ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್
Team Udayavani, Sep 18, 2019, 3:05 AM IST
ನವದೆಹಲಿ: ದೇಶದ ಅತಿ ದೊಡ್ಡ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನ್ನು ಅಮೆಜಾನ್.ಇನ್ ಘೋಷಿಸಿದೆ. ಸೆ.29ರ ಬೆ.11:59 ರಿಂದ ಆರಂಭವಾಗುವ ಫೆಸ್ಟಿವಲ್ ಮಾರಾಟ ಅ.4 ವರೆಗೆ ನಡೆಯಲಿದೆ. ಪ್ರೈಮ್ ಸದಸ್ಯರು ಮಾತ್ರ Amazon.inಗೆ ಸೆ.28ರ ಮಧ್ಯಾಹ್ನ 12 ಗಂಟೆ ಯಿಂದಲೇ ಪ್ರವೇಶ ಪಡೆಯಲಿದ್ದಾರೆ ಎಂದು ಅಮೆಜಾನ್ ಸೆಲ್ಲರ್ ಸರ್ವೀಸಸ್ ಪ್ರೈ. ಲಿ., ತಿಳಿಸಿದೆ.
#AmazonFestivYatra ಸಂದರ್ಭದಲ್ಲಿ ಸ್ಮಾರ್ಟ್‌ಫೋನ್‌ಗಳು, ದೊಡ್ಡ ವಸ್ತುಗಳು, ಸಲಕರಣೆಗಳು ಮತ್ತು ಟಿವಿಗಳು, ಗೃಹೋಪಯೋಗಿ ಮತ್ತು ಅಡುಗೆ ಉತ್ಪನ್ನಗಳು, ಫ್ಯಾಷನ್, ದಿನಸಿ ಮತ್ತು ಸೌಂದರ್ಯ ವಸ್ತುಗಳು, ಎಲೆಕ್ಟ್ರಾನಿಕ್ಸ್ ಮುಂತಾದ ಉತ್ಪನ್ನಗಳನ್ನು ಗ್ರಾಹಕರು ಮಾರಾಟಗಾರರಿಂದ ನೇರವಾಗಿ ಅಮೆಜಾನ್.ಇನ್ ಮೂಲಕ ಖರೀದಿಸಬಹುದಾಗಿದೆ.
ಒಂದು ರೀತಿಯಲ್ಲಿ ಹೌಸ್-ಆನ್-ವೀಲ್ಸ್ ರೀತಿ ಮಾರಾಟ ಇದಾಗಿದ್ದು, ಮನೆಯಲ್ಲಿ ಕುಳಿತು ತಮ್ಮ ಇಷ್ಟದ ವಸ್ತುಗಳನ್ನು ಆಯ್ಕೆ ಮಾಡಿ ಖರೀದಿಸುವ ಸಂಭ್ರಮದ ಹಬ್ಟಾಚರಣೆ ಇದಾಗಿದೆ. ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ ದೊಡ್ಡ ಬ್ರ್ಯಾಂಡ್‌ಗಳನ್ನು ಮಾತ್ರವಲ್ಲದೆ, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು, ಸ್ಟಾರ್ಟ್‌ಅಪ್‌ಗಳು ಹಾಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ವಿಶಿಷ್ಟ ಉತ್ಪನ್ನಗಳು ದೊರೆಯಲಿವೆ.
ಬುಡಕಟ್ಟು ಜನಾಂಗದ ಕಲೆ, ಗುಜರಾತಿನ ಮಿರರ್ ವರ್ಕ್, ಅಸ್ಸಾಂನ ಬಿದಿರಿ ಅಲಂಕಾರ, ತಂಜಾವೂರು ಚಿತ್ರಕಲೆ, ಖಾದಿ, ಇಕ್ಕತ್, ಪೋಚಂ ಪಲ್ಲಿ, ಫುಲ್ಕಾರಿ, ಮಧುಬನಿ ಮುದ್ರಣಗಳಂತಹ ಸಾಂಪ್ರದಾಯಿಕ ನೇಯ್ಗೆಗಳು, ಬಿಹಾರದಿಂದ ಬಹು-ಬಣ್ಣದ ಫಲಕ ಗಳು ಸೇರಿದಂತೆ ಭಾರತೀಯರ ಉದ್ಯಮಶೀಲತಾ ಮನೋಭಾವವನ್ನು ಮತ್ತು ನಾವೀನ್ಯತೆಯನ್ನು ನೋಡುವ ಅವಕಾಶ ಇದಾಗಿದೆ.
ವಿಶೇಷ ಅಮೆಜಾನ್ ಫೆಸ್ಟಿವ್ ಯಾತ್ರಾ ಟಾಟಾ ಮೋಟಾರ್ ಪಾಲುದಾರಿಕೆಯಲ್ಲಿ ಮೂರು ಟಾಟಾ ಸಿಗ್ನಾ ಟ್ರಕ್‌ಗಳು ಮಾರಾಟದಲ್ಲಿ ತೊಡಗಿಸಿ ಕೊಂಡಿವೆ. 13 ನಗರಗಳ 6,000 ಕಿ.ಮೀ. ವ್ಯಾಪ್ತಿಯಲ್ಲಿ ಅಮೆಜಾನ್ ಗ್ರಾಹಕರು ಮತ್ತು ಮಾರಾಟಗಾರರಿಗೆ ಒಳನೋಟಗಳು ಮತ್ತು ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಉತ್ತಮ ಅವಕಾಶವನ್ನು ಅಮೆಜಾನ್.ಇನ್ ಒದಗಿಸಿದೆ.
