ರಕ್ಷಣೆ ಪಡೆಯಲು ಮೈತ್ರಿ
Team Udayavani, Jan 28, 2019, 12:30 AM IST
ಮಧುರೆ/ಕೊಚ್ಚಿ/ತ್ರಿಶ್ಶೂರ್: ರಕ್ಷಣೆ ಮತ್ತು ವಿವಿಧ ಸಾಮಾಜಿಕ ಯೋಜನೆಗಳಲ್ಲಿ ಮಾಡಿದ ಅವ್ಯವಹಾರ ಈಗ ವಿಪಕ್ಷಗಳ ನಾಯಕರಿಗೆ ಕುಣಿಕೆಯಾಗಲಾರಂಭಿಸಿದೆ. ಹೀಗಾಗಿಯೇ ಅವುಗಳು ಬಿಜೆಪಿ ವಿರುದ್ಧ ಮೈತ್ರಿಗಾಗಿ ಒಗ್ಗೂಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಮಧುರೆ ಮತ್ತು ಕೊಚ್ಚಿಯಲ್ಲಿ ರವಿವಾರ ವಿವಿಧ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಅವರು ಮಾತ ನಾಡಿದ್ದಾರೆ.
ಜ. 23ರಂದು ಕೋಲ್ಕತಾದಲ್ಲಿ ಆಯೋಜಿಸಲಾಗಿದ್ದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನೇತೃತ್ವದಲ್ಲಿ ನಡೆದ ಬೃಹತ್ ರ‍್ಯಾಲಿಯನ್ನು ಉಲ್ಲೇಖೀಸಿ ಮಾತನಾಡಿದ ಪ್ರಧಾನಿ ಈ ಮಾತುಗಳನ್ನಾಡಿದ್ದಾರೆ.ತಮಿಳುನಾಡಿನ ಮಧುರೆಯಲ್ಲಿ ಅಖೀಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಮಧುರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಜ. 23ರಂದು ಕೋಲ್ಕತಾದಲ್ಲಿ ನಡೆದಿದ್ದ ಬೃಹತ್ ರ್ಯಾಲಿಯನ್ನು ಮುಖ್ಯವಾಗಿ ಪ್ರಸ್ತಾವಿಸಿದ್ದಾರೆ. ಕೇವಲ ವೈಯಕ್ತಿಕ ಹಿತಾಸಕ್ತಿಗಳನ್ನು ಮುಂದಿಟ್ಟುಕೊಂಡು ವಿಪಕ್ಷಗಳ ನಾಯಕರು ಒಗ್ಗೂಡುತ್ತಿದ್ದಾರೆ. ಕೇಂದ್ರ ಸರಕಾರದ ರಕ್ಷಣೆ ಮತ್ತು ವಿವಿಧ ಸಾಮಾಜಿಕ ಯೋಜನೆಗಳ ಗುತ್ತಿಗೆ ಪಡೆದವರು ಅವ್ಯವಹಾರ ಎಸಗಿ ಸಿಕ್ಕಿಬೀಳುವ ಹಂತದಲ್ಲಿದ್ದಾರೆ. ಭ್ರಷ್ಟಾಚಾ ರದ ವಿರುದ್ಧ ಕೇಂದ್ರ ಸರಕಾರ ಕಠಿಣ ಕ್ರಮಗಳನ್ನು ಕೈಗೊಳ್ಳ ಲಾರಂಭಿಸಿದ್ದು ಎಲ್ಲರಿಗೂ ಭೀತಿ ಹುಟ್ಟಿಸಿದೆ. ಹೀಗಾಗಿಯೇ ಬಿಜೆಪಿ ವಿರುದ್ಧ ಒಗ್ಗೂಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಲೂಟಿ ವಿರುದ್ಧ ಕ್ರಮ: ಉದ್ಯಮಿಗಳಾದ ವಿಜಯ ಮಲ್ಯ, ಮೆಹುಲ್ ಚೋಸ್ಕಿ ಹೆಸರನ್ನು ಪರೋಕ್ಷವಾಗಿ ಪ್ರಸ್ತಾಪ ಮಾಡಿದ ಪ್ರಧಾನಿ, ದೇಶದ ಅರ್ಥ ವ್ಯವಸ್ಥೆಯನ್ನು ಲೂಟಿ ಮಾಡಿದವರಿಗೆ ತಕ್ಕ ಶಾಸ್ತಿ ಮಾಡಲಾಗುತ್ತದೆ ಎಂದು ಎಚ್ಚರಿಸಿ ದ್ದಾರೆ. ಕೇಂದ್ರ ಸರಕಾರ ಎಲ್ಲರಿಗೂ ಆರೋಗ್ಯ ಒದಗಿಸುವ ನಿಟ್ಟನಲ್ಲಿ ಆಯುಷ್ಮಾನ್ ಭಾರತ ಯೋಜನೆ ಜಾರಿಗೊಳಿಸಿದೆ ಎಂದಿದ್ದಾರೆ.
