“ಕೈ’ಕಮಾಂಡ್ ವಿರುದ್ಧ ಕ್ಯಾಪ್ಟನ್ ಮತ್ತೆ ಗುಡುಗು
Team Udayavani, Oct 3, 2021, 6:30 AM IST
ಚಂಡೀಗಢ: ಪಂಜಾಬ್ ಕಾಂಗ್ರೆಸ್‌ನಲ್ಲಿ ಉಲ್ಬಣಿಸಿರುವ ಬಿಕ್ಕಟ್ಟು ಸದ್ಯಕ್ಕೆ ಅಂತ್ಯಗೊಳ್ಳುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಶನಿವಾರದಂದು, ಮಾಧ್ಯಮಗಳಿಗೆ ಪ್ರತಿ ಕ್ರಿಯೆ ನೀಡಿರುವ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಬಹಿ ರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
“ಪಂಜಾಬ್ ಕಾಂಗ್ರೆಸ್‌ನ ಬಿರುಕಿನ ಮೂಲ ವ್ಯಕ್ತಿಯಾಗಿರುವ ಸಿಧು ಅವರ “ಕಾಮಿಡಿ ಜಾಲ’ದಲ್ಲಿ ಪಂಜಾಬ್‌ನ ಹೈಕಮಾಂಡ್ ಹಾಗೂ ಪಕ್ಷದ ರಾಷ್ಟ್ರೀಯ ನಾಯಕರೆಲ್ಲರೂ ಮುಳುಗೇಳುತ್ತಿದ್ದಾರೆ. ಇತ್ತೀಚೆಗೆ, ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೇವಾಲಾ, ಪಂಜಾಬ್‌ನ 79 ಕಾಂಗ್ರೆಸ್ ಶಾಸಕರಲ್ಲಿ 78 ಶಾಸಕರು, ಹೈಕಮಾಂಡ್‌ಗೆ ಪತ್ರ ಬರೆದು ತಮ್ಮ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದರು ಎಂದಿದ್ದರು. ಆದರೆ ಅದೇ ದಿನ ನಡೆದ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಪಂಜಾ ಬ್‌ನ ಉಸ್ತುವಾರಿ ಹೊತ್ತಿರುವ ಹರೀಶ್ ರಾವತ್, 43 ಶಾಸಕರು ನನ್ನ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದರು ಎಂದಿದ್ದಾರೆ. ಮುಂದಿನ ಸುದ್ದಿಗೋಷ್ಠಿಯಲ್ಲಿ 117 ಶಾಸಕರೂ ಪತ್ರ ಬರೆದು ತಮ್ಮ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದ್ದರು ಎಂದು ಹೇಳಬಹುದೇನೋ’ ಎಂದು ಅಮ ರೀಂದರ್ ಹಾಸ್ಯ ಮಾಡಿದ್ದಾರೆ.
“ರಾಹುಲ್ ಬೆಂಬಲಕ್ಕೆ ನಾನು’: ಪಂಜಾಬ್ ಬಿಕ್ಕಟ್ಟಿನ ನಡುವೆಯೇ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, “”ನಾನು ಗಾಂಧೀಜಿ, ಲಾಲ್ ಬಹದ್ದೂರ್ ಶಾಸ್ತ್ರಿವರ ಮೌಲ್ಯಗಳನ್ನು ಎತ್ತಿ ಹಿಡಿಯುತ್ತೇನೆ. ಪಕ್ಷದಲ್ಲಿ ನನಗೆ ಹುದ್ದೆ ಇರಲಿ, ಬಿಡಲಿ, ನನ್ನ ಬೆಂಬಲ ಸದಾ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ವಾದ್ರಾ ಅವರಿಗೆ ಇರುತ್ತದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮುರಿದು ಬಿದ್ದ ಪುತ್ರನ ದಾಂಪತ್ಯ | ಭಾವುಕರಾದ ನಟ ನಾಗಾರ್ಜುನ್
ಕೇಸು ಹಿಂಪಡೆಯಲು ಆದೇಶ: ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟಿನಿಂದಾಗಿ ಆ ಪಕ್ಷಕ್ಕೆ ಆಗಿರುವ ಧಕ್ಕೆಯನ್ನು ನಿವಾರಿಸಲು ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ, ಕೆಲವು ಜನಪರ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.
