ಅಖೀಲೇಶ್‌ಗೆ ಸೈಕಲ್‌


Team Udayavani, Jan 17, 2017, 3:50 AM IST

16-SP-7.jpg

ಲಕ್ನೋ: ಇಪ್ಪತ್ತೈದು ವರ್ಷಗಳ ಇತಿಹಾಸ ಉಳ್ಳ ಸಮಾಜವಾದಿ ಪಕ್ಷದೊಳಗಿನ ಆಂತರಿಕ ಕಿತ್ತಾಟದಲ್ಲಿ ಮತ್ತೆ ಅಪ್ಪನ ವಿರುದ್ಧ ಮಗನೇ ಗೆದ್ದಿದ್ದಾನೆ. ಅಪ್ಪ ಏರಿದ್ದ ಸೈಕಲ್‌ ಅನ್ನೂ ಕಿತ್ತುಕೊಂಡು, ಮುಂದಿನ ವಿಧಾನಸಭೆ ಚುನಾವಣೆ ಎದುರಿಸಲು ಪುತ್ರ ಅಖೀಲೇಶ್‌ ಯಾದವ್‌ ಸನ್ನದ್ಧರಾಗಿದ್ದಾರೆ.

ಈ ಮೊದಲು, ಸಮಾಜವಾದಿ ಪಕ್ಷ, ಪಕ್ಷದ ಪ್ರಧಾನ ಕಚೇರಿ, ರಾಷ್ಟ್ರೀಯ ಅಧ್ಯಕ್ಷ ಸ್ಥಾನಗಳನ್ನು ಕಸಿದುಕೊಂಡಿದ್ದ ಅಖೀಲೇಶ್‌ ಕಡೆಯದಾಗಿ ಈಗ ಚಿಹ್ನೆ ಯನ್ನೂ ತನ್ನದಾಗಿಸಿಕೊಂಡಿದ್ದಾರೆ. ಇದು ಮುಲಾಯಂಗೆ ಭಾರೀ ಮುಖಭಂಗ ಉಂಟುಮಾಡಿದೆ. 

ಸಮಾಜವಾದಿ ಪಕ್ಷದೊಳಗಿನ ಆಂತ ರಿಕ ಕಚ್ಚಾಟದಿಂದಾಗಿ ಚಿಹ್ನೆ ಯಾರಿಗೆ ಸಿಗಬೇಕು ಎಂಬ ಬಗ್ಗೆ ಮುಲಾಯಂ ಸಿಂಗ್‌ ಯಾದವ್‌ ಮತ್ತು ಅಖೀಲೇಶ್‌ ಯಾದವ್‌ ಬಣಗಳು ಕೇಂದ್ರ ಚುನಾವಣಾ ಆಯೋಗದ ಮೆಟ್ಟಿಲೇರಿದ್ದವು. ಈ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ್ದ ಮುಖ್ಯ ಚುನಾವಣಾ ಆಯುಕ್ತ ನಸೀಮ್‌ ಜೈದಿ ನೇತೃತ್ವದ ತ್ರಿಸದಸ್ಯರ ಆಯೋಗ, ಸೋಮವಾರ ತೀರ್ಪು ನೀಡಿದೆ. ಇದರಂತೆ, ಅಖೀಲೇಶ್‌ ಬಣಕ್ಕೆ ಚಿಹ್ನೆ ಮತ್ತು ಅಧಿಕೃತ ಸಮಾಜವಾದಿ ಪಕ್ಷದ ಸ್ಥಾನಮಾನವನ್ನು ನೀಡಿದೆ.

ಈ ವಿದ್ಯಮಾನ ಚುನಾವಣಾ ಹೊಸ್ತಿ
ಲಲ್ಲಿರುವ ಉತ್ತರಪ್ರದೇಶ ರಾಜಕೀಯ ದಲ್ಲಿ ಭಾರೀ ಧ್ರುವೀಕರಣ ಉಂಟು ಮಾಡುವ ಸಾಧ್ಯತೆ ಇದೆ. ಅಖೀಲೇಶ್‌ ಕಾಂಗ್ರೆಸ್‌ ಜತೆಗೂಡಿ ಮಹಾಮೈತ್ರಿಕೂಟ ರಚಿಸಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕುವ ಸಾಧ್ಯತೆ ಇದೆ.

