ಏರ್‌ಟೆಲ್ ರೋಮಿಂಗ್ ಫ್ರೀ
Team Udayavani, Feb 28, 2017, 3:50 AM IST
ನವದೆಹಲಿ: ಮೊಬೈಲ್ ಫೋನ್ ಸೇವಾ ಕ್ಷೇತ್ರದಲ್ಲಿ ಜಿಯೋ ನಡೆಸುತ್ತಿರುವ ಕ್ರಾಂತಿಯ ಪರಿಣಾಮ ಈಗ ಉಳಿದ ಕಂಪನಿಗಳ ಸೇವೆಯ ಮೇಲೆಯೂ ಬೀರುತ್ತಿದೆ. ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಉಳಿದ ಕಂಪನಿಗಳ ಬಂಪರ್ ಆಫರ್‌ಗಳ ನಡುವೆ ಇದೀಗ ಭಾರ್ತಿ ಏರ್‌ಟೆಲ್ ಹೊರ ಮತ್ತು ಒಳ ಕರೆಗಳ ಮೇಲಿನ ರೋಮಿಂಗ್ ಶುಲ್ಕ ತೆರವುಗೊಳಿಸಿದೆ.
ಏಪ್ರಿಲ್ 1ರಿಂದ ಪರಿಷ್ಕೃತ ಬದಲಾವಣೆ ಜಾರಿಗೆ ಬರಲಿದೆ. ಸ್ವತಃ ಕಂಪನಿಯೇ ಈ ಬದಲಾವಣೆಯನ್ನು “ವಾರ್ ಆನ್ ರೋಮಿಂಗ್’ ಎಂದು ಹೇಳಿಕೊಂಡಿದೆ. ತನ್ನ ಗ್ರಾಹಕರಿಗೆ ರೋಮಿಂಗ್ ಮೇಲಿನ ಶುಲ್ಕ ಹೊರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಿರುವುದಾಗಿ ಹೇಳಿದೆ.
ಮೊನ್ನೆ ಮೊನ್ನೆಯಷ್ಟೇ ಮಾರುಕಟ್ಟೆ ಪ್ರವೇಶಿಸಿರುವ ರಿಲಯನ್ಸ್ ಜಿಯೋ, ಎಸ್ಸೆಮ್ಮೆಸ್ ಮತ್ತು ಡೇಟಾ ಬಳಕೆಯ ಮೇಲೆ ಭಾರತೀಯ ಗ್ರಾಹಕರಿಗೆ ಭಾರೀ ಪ್ರಮಾಣದಲ್ಲಿ ಆಫರ್ ನೀಡಿದ ಬೆನ್ನಲ್ಲೇ ಭಾರ್ತಿ ಏರ್‌ಟೆಲ್ ರೋಮಿಂಗ್ ಶುಲ್ಕವನ್ನು ಕಡಿತಗೊಳಿಸಿ ಪರೋಕ್ಷವಾಗಿ ಸಮರಕ್ಕೆ ಇಳಿದಿದೆ. ಏರ್‌ಟೆಲ್ ಅಂತಾರಾಷ್ಟ್ರೀಯ ಕರೆಗಳ ಮೇಲಿನ ದರವನ್ನು ಶೇ.90ರಷ್ಟು ಕಡಿತಗೊಳಿಸಿ, ಪ್ರತಿ ನಿಮಿಷಕ್ಕೆ 3.ರೂ. ಶುಲ್ಕ ಪಡೆಯಲು ನಿರ್ಧರಿಸಿದೆ. ಜತೆ ಜೊತೆಗೇ ಡೇಟಾ ದರದಲ್ಲಿಯೂ ಶೇ.90ರಷ್ಟು ಕಡಿತಗೊಳಿಸಿ, ಪ್ರತಿ ಎಂಬಿಗೆ 3 ರೂ. ಪಡೆಯುವುದಾಗಿ ಹೇಳಿದೆ. ಆದರೆ ಈ ಪರಿಷ್ಕೃತ ದರ ರೋಮಿಂಗ್‌ನಲ್ಲಿ ಇರುವಾಗ ಮಾತ್ರ ಅನ್ವಯವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು
EX PM: ಪಂಚಭೂತಗಳಲ್ಲಿ ಲೀನ; ಸಕಲ ಸರ್ಕಾರಿ-ಸೇನಾ ಗೌರವದೊಂದಿಗೆ ಡಾ.ಸಿಂಗ್ ಅಂತ್ಯಕ್ರಿಯೆ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.