ಸಂಸತ್‌ನಲ್ಲಿ ಇತ್ತೀಚೆಗೆ ಅನುಮೋದನೆ ಪಡೆದಿರುವ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ವರ್ಗದವರಿಗೆ ಶೇ.10ರಷ್ಟು ಮೀಸಲು ನೀಡಿರುವುದರಿಂದ ಹಾಲಿ ಇರುವ ಮೀಸಲು ವ್ಯವಸ್ಥೆಗೆ ಧಕ್ಕೆಯಾಗದು ಎಂದು ಪ್ರಧಾನಿ ಭರವಸೆ ನೀಡಿದ್ದಾರೆ. ಕೆಲವರು ತಮಿಳುನಾಡಿನಲ್ಲಿ ತಮ್ಮ ಸ್ವಹಿತಾ ಸಕ್ತಿಗಾಗಿ ಮೀಸಲು ವಿಚಾರದಲ್ಲಿ ತಪ್ಪು ಮಾಹಿತಿ ನೀಡುತ್ತಿ ದ್ದಾರೆಂದು ದೂರಿದ್ದಾರೆ.
ಮಾ. 3ಕ್ಕೆ ರ‍್ಯಾಲಿ: ಪಾಟ್ನಾದಲ್ಲಿ ಮಾ.3ಕ್ಕೆ ಎನ್‌ಡಿಎ ರ್ಯಾಲಿ ನಡೆಯಲಿದ್ದು, ಅದರಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಭಾಗವಹಿಸುವ ಸಾಧ್ಯತೆ ಇದೆ.
ಬಿಪಿಸಿಎಲ್ ರಿಫೈನರಿ ಉದ್ಘಾಟನೆ: ಸರಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್)ನ ಏಕೀಕೃತ ತೈಲ ಶುದ್ಧೀಕರಣ ಕೇಂದ್ರವನ್ನು ಪ್ರಧಾನಿ ಮೋದಿ ಕೊಚ್ಚಿಯಲ್ಲಿ ಉದ್ಘಾಟಿಸಿದ್ದಾರೆ. ಇದರ ಜತೆಗೆ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್ ಮತ್ತು ಕೌಶಲಾಭಿವೃದ್ಧಿ ಕೇಂದ್ರದ ಸ್ಥಾಪನೆಗೆ ಭೂಮಿ ಪೂಜೆ ನಡೆಸಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಉಜ್ವಲ ಯೋಜನೆಯಡಿ 6 ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ ಎಂದಿದ್ದಾರೆ.