ಮೊದಲನೆಯದಾಗಿ, ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈಲ್ವೇ ಹಳಿಗಳ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದ ಪಂಜಾಬ್ ರೈತರ ವಿರುದ್ಧದ ಪ್ರಕರಣಗಳನ್ನು ಕೈಬಿಡುವಂತೆ ರೈಲ್ವೇ ಸುರಕ್ಷ ಪಡೆಗೆ (ಆರ್‌ಪಿಎಫ್) ಪತ್ರದ ಮುಖೇನ ಸೂಚಿಸಿರುವುದಾಗಿ ಹೇಳಿದ್ದಾರೆ.
ರಾವತ್, ಬಘೇಲ್‌ಗೆ ಹೊಸ ಹೊಣೆಗಾರಿಕೆ?
ಉತ್ತರ ಪ್ರದೇಶ ಚುನಾವಣೆಯ ಹಿರಿಯ ನಿರೀಕ್ಷಕರನ್ನಾಗಿ ಛತ್ತೀಸಗಢ ಸಿಎಂ ಭೂಪೇಶ್ ಬಘೇಲ್ ಅವರನ್ನು ನೇಮಿಸಲಾಗಿದೆ. ಅವರ ವಿರುದ್ಧ ಶಾಸಕರು ಅತೃಪ್ತಿ ವ್ಯಕ್ತಪಡಿಸಿರು ವಂತೆಯೇ ಈ ಬೆಳವಣಿಗೆ ನಡೆದಿದೆ. ಇನ್ನೊಂದೆಡೆ ಹರೀಶ್ ರಾವತ್ ಅವರ ಮೇಲಿರುವ ಪಂಜಾಬ್ ಉಸ್ತುವಾರಿ ಹೊಣೆಗಾರಿಕೆಯನ್ನು ರಾಜಸ್ಥಾನದ ಕಂದಾಯ ಸಚಿವ ಹರೀಶ್ ಚೌಧರಿ ಅವರಿಗೆ ವರ್ಗಾಯಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ
ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ
Former Prime Minister: ಮನಮೋಹನ್ ಸಿಂಗ್ ಕುಟುಂಬದ ಪರಿಚಯ; ನಡೆದು ಬಂದ ಹಾದಿ….
Mumbai: ಬ್ರೇಕಪ್ ನಿಜ: ಮೌನ ಮುರಿದ ನಟಿ ಮಲೈಕಾ ಅರೋರಾ!
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಹೆಬ್ಬಾಳ್ಕರ್-ಸಿ.ಟಿ.ರವಿ ಪ್ರಕರಣ ಸಂಧಾನಕ್ಕೆ ಸಿದ್ಧ: ಬಸವರಾಜ ಹೊರಟ್ಟಿ
ಲೋಕ ಚುನಾವಣೆಯಲ್ಲಿ ಪುರುಷರಗಿಂತ ಸ್ತ್ರೀಯರಿಗಿಂತ ಹೆಚ್ಚು ಮತದಾನ: ಚು.ಆಯೋಗ
Daily Horoscope: ಧೈರ್ಯವನ್ನು ಕುಗ್ಗಿಸುವ ವಿದ್ಯಮಾನಗಳು, ವ್ಯಾಪಾರಿ ಗಳಿಗೆ ನಿರೀಕ್ಷಿತ ಲಾಭ
ಲಾಂಛನ ದುರ್ಬಳಕೆಗೆ 5 ಲಕ್ಷ ದಂಡ, ಜೈಲು? ಕಾನೂನು ತಿದ್ದುಪಡಿಗೆ ಕೇಂದ್ರ ಸರ್ಕಾರ ಚಿಂತನೆ
Poster Dispute: ಭಾರತ ಭೂಶಿರ ವಿರೂಪ: ಬಿಜೆಪಿಯ ಇಂದಿನ ಪ್ರತಿಭಟನೆ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.