“ಒಬ್ಬ ಮಹಿಳೆಯ ಹಣೆಗೆ ಸಿಂಧೂರ ಹಚ್ಚಿದರೆ ಮಾತು ಕೊಟ್ಟಂತೆ’: ಅಲಹಾಬಾದ್ ಹೈಕೋರ್ಟ್
ಭಾರತದ ಸಂಪ್ರದಾಯದಲ್ಲಿ ಸಿಂಧೂರ ಹಚ್ಚುವುದಕ್ಕೆ ವಿಶೇಷ ಅರ್ಥವಿದೆ.
Team Udayavani, Sep 15, 2021, 10:26 AM IST
ಅಲಹಾಬಾದ್: “ಒಬ್ಬ ಮಹಿಳೆಯ ಹಣೆಗೆ ವ್ಯಕ್ತಿಯೊಬ್ಬ ಸಿಂಧೂರ ಇಟ್ಟಿದ್ದಾನೆಂದರೆ ಆತ ಆಕೆಯನ್ನು ಮದುವೆಯಾಗುವುದಾಗಿ ಮಾತು ಕೊಟ್ಟಂತೆ’ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.
ಈ ಮೂಲಕ ವ್ಯಕ್ತಿಯೊಬ್ಬನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದು ಮಾಡಲು ನಿರಾಕರಿಸಿದೆ. ವಿಚಾರಣೆ ವೇಳೆ ನ್ಯಾ|ವಿವೇಕ್ ಅಗರ್ವಾಲ್ ನೇತೃತ್ವದ ಏಕಸದಸ್ಯ ಪೀಠ, ಭಾರತದ ಸಂಪ್ರದಾಯದಲ್ಲಿ ಸಿಂಧೂರ ಹಚ್ಚುವುದಕ್ಕೆ ವಿಶೇಷ ಅರ್ಥವಿದೆ. ಹಣೆಗೆ ಸಿಂಧೂರ ಹಚ್ಚುವುದೆಂದರೆ ಆಕೆಯನ್ನು ಮಡದಿಯೆಂದು ಸ್ವೀಕರಿಸಿದಂತೆ. ಹೀಗಾಗಿ ಈ ಪ್ರಕರಣದಲ್ಲಿ ಆರೋಪಿ ಕುಮಾರ್ ವಿರುದ್ಧದ ಪ್ರಕರಣ ಕೈಬಿಡಲಾಗದು’ ಎಂದಿದೆ.
ಗಡಿ ರಸ್ತೆ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ವಿಪಿನ್ ಕುಮಾರ್‌ಗೆ ಅರ್ಜಿದಾರ ಯುವತಿಯೊಂದಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಅನಂತರ ಮದುವೆಗೆ ನಿಶ್ಚಯ ಮಾಡುವುದಾಗಿ ಆಕೆಯನ್ನು ಹರ್ದೋಯಿಗೆ ಕರೆದಿದ್ದ ಕುಮಾರ್, ಆಕೆಯ ಹಣೆಗೆ ಸಿಂಧೂರ ಹಚ್ಚುವಂಥ “ಮಾಂಗ್‌ಭರಾಯಿ’ ಎಂಬ ಕಾರ್ಯಕ್ರಮ ನಡೆಸಿ, ಅಲ್ಲಿಂದ ಲಕ್ನೋಗೆ ಕರೆದೊಯ್ದಿದ್ದ. ಅಲ್ಲಿನ ಹೊಟೇಲ್‌ವೊಂದರಲ್ಲಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ ಆತ, ಮದುವೆಯಾಗುವ ಭರವಸೆ ನೀಡಿ, ವಂಚಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.