ತೆಂಗಿನ ಚಿಪ್ಪಿಗೂ ಚಿನ್ನದ ಬೆಲೆ
Team Udayavani, Jan 17, 2019, 12:30 AM IST
ಹೊಸದಿಲ್ಲಿ: ತೆಂಗಿನ ಕಾಯಿ ಚಿಪ್ಪು (ಗೆರಟೆ) ನಮ್ಮ ನಿಮ್ಮ ಮನೆಯಲ್ಲಿ ಅಲ್ಲಲ್ಲೇ ಬಿದ್ದಿರುತ್ತದೆ. ಅದಕ್ಕೇನಾದರೂ ಮಾರುಕಟ್ಟೆ ಮೌಲ್ಯ ಇದೇಯೇ? ಚಿಪ್ಪು ಮಾರಾಟಕ್ಕಿದೆ ಎಂದು ಮಾರುಕಟ್ಟೆಯಲ್ಲಿ ಗುಡ್ಡೆ ಮಾಡಿಟ್ಟು ಕಳಿತರೆ “ಯಾರಪ್ಪ ಈತ’ ಎಂದು ಪ್ರಶ್ನೆ ಮಾಡಿಕೊಳ್ಳವರೇ ಹೊರತು ಮಾರಾಟವಂತೂ ಖಂಡಿತಾ ಆಗದು. ನೀವು ನಂಬಿದರೆ ನಂಬಿ, ಬಿಡಿ. ವೆಬ್ಸೈಟ್ ಒಂದರಲ್ಲಿ ಮಾರಲಾ ಗುತ್ತಿದೆ. ಚಿಪ್ಪಿಗೆ 1, 289 ರೂ.ಗಳಿಂದ ಮಾರಾಟವಾಗುತ್ತಿದೆ. ಈ ಬಗ್ಗೆ ವಾಟ್ಸ್ಆ್ಯಪ್, ಫೇಸ್ಬುಕ್ಗಳಲ್ಲಿ ಹಲವು ದಿನಗಳಿಂದ ಹಲವು ರೀತಿಯ ಫೋಟೋ, ವಿಡಿಯೋಗಳು ಹರಿದಾಡುತ್ತಿವೆ.
ಕಾಯಿ ತೆಗೆದ ಬಳಿಕ ಚಿಪ್ಪಿಗೆ ಇಷ್ಟೊಂದು ಬೆಲೆ ಇರುತ್ತಾ ಎಂದು ಮೂಗಿನ ಮೇಲೆ ಬೆರಳು ಇರಿಸುವ ಕಾಲ ಬಂದಿದೆ. ಈ ಬಗ್ಗೆ “ಎನ್ಡಿಟಿವಿ’ ವರದಿ ಮಾಡಿದೆ.
“ಇದು ನಿಜವಾದ, ಸತ್ಯವಾದ ತೆಂಗಿನ ಕಾಯಿ. ಹೀಗಾಗಿ ಅದರಲ್ಲಿ ಬಿರುಕು, ಬಾಗಿದ ಮತ್ತು ಇತರ ಓರೆಕೋರೆ ಇರಬಹುದು’ ಎಂದು ಮಾರಾಟಕ್ಕೆ ಇರಿಸಲಾಗಿರುವ ಚಿಪ್ಪಿನ ಬಗ್ಗೆ ವಿವರಣೆ ನೀಡಲಾಗಿದೆ.ಸುಶಾನ್ ಪೂಜಾರಿ ಎಂಬುವರು ಟ್ವೀಟ್ ಮಾಡಿ “ತೆಂಗಿನ ಚಿಪ್ಪಿನ ಮೇಲೆ ಶೇ.65ರಷ್ಟು ಡಿಸ್ಕೌಂಟ್ ನೀಡಿ ಶ್ರೀಮಂತನಾಗುವೆ. ಬಳಿಕ ವೆಬ್ಸೈಟ್ ಅನ್ನು ಖರೀದಿಸುವೆನೋ ಎಂದು ತಿಳಿದುಕೊಳ್ಳುತ್ತೇನೆ’ ಎಂದು ಬರೆದು ಕೊಂಡಿದ್ದಾರೆ. ಕುತೂಹಲಕರ ವಿಚಾರವೆಂದರೆ ಅಮೆಜಾನ್ನಿಂದ ಅದನ್ನು ಖರೀದಿ ಮಾಡಿ ದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶೋರೂಮ್ಗಳಲ್ಲಿ ಹೋದರೆ ಅದಕ್ಕೆ 3 ಸಾವಿರ ರೂ. ನೀಡಬೇಕು. ವೆಬ್ಸೈಟ್ನಲ್ಲಿ ಕಡಿಮೆಯಲ್ಲಿ ಸಿಕ್ಕಿದೆ ಎಂದು ಹೇಳಿ ಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Govt Employees: 8ನೇ ವೇತನ ಆಯೋಗ ಶಿಫಾರಸು ಜಾರಿಯಾದರೆ ಕನಿಷ್ಠ ವೇತನ 51000 ರೂ.!
Winter Session: ಸಂಸತ್ ಅಧಿವೇಶನ ನಾಡಿದ್ದಿಂದ:”ವಕ್ಫ್’ ವಿಧೇಯಕ ಮಂಡನೆ?
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Adani ಗ್ರೂಪ್ಗೆ ಸಾಲ: ಜಾಗತಿಕ ಬ್ಯಾಂಕ್ಗಳಿಂದ ತಾತ್ಕಾಲಿಕ ಬ್ರೇಕ್?
India: ಕೃತಕ ಬುದ್ಧಿಮತ್ತೆ ತಜ್ಞರಿರುವ 2ನೇ ಅಗ್ರ ರಾಷ್ಟ್ರ ಭಾರತ!
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.