ಅಖೀಲೇಶ್‌ಗೆ ಚಿಹ್ನೆ ಒಲಿದಿದ್ದು ಹೇಗೆ?: ಮುಲಾಯಂ ಸಿಂಗ್‌ ಬಣ ನೀಡಿದ ದಾಖಲೆಗಳು ಪೂರಕವಾಗಿಲ್ಲದ ಕಾರಣ, ಅಖೀಲೇಶ್‌ ಬಣಕ್ಕೇ ಚಿಹ್ನೆ ನೀಡುತ್ತಿರುವುದಾಗಿ ಆಯೋಗ ಘೋಷಿಸಿದೆ. ಅಲ್ಲದೆ ಸಮಾಜವಾದಿ ಪಕ್ಷ ಮುಲಾಯಂರದ್ದು ಎಂಬುದನ್ನು ದಾಖಲೆಗಳು ಪುಷ್ಟೀಕರಿಸುತ್ತಿಲ್ಲ ಎಂದು ಆಯೋಗ ತೀರ್ಪಿನಲ್ಲಿ ಉಲ್ಲೇಖೀಸಿದೆ ಎಂದು ಅಖೀಲೇಶ್‌ ಬಣದ ರಾಮ್‌ ಗೋಪಾಲ್‌ ಯಾದವ್‌ ಹೇಳಿದ್ದಾರೆ. 

ಅಖೀಲೇಶ್‌ ಬಣದಿಂದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ 28 ಸದಸ್ಯರು, 15 ಸಂಸದರು, 205 ಶಾಸಕರು, 56 ವಿಧಾನ ಪರಿಷತ್‌ ಸದಸ್ಯರು ಹಾಗೂ ಪಕ್ಷದ ಒಟ್ಟಾರೆ ಪ್ರತಿನಿಧಿಗಳ ಶೇ. 90ರಷ್ಟು ಮಂದಿಯ ಬೆಂಬಲ ಇರಿಸಿಕೊಂಡು  ಚುನಾವಣಾ ಆಯೋಗದ ಮುಂದೆ ಅಫಿದವಿತ್‌ ಸಲ್ಲಿಸಲಾಗಿತ್ತು. ಅಲ್ಲದೆ ಸ್ವತಃ ಅಖೀಲೇಶ್‌ ಯಾದವ್‌ ಅವರೇ ಮುಖ್ಯಮಂತ್ರಿಯಾದ್ದರಿಂದ ಇದನ್ನೂ ಅಫಿದವಿತ್‌ನಲ್ಲಿ ಉಲ್ಲೇಖೀಸಲಾಗಿತ್ತು. ಆದರೆ ಮುಲಾಯಂ ಬಣದಿಂದ ಇಂಥ ಯಾವುದೇ ಪ್ರಮಾಣ ಪತ್ರ ಸಲ್ಲಿಕೆ ಯಾಗಿರಲಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.  

ಮುಲಾಯಂ ಪರ ಆಯೋಗದ ಮುಂದೆ ಹಾಜರಾಗಿದ್ದ ಹಿರಿಯ ವಕೀಲ ಮೋಹನ್‌ ಪರಾಶರನ್‌, ಪಕ್ಷದ  ಕಾರ್ಯವಿಧಾನ ಅನುಸರಿಸಿ ಚಿಹ್ನೆ ನೀಡ ಬೇಕು ಎಂದು ಮನವಿ ಮಾಡಿದರು. ಇದನ್ನು ತಿರಸ್ಕರಿಸಿದ ಆಯೋಗ, ಕೇವಲ  ಬಹುಮತದ ಆಧಾರದ ಮೇಲಷ್ಟೇ ನಾವು ಚಿಹ್ನೆ ನೀಡಲು ಸಾಧ್ಯ ಎಂದು ಹೇಳಿತು. ಅಲ್ಲದೆ ಮುಲಾಯಂ ಬಣ, ಅಖೀಲೇಶ್‌ ಯಾದವ್‌ ಅವರು, ಶಾಸಕರ ನಕಲಿ ಸಹಿ ಮಾಡಿಸಿದ್ದಾರೆ ಎಂದು ಆರೋಪಿಸಿತ್ತು. ಆದರೆ ಇದನ್ನು ಪುಷ್ಟೀಕರಿಸುವ ಯಾವುದೇ ಸಾಕ್ಷ್ಯಗಳನ್ನೂ ಮೋಹನ್‌ ಪರಾಶರನ್‌ ಒದಗಿಸಲಿಲ್ಲ. 

ಕಾಂಗ್ರೆಸ್‌ ಜತೆ ಮೈತ್ರಿ ಸಾಧ್ಯತೆ: ಇನ್ನು ಹೆಚ್ಚು ಕಡಿಮೆ ಸಮಾಜವಾದಿ ಪಕ್ಷಕ್ಕೆ ಅಖೀಲೇಶ್‌ ಯಾದವ್‌ವೊಬ್ಬರೇ ಸರ್ವೋಚ್ಚ ನಾಯಕ. ಚಿಹ್ನೆ ಸಿಗುತ್ತಿದ್ದಂತೆ ತಂದೆ ಮುಲಾಯಂ ಸಿಂಗ್‌ ನಿವಾಸಕ್ಕೆ ಭೇಟಿ ನೀಡಿದರೂ ಸಹ, ಅಖೀಲೇಶ್‌ ಯಾದವ್‌ ನೇತೃತ್ವದಲ್ಲೇ ಸಮಾಜವಾದಿ ಪಕ್ಷ ಚುನಾವಣೆ ಎದುರಿಸುವ ಸಂಭವವೇ ಹೆಚ್ಚು. ಇದಕ್ಕೆ ಬೇಕಾದ ತಯಾರಿಯನ್ನೂ ಅಖೀಲೇಶ್‌ ಮಾಡಿಕೊಳ್ಳುತ್ತಿದ್ದಾರೆ. 

