ಮುಗಿದಿಲ್ಲ SP ಭಿನ್ನಮತ:ರಾಷ್ಟ್ರಾಧ್ಯಕ್ಷರಾಗಿ ಅಖಿಲೇಶ್; ಅಮರ್ ವಜಾ
Team Udayavani, Jan 1, 2017, 12:25 PM IST
ಲಕ್ನೋ : ಸಮಾಜವಾದಿ ಪಕ್ಷದಲ್ಲಿ ಭಿನ್ನಮತ ಮುಂದುವರಿದಿದ್ದು ,ಇಂದು ನಡೆದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಅವರನ್ನು ಪಕ್ಷದ ರಾಷ್ಟ್ರಾಧ್ಯಕ್ಷ ರನ್ನಾಗಿ ಆಯ್ಕೆ ಮಾಡಲಾಗಿದೆ. ಇದುವರೆಗೆ ರಾಷ್ಟ್ರಾಧ್ಯಕ್ಷರಾಗಿದ್ದ ಮುಲಾಯಂ ಸಿಂಗ್ ಅವರನ್ನು ಮಾರ್ಗದರ್ಶಕ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಘೋಷಿಸಿದ್ದಾರೆ.
ಭಾನುವಾರ ಮುಲಾಯಂ ಸಿಂಗ್ ಅವರ ತೀವ್ರ ವಿರೋಧದ ನರಡುವೆಯೂ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಿತು. ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಶಿವಪಾಲ್ ಯಾದವ್ ಗೈರಾಗಿದ್ದರು. ಶಿವಪಾಲ್ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ವಜಾ ಮಾಡಲಾಯಿತು.
ಹೈಡ್ರಾಮಾ : ಮತ್ತೆ ರಾಮ್ ಗೋಪಾಲ್ ವಜಾ!
ರಾಮ್ ಗೋಪಾಲ್ ಯಾದವ್ ಅವರನ್ನು 2 ದಿನಗಳ ಒಳಗಾಗಿ ಮತ್ತೆ ಪಕ್ಷದಿಂದ 6 ವರ್ಷಗಳ ಕಾಲ ಸಂಸ್ಪೆಂಡ್ ಮಾಡಿ ಮುಲಾಯಂ ಸಿಂಗ್ ಆದೇಶ ಹೊರಡಿಸಿದ್ದಾರೆ.
ಜನವರಿ 5 ರಂದು ಕಾರ್ಯಕಾರಣಿ
ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಜನವರಿ 5 ರಂದು ಮುಲಾಯಂ ಸಿಂಗ್ ಅವರು ಕರೆದಿದ್ದು ಮುಂದಿನ ರಾಜಕೀಯ ವಿದ್ಯಮಾನಗಳು ತೀವ್ರ ಕುತೂಹಲ ಮೂಡಿಸಿವೆ.
ನಾನು ಕುಟುಂಬ ಮತ್ತು ಪಕ್ಷವನ್ನು ಉಳಿಸುತ್ತೇನೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖೀಲೇಶ್ ನಾನು ಕುಟುಂಬ ಮತ್ತು ಪಕ್ಷ ಎರಡನ್ನೂ ಉಳಿಸಬೇಕಾಗಿದೆ. ನನಗೆ ತಂದೆಯ ಮೇಲೆ ಅಪಾರಗೌರವವಿದೆ ಎಂದರು. ಇದೇ ವೇಳೆ ಶಿವಪಾಲ್ ವಿರುದ್ಧ ಕಿಡಿ ಕಾರಿದರು.
ಅಶಿಸ್ತಿನ ವರ್ತನೆ ಆರೋಪದಡಿ ಸಮಾಜವಾದಿ ಪಕ್ಷದಿಂದ ಮುಖ್ಯಮಂತ್ರಿ ಅಖೀಲೇಶ್ ಯಾದವ್ ಅವರನ್ನು ವಜಾ ಮಾಡಿದ ಆದೇಶವನ್ನು ಒಂದೇ ದಿನದಲ್ಲಿ ವಾಪಾಸು ಪಡೆಯಲಾಗಿತ್ತು.
ಅಮರ್ ಸಿಂಗ್ ವಜಾ
ಪಕ್ಷದಿಂದ ಅಮರ್‌ಸಿಂಗ್ ಅವರನ್ನು ವಜಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ
Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ
Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!
Padubidri: ಸ್ಕೂಟಿಗೆ ಈಚರ್ ವಾಹನ ಢಿಕ್ಕಿ; ಸವಾರನಿಗೆ ಗಾಯ
BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.