ಕಳಪೆ ಕೈಬರಹ: ವೈದ್ಯರಿಗೆ ತಲಾ 5000 ರೂ. ದಂಡ!
Team Udayavani, Oct 5, 2018, 7:55 AM IST
ಲಖನೌ: ಓದಲಾಗದಂತೆ ಔಷಧ ಚೀಟಿ ಬರೆದುಕೊಡುವುದು ವೈದ್ಯರ ವೈಶಿಷ್ಟ್ಯತೆ! ಆದರೆ ಉತ್ತರ ಪ್ರದೇಶದ ನ್ಯಾಯಾಲಯ ಇಂಥ ಮೂವರು ವೈದ್ಯರಿಗೆ ತಲಾ 5 ಸಾವಿರ ರೂ. ದಂಡ ವಿಧಿಸಿದೆ. ಕಳೆದ ವಾರ ಅಲಹಾಬಾದ್ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದ ಮೂರು ಪ್ರಕರಣಗಳಲ್ಲಿ ಆರೋಪಿಗಳ ವೈದ್ಯಕೀಯ ಪರೀಕ್ಷೆಯ ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ವೈದ್ಯರ ವರದಿಯಲ್ಲಿ ಕೈಬರಹ ಕಳಪೆಯಾಗಿತ್ತು. ಓದಲೂ ಸಾಧ್ಯವಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆ ಮೂವರೂ ವೈದ್ಯರನ್ನು ಕಟಕಟೆಗೆ ಕರೆಸಿತು. ಅಲ್ಲದೆ ಅವರಿಗೆ ತಲಾ 5 ಸಾವಿರ ದಂಡವನ್ನೂ ವಿಧಿಸಿತು.
ಕೆಲಸದೊತ್ತಡದಿಂದಾಗಿ ಗಮನವಿಟ್ಟು ಬರೆಯಲಾಗಲಿಲ್ಲ ಎಂದು ವೈದ್ಯರು ಅಲವತ್ತುಕೊಂಡರು. ಇಂತಹ ವರದಿಗಳನ್ನು ಇನ್ನು ಕಂಪ್ಯೂಟರ್‌ನಲ್ಲಿ ಟೈಪ್ ಮಾಡಿ ಸಲ್ಲಿಸಬೇಕು ಎಂದು ನಂತರ ಕೋರ್ಟ್ ಸೂಚಿಸಿತು. ಇಂಥ ವರದಿಗಳು ನ್ಯಾಯಾಧೀಶರು ಅಥವಾ ವಕೀಲರು ಓದುವಂತಿರಬೇಕು. ಕೇವಲ ವೈದ್ಯರು ಓದಬಹುದಾದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರೆ, ಉದ್ದೇಶ ಪೂರೈಸಿದಂತಾಗುವುದಿಲ್ಲ ಎಂದು ಕೋರ್ಟ್ ಈ ವೇಳೆ ಆಕ್ಷೇಪ ವ್ಯಕ್ತಪಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics; ಮತಕ್ಕಾಗಿ ಮುಸ್ಲಿಮರನ್ನು ಒಡೆವ ಕೆಲಸ ಕಾಂಗ್ರೆಸ್ ಮಾಡುತ್ತಿದೆ: ಬಿಜೆಪಿ
Maha Election; ಚು.ಆಯೋಗದಿಂದ ಉದ್ಧವ್ ಠಾಕ್ರೆ ಬ್ಯಾಗ್ ಪರಿಶೀಲನೆ, ವಿವಾದ
Manipura: ಇಬ್ಬರು ಶವ ಪತ್ತೆ, ಮಕ್ಕಳು ಸೇರಿ 6 ಮಂದೆ ಕಾಣೆ
ದಾವೂದ್, ನಟ ಸಲ್ಮಾನ್ ಸಂಪರ್ಕ ಇದ್ದಿದ್ದಕ್ಕೆ ಸಿದ್ಧಿಕಿ ಹತ್ಯೆ: ಶೂಟರ್
Ranchi: ವಕ್ಫ್ ಮಂಡಳಿಯು ಕರ್ನಾಟಕದಲ್ಲಿ ದೇಗುಲ, ರೈತರ ಭೂಮಿಯ ಕಸಿದಿದೆ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.