ಸೈಕಲ್‌ ಚಿಹ್ನೆ ಅಖೀಲೇಶ್‌ ಬಣಕ್ಕೇ ಸಿಕ್ಕಿರುವುದರಿಂದ ಮುಂದಿನ 48 ಗಂಟೆಗಳಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ನಿರ್ಧಾರವಾಗಲಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಕೆಲ ಸುತ್ತುಗಳ ಮಾತುಕತೆ ಮುಗಿದಿದೆ ಎನ್ನಲಾಗಿದ್ದು, ಅಂತಿಮವಾಗಬೇಕಿದೆ.

ಸಂಭ್ರಮಾಚರಣೆ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಸೈಕಲ್‌ ಗೆಲ್ಲುತ್ತಿದ್ದಂತೆ, ಸಮಾಜವಾದಿ ಪಕ್ಷದ ಅಖೀಲೇಶ್‌ ಬಣದ ಕಾರ್ಯಕರ್ತರಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು. ಲಕ್ನೋ ಸೇರಿದಂತೆ ರಾಜ್ಯದ ಬಹುತೇಕ ಕಡೆ ಕಾರ್ಯಕರ್ತರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು. ಅಲ್ಲದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರದ ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಯಾದವ್‌ ಅಖೀಲೇಶ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಮುಲಾಯಂ ಮುಂದೇನು ?
ಚಿಹ್ನೆ ಅಖೀಲೇಶ್‌ ಬಣಕ್ಕೆ  ಹೋಗಿರುವುದರಿಂದ ಮುಲಾಯಂ ಸಿಂಗ್‌ ಯಾದವ್‌ ಬಣದಲ್ಲಿ ನಿರಾಸೆಯ ಕಾರ್ಮೋಡ ಕವಿದಿದೆ. ಸದ್ಯಕ್ಕಂತೂ ಮುಂದೇನು ಎಂಬ ಬಗ್ಗೆ  ಮುಲಾಯಂ ವಿವಿಧ ಆಯಾಮಗಳಲ್ಲಿ ಚಿಂತನೆ ನಡೆಸುತ್ತಿದ್ದಾರೆ. ಇತ್ತೀಚೆಗಷ್ಟೇ ಲೋಕದಳ ಪಕ್ಷ ತನ್ನ  “ಹೊಲ ಉಳುತ್ತಿರುವ ರೈತ’ ಚಿಹ್ನೆಯನ್ನು ಮುಲಾಯಂಗೆ ನೀಡಲು ಮುಂದೆ ಬಂದಿತ್ತು. ಇದಷ್ಟೇ ಅಲ್ಲ, ನೇತಾಜಿ ತಮ್ಮ ಪಕ್ಷಕ್ಕೇ ಬಂದು ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನೂ ವಹಿಸಿಕೊಳ್ಳಬಹುದು ಎಂದು ಆಹ್ವಾನ ನೀಡಿತ್ತು. ಈ ಪಕ್ಷವನ್ನು 1980ರಲ್ಲಿ ಚರಣ್‌ ಸಿಂಗ್‌ ಕಟ್ಟಿದ್ದರು. ಸದ್ಯಕ್ಕೆ ಮುಲಾಯಂ ಈ ಆಯ್ಕೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಕೊನೇ ಕ್ಷಣದಲ್ಲಿ ಮಗನಿಗೆ ತಲೆಬಾಗಿ ಎಸ್‌ಪಿ ಗೌರವಾಧ್ಯಕ್ಷ ಹುದ್ದೆ ಒಪ್ಪಿ ನೇಪಥ್ಯಕ್ಕೆ ಸರಿದರೂ ಅಚ್ಚರಿ ಇಲ್ಲ.

ಟಾಪ್ ನ್ಯೂಸ್

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Ajekar Case: ನ್ಯಾಯಾಂಗ ಬಂಧನ ವಿಸ್ತರಣೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

supreem

Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್

ಹೋಟೆಲ್ ಕೊಠಡಿಯಲ್ಲೇ ಹಿರಿಯ ವೈದ್ಯ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ ಪ್ರಕರಣ: ಪೊಲೀಸ್‌ ಕ್ರಮಕ್ಕೆ ಕೇರಳ ಸಿಎಂ ಸೂಚನೆ

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Mangaluru: ಡಿ.14ರಂದು ರಾಷ್ಟ್ರೀಯ ಲೋಕ ಅದಾಲತ್‌

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Mulki: ಚಿನ್ನಾಭರಣ ಕಳವು: ಆರೋಪಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.