ಅದ್ದೂರಿಯಾಗಿ ನಡೆದ ಆಕಾಶ್ ಅಂಬಾನಿ ಮದುವೆ
Team Udayavani, Mar 10, 2019, 7:32 AM IST
ಮುಂಬೈ: ಅತ್ಯಂತ ಅದ್ದೂರಿ ವಿವಾಹವೆಂದೇ ಕುತೂಹಲಕ್ಕೆ ಕಾರಣವಾಗಿದ್ದ ಮುಖೇಶ್ ಅಂಬಾನಿ ಪುತ್ರ ಆಕಾಶ್ ಅಂಬಾನಿ ಮತ್ತು ಶ್ಲೋಕಾ ಮೆಹ್ತಾ ವಿವಾಹ ಸಮಾರಂಭ ಶನಿವಾರ ಮುಂಬೈನಲ್ಲಿ ನಡೆಯಿತು.
ಮುಂಬೈನ ಜಿಯೋ ವರ್ಲ್ಡ್ ಸೆಂಟರ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಆಕಾಶ್ ಅಂಬಾನಿ, ಶ್ಲೋಕಾ ಮೆಹ್ತಾರನ್ನು ವಿವಾಹವಾದರು. ಮದುಮಗ ಆಕಾಶ್ ಅಂಬಾನಿ ಶೇರ್ವಾನಿಯಲ್ಲಿ ಮಿಂಚಿದರೆ, ಶ್ಲೋಕಾ ಮೆಹ್ತಾ ಬ್ರೈಡಲ್ ಲೆಹಂಗಾದಲ್ಲಿ ಕಂಗೊಳಿಸಿದರು.
ಕಾರ್ಯಕ್ರಮಕ್ಕೆ ಆಯ್ದ ಗಣ್ಯರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದಶಿ ಬಾನ್ ಕಿ ಮೂನ್, ಬ್ರಿಟನ್ ಮಾಜಿ ಪ್ರಧಾನಿ ಟೋನಿ ಬ್ಲೇರ್, ಗೂಗಲ್ ಸಿಇಓ ಸುಂದರ್ ಪಿಚ್ಚ್ಯ್, ಮೈಕ್ರೋಸಾಫ್ಟ್ ಸಿಇಓ ಸತ್ಯಾ ನಾಡೆಲ್ಲಾ ಮುಂತಾದ ಅಂತಾರಾಷ್ಟ್ರೀಯ ಖ್ಯಾತಿಯ ವಿಐಪಿಗಳು ಭಾಗವಹಿಸಿದ್ದರು.
ಬಾಲಿವುಡ್ ಸೆಲೆಬ್ರೆಟಿಗಳಾದ ಶಾರುಖ್ ಖಾನ್, ಆಮಿರ್ ಖಾನ್, ಆಲಿಯಾ ಭಟ್, ರಣಬೀರ್ ಕಪೂರ್, ವಿದ್ಯಾ ಬಾಲನ್, ಕರಣ್ ಜೋಹರ್, ಅರ್ಜುನ್ ಕಪೂರ್, ಮಲೈಕಾ ಅರೋರಾ, ಕರೀಷ್ಮಾ ಕಪೂರ್ ಮುಂತಾದವರು ಅದ್ದೂರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.