ನಿರ್ಲಜ್ಜ ಭಾಷಣಕ್ಕಾಗಿ ಪ್ರಧಾನಿ ಮೋದಿಗೆ 72 ವರ್ಷ ನಿಷೇಧ: ಅಖೀಲೇಶ್ ಆಗ್ರಹ
Team Udayavani, Apr 30, 2019, 11:04 AM IST
ಲಕ್ನೋ : ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ ಎಂದು ಹೇಳಿರುವ ನಿರ್ಲಜ್ಜ ಭಾಷಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು 72 ವರ್ಷಗಳಿಗೆ ನಿಷೇಧಿಸಬೇಕು ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಹೇಳಿದ್ದಾರೆ.
ಚುನಾವಣಾ ಆಯೋಗ ಈಚೆಗೆ ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಗೈದ ಉ.ಪ್ರ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರಿಗೆ 72 ತಾಸುಗಳ ನಿಷೇಧವನ್ನು ಹೇರಿತ್ತು. ಅದೇ ರೀತಿಯ ಉಲ್ಲಂಘನೆಗಾಗಿ ಪ್ರಧಾನಿ ಮೋದಿಗೆ 72 ವರ್ಷಗಳ ನಿಷೇಧ ಹೇರಬೇಕು ಎಂದು ಅಖೀಲೇಶ್ ಆಗ್ರಹಿಸಿದರು.
“ವಿಕಾಸ (ಅಭಿವೃದ್ಧಿ) ಪ್ರಶ್ನಿಸುತ್ತಿದೆ : ನೀವು ಪ್ರಧಾನ್ ಜೀ ಅವರ ನಿರ್ಲಜ್ಜ ಭಾಷಣವನ್ನು ಕೇಳಿರುವಿರಾ ? ದೇಶದ 125 ಕೋಟಿ ಜನರ ವಿಶ್ವಾಸವನ್ನು ಕಳೆದುಕೊಂಡ ಬಳಿಕ ಈಗ ಮೋದಿ 40 ಟಿಎಂಸಿ ಶಾಸಕರ ಅನೈತಿಕ ಪಕ್ಷಾಂತರದ ಭರವಸೆಯನ್ನು ನೆಚ್ಚಿಕೊಳ್ಳುತ್ತಿದ್ದಾರೆ’ ಎಂದು ಅಖೀಲೇಶ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.