ವಾಗ್ಧಾಳಿ: ತ್ರಿಶ್ಶೂರ್‌ನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಯುವ ಮೋರ್ಚಾ ರ್ಯಾಲಿಯಲ್ಲಿ ಕೇರಳ ಎಲ್‌ಡಿಎಫ್ ಸರಕಾರದ ವಿರುದ್ಧ ಪ್ರಧಾನಿ ವಾಗ್ಧಾಳಿ ನಡೆಸಿದ್ದಾರೆ. ಕೇರಳದ ಸಂಸ್ಕೃತಿಗೆ ಎಡಪಕ್ಷಗಳು ಯಾವ ರೀತಿಯ ಗೌರವ ನೀಡುತ್ತವೆ ಎನ್ನುವುದು ಶಬರಿಮಲೆ ಪ್ರಕರಣ ಸಾಕ್ಷಿ ಎಂದರು. ಒಂದು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಪ್ರಧಾನಿ ಮೋದಿ ಎಲ್‌ಡಿಎಫ್ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಿಯಾಂಕಾಗೆ ಜನರ ಥಳಿಸುವ ಕಾಯಿಲೆ
ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾಗೆ ಜನರನ್ನು ಥಳಿಸುವ ಕಾಯಿಲೆ ಇದೆ. ಅದು ಅವರ ಸಾರ್ವಜನಿಕ ಜೀವನಕ್ಕೆ ಹೇಳಿಸಿದ್ದಲ್ಲ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಡಾ.ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದಾರೆ. “ಎಎನ್‌ಐ’ ಸುದ್ದಿಸಂಸ್ಥೆ ಜತೆಗೆ ಮಾತನಾಡಿದ ಅವರು, ಅವರಿಗೆ ಬೈಪೋಲಾರ್ ಸಮಸ್ಯೆ ಇದೆ ಎಂದಿದ್ದಾರೆ. ಅವರ ಈ ಹೇಳಿಕೆ ವಿವಾದಕ್ಕೆ ಒಳಗಾಗಿದ್ದು, ಕಾಂಗ್ರೆಸ್ ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದೆ. ಇದೇ ವೇಳೆ ಉತ್ತರ ಪ್ರದೇಶ ಇಂಧನ ಸಚಿವ ಶ್ರೀಕಾಂತ್ ಶರ್ಮಾ ಕೂಡ ಪ್ರಿಯಾಂಕಾ ವಾದ್ರಾ ರಾಜಕೀಯ ಪ್ರವೇಶಕ್ಕೆ ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ವೈಫಲ್ಯದ ಹಿನ್ನೆಲೆಯಲ್ಲಿ ಅವರನ್ನು ಕರೆತರಲಾಗಿದೆ ಎಂದಿದ್ದಾರೆ. 2008ರಿಂದ 2014ರ ಅವಧಿಯಲ್ಲಿ ಯುಪಿಎ ಸರಕಾರ ರಾಹುಲ್ ಗಾಂಧಿ ಪರ ನಿಲುವು ಹೊಂದಿರುವ ವಿಜಯ ಮಲ್ಯ, ನೀರವ್ ಮೋದಿ ಸೇರಿದಂತೆ ಹಲವು ಮಂದಿ ಉದ್ಯಮಿಗಳ 34 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವರ್ಚಸ್ಸಿಗೆ ಚ್ಯುತಿ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಉತ್ತಮ ಪ್ರಧಾನಿಯಾಗುವ ಎಲ್ಲಾ ಅರ್ಹತೆಯನ್ನು ಅವರು ಹೊಂದಿದ್ದಾರೆ.
– ತೇಜಸ್ವಿ ಯಾದವ್ ಆರ್‌ಜೆಡಿ ನಾಯಕ
ರಾಮ ಮಂದಿರ ವಿಚಾರ ಸುಪ್ರೀಂಕೋರ್ಟ್ ನಿರ್ಧರಿಸಲಿದೆ. ಯೋಗಿ ಆದಿತ್ಯನಾಥ್ ಅವರೇ ಮೊದಲು ರೈತರ ಸಮಸ್ಯೆಯನ್ನು ಬಗೆಹರಿಸಿ. ಅದಕ್ಕಾಗಿ ಉ.ಪ್ರ.ದ ಜನರು 90 ದಿನಗಳನ್ನು ನೀಡುತ್ತಿದ್ದಾರೆ.
– ಅಖೀಲೇಶ್ ಯಾದವ್ ಎಸ್‌ಪಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್ 2.0? ಇದರ ವೈಶಿಷ್ಟ್ಯವೇನು?
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
26/11 Te*rror Attack: ಕರಾಳ ನೆನಪಿಗೆ 16 ವರ್ಷ-ಆರು ಧೀರ ಹೀರೋಗಳು..ಹುತಾತ್ಮರಿಗೆ ಗೌರವ
Maharashtra: ಮುಖ್ಯಮಂತ್ರಿ ಸ್ಥಾನಕ್ಕೆ ಏಕನಾಥ್ ಶಿಂದೆ ರಾಜೀನಾಮೆ… ಮುಂದಿನ ಸಿಎಂ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.