ಅಮೆಜಾನ್ ಫೆಸ್ಟಿವ್ ಯಾತ್ರಾ ದೆಹಲಿಯಿಂದ ಪ್ರಾರಂಭವಾಗಿ ಲಕ್ನೊ, ಅಹಮದಾಬಾದ್, ಹೈದರಾ ಬಾದ್ ಮೂಲಕ ಬೆಂಗಳೂರಿನಲ್ಲಿ ತನ್ನ ಪ್ರವಾಸವನ್ನು ಕೊನೆಗೊಳಿಸಲಿದೆ. ಯಾತ್ರಾ ವಾಹನ, ಪ್ರಯಾಣದ ದಾರಿಯಲ್ಲಿ ತನ್ನ ಗ್ರಾಹಕರು ಮತ್ತು ಮಾರಾಟಗಾರರೊಂದಿಗೆ ಆಗ್ರಾ, ಚೆನ್ನೈ, ಇಂಡೋರ್, ಕೋಲ್ಕತಾ, ಕೊಚ್ಚಿ, ಮಥುರಾ, ಮುಂಬೈ ಮತ್ತು ವಿಶಾಖಪಟ್ಟಣಂನಲ್ಲಿ ಮಾರಾಟದಲ್ಲಿ ತೊಡಗಿಸಿಕೊಳ್ಳಲಿದೆ.
ಉಪಾಧ್ಯಕ ಗೋಪಾಲ್ ಪಿಳ್ಳೈ ಮಾತನಾಡಿ, ಅಮೆಜಾನ್ ಇಂಡಿಯಾದ ಸೆಲ್ಲರ್ ಸರ್ವೀಸಸ್ ಪ್ರತಿವರ್ಷ ನಮ್ಮ ಲಕ್ಷಾಂತರ ಗ್ರಾಹಕರಿಗೆ ಹಾಗೂ ನಮ್ಮ ಲಕ್ಷಾಂತರ ಮಾರಾಟಗಾರರಿಗೆ ಈ ಬ್ಲಾಕ್ ಬಸ್ಟರ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಮಾರಾಟವನ್ನು ತಲುಪಿಸಲು ಅನುಕೂಲವಾಗಿದೆ. ಈ ಹಬ್ಬದ ಆಚರಣೆಯನ್ನು ಆಚರಿಸಲು ಭಾರತದಾದ್ಯಂತದ ಬ್ರಾಂಡ್‌ಗಳು, ಎಸ್‌ಎಂಬಿಗಳು, ಕುಶಲ ಕರ್ಮಿಗಳು, ನೇಕಾರರು, ಟೆಕ್ ಸ್ಟಾರ್ಟ್‌ಅಪ್‌ಗ್ಳು ಇತ್ಯಾದಿಗಳನ್ನು ಒಳಗೊಂಡಿರುವ ವೈವಿಧ್ಯಮಯ 5 ಲಕ್ಷ ವ್ಯವಹಾರಗಳು ಅಮೆಜಾನ್.ಇನ್‌ನ್ನು ತಮ್ಮ ಆಯ್ಕೆಯ ಮಾರುಕಟ್ಟೆಯನ್ನಾಗಿ ಆರಿಸಿಕೊಳ್ಳುತ್ತಿವೆ ಎಂದು ವಿವರಿಸಿದರು.
ಸಿಬಿಯುವಿನ ಉಪಾಧ್ಯಕ್ಷರು, ಮಾರಾಟ ಮತ್ತು ಮಾರುಕಟ್ಟೆ (ದೇಶೀಯ) ರಾಜೇಶ್ ಕೌಲ್ ಮಾತನಾಡಿ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು Amazon.inಗೆ ಲಾಗ್ ಇನ್ ಮಾಡಲು ತಿಳಿಸಿದರು.
ಇದೊಂದು ವಿಶಿಷ್ಟ ಆಚರಣೆ – ಮನೀಶ್ ತಿವಾರಿ: ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್, ಭಾರತೀಯ ಗ್ರಾಹಕರು ನಿರೀಕ್ಷಿಸುವ ಸಮಯ. ಈ ಅವಧಿಯಲ್ಲಿ ಗ್ರಾಹಕರಿಗೆ ಸಾಕಷ್ಟು ಉತ್ತೇಜಕ ಮತ್ತು ವ್ಯಾಪಕ ಕೊಡುಗೆಗಳಿರುತ್ತವೆ. ಬ್ಯಾಂಕ್ ರಿಯಾಯಿತಿ ಗಳು, ಅಮೆಜಾನ್ ಪೇ ಇಎಂಐ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು ಬಜಾಜ್ ಫಿನ್ಸರ್ವ್ ಕಾರ್ಡ್‌ಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐಗಳು, ತ್ವರಿತ ವಿತರಣೆ ಮತ್ತು ಉಪಕರಣಗಳ ಸ್ಥಾಪನೆ, ಮೊಬೈಲ್ ಫೋನ್‌ಗಳ ವಿನಿಮಯ ಮತ್ತು ದೊಡ್ಡ ಉಪಕರಣ ಗಳು, ಆಕರ್ಷಕ ಕ್ಯಾಶ್‌ಬ್ಯಾಕ್ ಮತ್ತಿತರ ಕೊಡುಗೆ ಗಳು ಇರುವುದರಿಂದ ನಮ್ಮ ಗ್ರಾಹ ಕರು ಈ ವಿಶಿಷ್ಟ ಆಚರಣೆಯನ್ನು ಎದುರು ನೋಡುತ್ತಿರುತ್ತಾರೆ ಎಂದು ಅಮೆಜಾನ್ ಇಂಡಿಯಾ ಉಪಾಧ್ಯಕ್ಷ ಮನೀಶ್ ತಿವಾರಿ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.