ನಾಳೆ ಅಮರನಾಥ ಯಾತ್ರೆ: ಬೇಸ್ ಕ್ಯಾಂಪ್‌ಗೆ ಬಂದ ಭಕ್ತರು: ಎಲ್ಲೆಲೂ ಭೋಲೇನಾಥ್ ಜಯಘೋಷ
Team Udayavani, Jun 29, 2022, 7:10 AM IST
ಜಮ್ಮು: ಬರೋಬ್ಬರಿ ಎರಡು ವರ್ಷಗಳ ಬಳಿಕ ಬಳಿಕ ಜೂ.30ರಿಂದ ಪವಿತ್ರ ಅಮರನಾಥ ಯಾತ್ರೆ ಶುರುವಾಗಲಿದೆ.
ಹೀಗಾಗಿ, ಜಮ್ಮು ಮತ್ತು ಕಾಶ್ಮೀರದ ಭಗವತಿ ನಗರದಲ್ಲಿ ಎಲ್ಲೆಲ್ಲೋ “ಭಂ ಭಂ ಭೋಲೆ’ ಮತ್ತು “ಜೈ ಬರ್ಫಾನಿ ಬಾಬಾ ಕಿ ಜೈ’ ಎಂಬ ಘೋಷಣೆಗಳು ಮೊಳಗಲಾರಂಭಿಸಿವೆ.
ಹಿಮಾಚ್ಛಾದಿತ ಗುಹೆಯಲ್ಲಿರುವ ಪವಿತ್ರ ಶಿವಲಿಂಗದ ದರ್ಶನಕ್ಕಾಗಿ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿವೆ.
ಬುಧವಾರ ಮೊದಲ ತಂಡ ಜಮ್ಮು ಬೇಸ್ ಕ್ಯಾಂಪ್‌ನಿಂದ ಗುಹಾ ದೇವಾಲಯದತ್ತ ಯಾತ್ರೆ ಶುರು ಮಾಡಲಿದೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು, ಬೆಳಗ್ಗೆ ನಾಲ್ಕು ಗಂಟೆಗೆ ಹಸಿರು ನಿಶಾನೆ ತೋರಿ ಉದ್ಘಾಟನೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರಾಡಳಿತ ಪ್ರದೇಶದ ಹಿರಿಯ ಅಧಿಕಾರಿಗಳು ಉಪಸ್ಥಿತರಿರಲಿದ್ದಾರೆ.
ಬಹುಹಂತದ ಭದ್ರತಾ ವ್ಯವಸ್ಥೆಯನ್ನು ಈಗಾಗಲೇ ಅಳವಡಿಸಿಕೊಳ್ಳಲಾಗಿದೆ ಮತ್ತು ಸುಮಾರು 5 ಸಾವಿರ ಮಂದಿ ಭದ್ರತಾ ಪಡೆಯನ್ನು ಜಮ್ಮು ನಗರ ಮತ್ತು ಯಾತ್ರೆ ನಡೆಯುವ ಸ್ಥಳಗಳಲ್ಲಿ ನಿಯೋಜನೆ ಮಾಡಲಾಗಿದೆ.
ಹೆದರಿಕೆಯೇ ಇಲ್ಲ:
ದೇಶದ ವಿವಿಧ ಭಾಗಗಳಿಂದ ಈಗಾಗಲೇ ಭಕ್ತಾದಿಗಳು ಆಗಮಿಸುತ್ತಿದ್ದಾರೆ. “ನಮಗೆ ಯಾವ ಹೆದರಿಕೆಯೂ ಇಲ್ಲ. ಬಾಬಾ ಅಮರನಾಥ್ ಜಿ ನಮ್ಮ ರಕ್ಷಣೆಗೆ ಇದ್ದಾರೆ’ ಎಂದು ಲಕ್ನೋದ ವಿಜಯ ಕುಮಾರ್ ಹೇಳಿದ್ದಾರೆ. ಅವರು 12 ಮಂದಿ ಸದಸ್ಯರ ತಂಡದ ಜತೆಗೆ ಆಗಮಿಸಿದ್ದು, ಮೊದಲ ತಂಡದಲ್ಲಿಯೇ ದೇಗುಲದತ್ತ ಪ್ರಯಾಣ ಶುರು ಮಾಡಲಿದ್ದಾರೆ.
ಬೆಂಗಳೂರಿನ ಉಪ್ಮಿತಾ ಎಂಬುವರು ಮಾತನಾಡಿ “ಬೇಸ್ ಕ್ಯಾಂಪ್‌ಗೆ ಬರುತ್ತಲೇ ಹೆದರಿಕೆ ಮಾಯವಾಯಿತು. ಎಲ್ಲ ವ್ಯವಸ್ಥೆಯೂ ಚೆನ್ನಾಗಿಯೇ ಇದೆ’ ಎಂದು ಹೇಳಿದ್ದಾರೆ.
400 ಮಂದಿ ಸಾಧುಗಳು:
ದೇಶದ ವಿವಿಧ ಭಾಗಗಳಿಂದ 400 ಮಂದಿ ಸಾಧುಗಳೂ ಕೂಡ ಮೊದಲ ತಂಡದಲ್ಲಿದ್ದಾರೆ. ಸದ್ಯ ಒಟ್ಟು 3 ಸಾವಿರ ಮಂದಿ ಆಗಮಿಸಿದ್ದು, ನೋಂದಣಿ ಪ್ರಕ್ರಿಯೆ ಪೂರೈಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರು ಸಾವು:
ಇನ್ನೊಂದೆಡೆ, ಕುಪ್ವಾರ ಜಿಲ್ಲೆಯಲ್ಲಿ ಇಬ್ಬರು ಉಗ್ರರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ. ಎಲ್‌ಒಸಿಯ ಬಳಿ ನಡೆದ ಗುಂಡಿನ ಚಕಮಕಿಯಲ್ಲಿ ಅವರು ಅಸುನೀಗಿದ್ದಾರೆ.
400 ಸಾಧುಗಳು
3 ಸಾವಿರ ಮಂದಿ- ಇದುವರೆಗೆ ಬಂದವರು
ಎರಡು ದಾರಿಗಳು
ಪೆಹಲ್‌ಗಾಂವ್‌ನ ನುನ್‌ವಾನ್ ಮೂಲಕ 48 ಕಿಮೀ
ಗಂಡೆರ್‌ಬಾಲ್ ಮೂಲಕ 14 ಕಿಮೀ (ಹತ್ತಿರದ ದಾರಿ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.