒಟ್ಟು 23 ಸ್ತಬ್ಧಚಿತ್ರಗಳು ಇರಲಿವೆ. ದೇಶ ವಿಭಜನೆಗೊಂಡ ಬಳಿಕ ನಡೆದ ಕೋಮು ಗಲಭೆ ವೇಳೆ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಶಾಂತಿ ಸ್ಥಾಪನೆಗಾಗಿ ಕೈಗೊಂಡ ವಿವಿಧ ಕ್ರಮ ಗಳ ದೃಶ್ಯಾವಳಿ ಮತ್ತು ಪ್ರಧಾನಿ ಮೋದಿ ಅವರ ಮನ್ ಕಿ ಬಾತ್‌ನಲ್ಲಿ ಪ್ರಸ್ತಾಪ ಮಾಡಿದ ಇತರ ವಿಚಾರಗಳು ಒಳಗೊಳ್ಳಲಿವೆ ಎಂದು ಆಕಾಶವಾಣಿಯ ಅಧಿಕಾರಿ ಹೇಳಿದ್ದಾರೆ.
ಕಳೆದ ವರ್ಷದ ಮೇನಲ್ಲಿ ಗಣರಾಜ್ಯ ದಿನ ಪರೇಡ್‌ಗೆ “ಮನ್ ಕಿ ಬಾತ್’ ಸ್ತಬ್ಧಚಿತ್ರ ಮಾಡುವ ಬಗ್ಗೆ ಯೋಚನೆ ಮೂಡಿತು. ಹಲವು ಹಂತಗಳಲ್ಲಿ ಈ ಬಗ್ಗೆ ಚರ್ಚೆ ಮತ್ತು ಪ್ರಯತ್ನಗಳ ಬಳಿಕ ಟ್ಯಾಬ್ಲೋ ಮಾಡುವ ಬಗ್ಗೆ ಒಮ್ಮತಕ್ಕೆ ಬರಲಾಯಿತು ಎಂದಿದ್ದಾರೆ ಆ ಅಧಿಕಾರಿ. ವಿವಿಧ ರೀತಿಯ ಜನಸಂಖ್ಯೆ ಇರು ವ ಭಾರತದಲ್ಲಿ ಜನರು ಯಾವ ರೀತಿ ಜೀವಿ ಸುತ್ತಿದ್ದಾರೆ ಎಂಬುದರ ಬಗ್ಗೆ ಆಕಾಶವಾಣಿ ಚಿತ್ರಣ ನೀಡಲು ಪ್ರಯತ್ನಿಸುತ್ತಿದೆ ಎಂದರು.
ಕೃಷಿ ವೇಳೆ ರೇಡಿಯೋ ಆಲಿಸುತ್ತಿರುವ ರೈತರು, ಸೈನಿಕರು ಗಡಿಯಂಚಿನಲ್ಲಿರುವ ಸಂದರ್ಭ ದಲ್ಲಿ “ಜೈಮಾಲಾ’ ಕಾರ್ಯಕ್ರಮ, ಸಮುದಾಯ ಕೇಂದ್ರಗಳಲ್ಲಿ ಸಾರ್ವ ಜನಿಕರು “ಮನ್ ಕಿ ಬಾತ್’ ಆಲಿಸುತ್ತಿರುವುದು ಮೊದಲಾದವುಗಳನ್ನು ಕಟ್ಟಿಕೊಡಲಿದೆ. ಸ್ತಬ್ಧ ಚಿತ್ರದಲ್ಲಿ ಆಯಾಯ ಕಾಲಘಟ್ಟದಲ್ಲಿ ಆಕಾಶ ವಾಣಿ ತಾಂತ್ರಿಕವಾಗಿ ಮೇಲ್ದರ್ಜೆಗೆ ಏರಿರುವ ಅಂಶಗಳನ್ನೂ ಪ್ರತಿಪಾದಿಸಲಾಗಿದೆ. ಆಕಾಶ ವಾಣಿಯ ಬಳಿಕ ವಿದೇಶಾಂಗ ಇಲಾಖೆ ಆಸಿಯಾನ್ ರಾಷ್ಟ್ರಗಳ ಜತೆಗೆ ಹೊಂದಿರುವ ಸಂಬಂಧಗಳ ಬಗ್ಗೆ ಸ್ತಬ್ಧಚಿತ್ರ ಪ್ರದರ್ಶಿಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