ಇನ್ನು ರೈಲಿನಲ್ಲೂ ಅಮೆಜಾನ್ ಪಾರ್ಸೆಲ್ ಸಾಗಾಟ
Team Udayavani, Oct 22, 2019, 5:03 PM IST
ಹೊಸದಿಲ್ಲಿ: ಪ್ರಯಾಣಿಕರ ಟಿಕೆಟ್‌ನಿಂದ ಹೊರತಾಗಿ ವಿವಿಧ ಮೂಲಗಳಿಂದ ಆದಾಯ ವೃದ್ಧಿಗೆ ಮುಂದಾಗಿರುವ ಭಾರತೀಯ ರೈಲ್ವೇ ಈಗ ರೈಲುಗಳಲ್ಲಿ ಅಮೆಜಾನ್ ಪಾರ್ಸೆಲ್ ಸಾಗಾಟಕ್ಕೆ ಮುಂದಾಗಿದೆ.
ಈ ಬಗ್ಗೆ ಒಪ್ಪಂದಕ್ಕೆ ಮುಂದಾಗಿದೆ. ಮುಂದಿನ ಮೂರು ತಿಂಗಳ ಕಾಲ ಪ್ರಾಯೋಗಿಕ ನೆಲೆಯಲ್ಲಿ ದಟ್ಟನೆ ಇಲ್ಲದ ಸಂದರ್ಭಗಳಲ್ಲಿ ರೈಲುಗಳಲ್ಲಿ ಅಮೆಜಾನ್ ಪಾರ್ಸೆಲ್‌ಗಳನ್ನು ಸಾಗಿಸಲಾಗುತ್ತದೆ. ಪೂರ್ವ ರೈಲ್ವೇಯ ಸೆಲ್ದಾ ಮತ್ತು ದಂಕುನಿ ಮಧ್ಯೆ ಇ-ಕಾಮರ್ಸ್ ವೆಬ್‌ಸೈಟ್‌ಗಳ ಪಾರ್ಸೆಲ್ ಸಾಗಿಸಲು ಉದ್ದೇಶಿಸಲಾಗಿದೆ. ದಿನಕ್ಕೆ ಒಟ್ಟು 7 ಮೆಟ್ರಿಕ್ ಟನ್‌ನಷ್ಟು ಪಾರ್ಸೆಲ್ ಸಾಗಿಸಲು ಅನುಮತಿ ಕಲ್ಪಿಸಲಾಗುವುದು. ಬೆಳಗ್ಗೆ 11ರಿಂದ ಸಂಜೆ 4ರವರೆಗೆ ಈ ಪಾರ್ಸೆಲ್‌ಗಳನ್ನು ರೈಲುಗಳಲ್ಲಿ ಸಾಗಿಸಲು ಅನುಮತಿ ಕಲ್ಪಿಸಲಾಗುತ್ತದೆ.
ಹೆಚ್ಚುವರಿ ಯಾವುದೇ ಸೌಕರ್ಯಗಳಿಲ್ಲದೆ ಇ ಕಾಮರ್ಸ್ ವೆಬ್ ಗೆ ಈ ವ್ಯವಸ್ಥೆ ಕಲ್ಪಿಸುವುದರಿಂದ ರೈಲ್ವೇಗೆ ಲಾಭವಾಗಲಿದೆ. ಅಲ್ಲದೆ ಮಾರಾಟಗಾರರಿಗೆ ಕಡಿಮೆ ಅವಧಿಯಲ್ಲಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗಲಿದೆ. ಪ್ರಯೋಗಿಕ ಯೋಜನೆಯ ಯಶಸ್ಸಿನ ಆಧಾರದ ಮೇಲೆ ಇತರ ಮಾರ್ಗಗಳಲ್ಲೂ ಪಾರ್ಸೆಲ್ ಸಾಗಾಟಕ್ಕೆ ರೈಲ್ವೇ ತೀರ್ಮಾನ ಕೈಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
MUST WATCH
ಹೊಸ ಸೇರ್ಪಡೆ
BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್
Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ
Mangaluru: ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
J-K: ಭೀಕರ ಅಪಘಾ*ತದಲ್ಲಿ SUV ಚಲಾಯಿಸುತ್ತಿದ್ದ 17 ರ ಹುಡುಗರಿಬ್ಬರು ಮೃ*ತ್ಯು
Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.