ರೇಪ್ ಆರೋಪಿ ಯುಪಿ ಸಚಿವನಿಗಾಗಿ ಏರ್‌ಪೋರ್ಟ್‌ಗಳಲ್ಲಿ ಹದ್ದಿನ ಕಣ್ಣು
Team Udayavani, Mar 4, 2017, 10:10 AM IST
ಹೊಸದಿಲ್ಲಿ: ತನ್ನ ಬೆಂಬಲಿಗರೊಂದಿಗೆ ಕೂಡಿ ಮಹಿಳೆಯೊಬ್ಬಳ ಮೇಲೆ ಗ್ಯಾಂಗ್ ರೇಪ್ ಮತ್ತು ಆಕೆಯ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸಿ, ತಲೆ ಮರೆಸಿಕೊಂಡಿರುವ ಉತ್ತರಪ್ರದೇಶದ ಸಚಿವ ಗಾಯತ್ರಿ ಪ್ರಜಾಪತಿ ವಿದೇಶಕ್ಕೆ ಪಲಾಯನ ಮಾಡಲು ಸಂಚು ಹೂಡಿದ್ದು , ಈ ಹಿನ್ನಲೆಯಲ್ಲಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಹದ್ದಿನ ಕಣ್ಣು ಇರಿಸಲಾಗಿದೆ.
ವರದಿಯಾದಂತೆ ರೇಪ್ ಪ್ರಕರಣದಲ್ಲಿ ಎಫ್ಐಆರ್‌ನಲ್ಲಿ ಮೊದಲ ಆರೋಪಿಯಾಗಿರುವ 49 ರ ಹರೆಯದ ಪ್ರಜಾಪತಿ ವಿದೇಶಕ್ಕೆ ಪಲಾಯನಗೈದು ತಲೆ ಮರೆಸಿಕೊಳ್ಳಲು ಮುಂದಾಗಿದ್ದು, ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವ್ಯಾಪಕ ಕಟ್ಟೆಚ್ಚರ ವಹಿಸಿದ್ದಾರೆ. ಉತ್ತರ ಪ್ರದೇಶ -ನೇಪಾಳ ಗಡಿ ಭಾಗದಲ್ಲೂ ಸಶಸ್ತ್ರ ಸೀಮಾ ಬಲ ಹದ್ದಿನ ಕಣ್ಣು ಇರಿಸಿದೆ.
ಮಹಿಳೆ ತನಗೆ ನ್ಯಾಯ ದೋರಕಿಸಿ ಕೊಡಲು ಸಚಿವನ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ್ದರು. ಆ ಬಳಿಕವೇ ಎಫ್ಐಆರ್ ದಾಖಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.