Watch Video: ಹಗೆತನ ಸಾಧಿಸಿದ್ದಕ್ಕೆ ಕ್ಷಮಿಸಿ ಬಿಡಿ…ಅಮಿತಾಬ್ ಬಚ್ಚನ್ ಗೆ ಅಮರ್ ಸಿಂಗ್
“ಇಂದು ನನ್ನ ತಂದೆಯವರ ಪುಣ್ಯತಿಥಿ. ನಾನು ಅಮಿತಾಬ್ ಬಚ್ಚನ್ ಜೀ ಅವರ ಸಂದೇಶವನ್ನು ಸ್ವೀಕರಿಸಿದೆ.
Team Udayavani, Feb 19, 2020, 11:21 AM IST
ನವದೆಹಲಿ:ತನ್ನ ಹಗೆತನದ ನಡವಳಿಕೆ ಕುರಿತಂತೆ ಅನಾರೋಗ್ಯ ಪೀಡಿತ ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅವರ ಕುಟುಂಬದವರ ಕ್ಷಮೆಯಾಚಿಸಿದ್ದಾರೆ.
ತಮ್ಮ ತಂದೆಯವರ ಪುಣ್ಯತಿಥಿಯ ಸಂದೇಶವನ್ನು ಬಿಗ್ ಬಿ ಕಳುಹಿಸಿದ ನಂತರ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ತನ್ನ ಹಗೆತನದ ನಡವಳಿಕೆ ಬಗ್ಗೆ ಕ್ಷಮಿಸುವಂತೆ ಕೋರಿರುವ ವೀಡಿಯೋವನ್ನು ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
“ಇಂದು ನನ್ನ ತಂದೆಯವರ ಪುಣ್ಯತಿಥಿ. ನಾನು ಅಮಿತಾಬ್ ಬಚ್ಚನ್ ಜೀ ಅವರ ಸಂದೇಶವನ್ನು ಸ್ವೀಕರಿಸಿದೆ. ನನಗೆ ಮತ್ತೆ ನಮ್ಮ ಹಳೆಯ ಗೆಳೆತನ ನೆನಪಿಸಿಕೊಳ್ಳುವಂತಾಗಿದೆ. ನಾನೀನ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದೇನೆ. ಈ ವೇಳೆ ನಾನು ಅಮಿತಾಬ್ ಜೀ ಮತ್ತು ಕುಟುಂಬದವರ ಕ್ಷಮೆಯಾಚಿಸುತ್ತೇನೆ. ಎಲ್ಲರಿಗೂ ದೇವರು ಒಳ್ಳೆಯದು ಮಾಡಲಿ” ಎಂದು ವೀಡಿಯೋದಲ್ಲಿ ಭಿನ್ನವಿಸಿಕೊಂಡಿದ್ದಾರೆ.
ಅಮರ್ ಸಿಂಗ್ ಒಂದು ಕಾಲದಲ್ಲಿ ಅಮಿತಾಬ್ ಬಚ್ಚನ್ ಕುಟುಂಬದ ಅತೀ ನಿಕಟವರ್ತಿಯಾಗಿದ್ದರು. ಆದರೆ ಬಿಗ್ ಬಿ ಪತ್ನಿ ಜಯಾ ಬಚ್ಚನ್ ವಿರುದ್ಧ ಕಟು ಶಬ್ದಗಳಿಂದ ನಿಂದಿಸಿದ ನಂತರ ಉಭಯ ಕುಟುಂಬಗಳ ನಡುವೆ ಮನಸ್ತಾಪದಿಂದ ದೂರಾಗಿ ಬಿಟ್ಟಿದ್ದರು.
“ಅವರು ನನಗಿಂದ ದೊಡ್ಡವರು. ನನಗೆ ಆ ಅಹಂಕಾರದ ಅಮಲು ಇಳಿದಿದೆ. ನನಗೀಗ ಮನವರಿಕೆಯಾಗಿದೆ…ನಾನು ಉಪಯೋಗಿಸಿದ ಶಬ್ದಕ್ಕೆ ಕ್ಷಮೆಯಾಚಿಸಬೇಕು ಎಂದು ನನ್ನ ಮನಸ್ಸಿಗೆ ಬಂದಿದೆ. ಬಚ್ಚನ್ ಕುಟುಂಬ ಯಾವತ್ತೂ ನನಗೆ ನಿರಾಸೆ ಮಾಡಿಲ್ಲ ಎಂದು ಅಮರ್ ಸಿಂಗ್ ವೀಡಿಯೊದಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉತ್ತರ ಭಾರತದಲ್ಲಿ ಕವಿದ ಮಂಜು: ವಿಮಾನ ವ್ಯತ್ಯಯ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.