ಈ ಬಾರಿ ಭಕ್ತರು ಅಮರನಾಥ ಯಾತ್ರೆಯನ್ನು ಒಂದೇ ದಿನದಲ್ಲಿ ಮುಗಿಸಬಹುದು : ಹೇಗೆ ಗೊತ್ತೇ?
Team Udayavani, Jun 17, 2022, 7:50 AM IST
ಶ್ರೀನಗರ: ಈ ತಿಂಗಳು 30ರಿಂದ ಆರಂಭವಾಗುವ ವಿಶ್ವಪ್ರಸಿದ್ಧ ಅಮರನಾಥ ಯಾತ್ರೆಯನ್ನು ಭಕ್ತರು ಇನ್ನು ಒಂದೇ ದಿನದಲ್ಲಿ ಮುಗಿಸಬಹುದು. ಹೇಗೆ ಗೊತ್ತೇ? ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಿಂದ ಅಮರನಾಥಕ್ಕೆ ಹೆಲಿಕಾಪ್ಟರ್‌ನಲ್ಲೇ ತೆರಳಬಹುದು.
ಇದೇ ಮೊದಲ ಬಾರಿಗೆ ಇಂತಹ ಸೇವೆಯೊಂದಕ್ಕೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಗುರುವಾರ ಚಾಲನೆ ನೀಡಿದ್ದಾರೆ. ಈ ಹೆಲಿಕಾಪ್ಟರ್ ಸೇವೆಯನ್ನು ಕಾಯ್ದಿರಿಸಲು ವಿಶೇಷವಾಗಿ ಅಭಿವೃದ್ಧಿಪಡಿಸಿದ ವೆಬ್‌ಸೈಟ್‌ಗೆ ಕೂಡ ರಾಜ್ಯಪಾಲರು ಚಾಲನೆ ನೀಡಿದ್ದಾರೆ.
ಪ್ರಸಕ್ತ ವರ್ಷದ ಯಾತ್ರೆ ಜೂ.30ರಿಂದ ಆ.11ರ ವರೆಗೆ ನಡೆಯಲಿದೆ. ಮುಕ್ತಾಯದ ದಿನ ರಕ್ಷಾಬಂಧನವೂ ಆಗಿರುವುದು ವಿಶೇಷವಾಗಿದೆ. ಅಮರನಾಥ ಯಾತ್ರೆ ನಿಮಿತ್ತ ಈಗಾಗಲೇ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಪವಿತ್ರ ಕ್ಷೇತ್ರದಲ್ಲಿ ಮೊದಲ ಪೂಜೆಯ ಕಾರ್ಯ ಕ್ರಮವನ್ನೂ ಯಶಸ್ವಿಯಾಗಿ ನಡೆಸಲಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.