370ನೇ ವಿಧಿಗೆ ಖಂಡತುಂಡವಾಗಿ ವಿರೋಧಿಸಿದ್ದ ಅಂಬೇಡ್ಕರ್‌!

370ನೇ ವಿಧಿ ಜಾರಿಯಿಂದ ಸಮಸ್ಯೆ ಸೃಷ್ಟಿಯಾಗುತ್ತದೆ; ಇದರಿಂದ ದೇಶದ ಹಿತಕ್ಕೆ ಧಕ್ಕೆ ಎಂದಿದ್ದ ಸಂವಿಧಾನ ಶಿಲ್ಪಿ

Team Udayavani, Aug 6, 2019, 5:00 AM IST

BR

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದಾಗುತ್ತಿದ್ದಂತೆ, ಅತ್ಯಂತ ಕುತೂಹಲಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ. ಭಾರತೀಯ ಸಂವಿಧಾನವನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ನೇತೃತ್ವದಲ್ಲಿ ರಚಿಸಿದ್ದರೂ, ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಗೆ ಅಂಬೇಡ್ಕರ್‌ ಅವರು ಸುತಾರಾಂ ಒಪ್ಪಿರಲಿಲ್ಲವಂತೆ.

ಅಂಬೇಡ್ಕರ್‌ ತಿರಸ್ಕಾರ ಮಾಡಿದಾಗ, ಅಂದಿನ ಪ್ರಧಾನಿ ಜವಾಹಾರ್‌ ಲಾಲ್‌ ನೆಹರೂ, ಸಂವಿಧಾನ ರಚನಾ ಸಮಿತಿಯ ಇನ್ನೊಬ್ಬ ಸದಸ್ಯ ಎನ್‌.ಗೋಪಾಲಸ್ವಾಮಿ ಅಯ್ಯಂಗಾರ್‌ ಅವರಿಗೆ ಹೇಳಿ, ಕಾಶ್ಮೀರಕ್ಕೆ ಪೂರಕವಾದ ಸಂವಿಧಾನ ರಚಿಸಲು ಆದೇಶಿಸಿದರು! ಹೀಗೆಂದು ಲಾ ಕಾರ್ನರ್‌ ಎಂಬ ಬ್ಲಾಗ್‌ನಲ್ಲಿ ಪ್ರಕಟವಾಗಿದೆ.

370ನೇ ವಿಧಿಯ ಕಾರಣ ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ, ಸಂವಿಧಾನ ಲಭ್ಯವಾಗಿತ್ತು. ರಕ್ಷಣೆ, ವಿದೇಶಾಂಗ ಹೊರತುಪಡಿಸಿ ಉಳಿದೆಲ್ಲ ವಿಚಾರಗಳಲ್ಲಿ ಸ್ವಾಯತ್ತತೆ ಲಭಿಸಿತ್ತು. ಈ ರೀತಿಯ ಪ್ರತ್ಯೇಕತೆಯಿಂದ ಕಾಶ್ಮೀರ ರಾಜ್ಯ ದೇಶದ ಉಳಿದೆಲ್ಲ ರಾಜ್ಯಗಳಿಗಿಂತ ಭಿನ್ನವಾಗುತ್ತದೆ. ಅದು ಸಮಾನ ಸ್ಥಾನಮಾನ ಕಳೆದುಕೊಳ್ಳುತ್ತದೆ. ಕಾಶ್ಮೀರ ಅಭಿವೃದ್ಧಿಯನ್ನೂ ಹೊಂದುವುದಿಲ್ಲ, ಹಾಗೆಯೇ ಭವಿಷ್ಯದಲ್ಲಿ ಹಲವಾರು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಈ ವಿಧಿಯಿಂದ ಕಾಶ್ಮೀರದ ಸಮಸ್ಯೆ ಬಗೆಹರಿಸುವುದಕ್ಕಿಂತ ಸಮಸ್ಯೆ ಸೃಷ್ಟಿಗೆ ಕಾರಣವಾಗುತ್ತದೆ ಎಂದು ಅಂಬೇಡ್ಕರ್‌ ಬಲವಾಗಿ ಭಾವಿಸಿದ್ದರು ಎಂದು ಲಾ ಕಾರ್ನರ್‌ ಹೇಳಿದೆ.

ಇದು ದೇಶದ ಹಿತಾಸಕ್ತಿ ವಿರುದ್ಧ:ನೆಹರೂ ನಿರ್ದೇಶನದಂತೆ ಕಾಶ್ಮೀರಿ ನಾಯಕ ಶೇಖ್‌ ಅಬ್ದುಲ್ಲಾ, 1949ರಲ್ಲಿ ಅಂದಿನ ಕಾನೂನು ಮಂತ್ರಿ ಅಂಬೇಡ್ಕರ್‌ರನ್ನು ಸಂಪರ್ಕಿಸುತ್ತಾರೆ. ಆಗ ಅವರಿಗೆ ನೀಡಿದ ಪ್ರತಿಕ್ರಿಯೆ ಹೀಗಿದೆ: “ನೀವು ಕಾಶ್ಮೀರವನ್ನು ಭಾರತ ರಕ್ಷಣೆ ಮಾಡಬೇಕೆಂದು ಬಯಸುತ್ತೀರಿ, ಅಲ್ಲಿ ರಸ್ತೆ ನಿರ್ಮಿಸಬೇಕು, ಆಹಾರಧಾನ್ಯ ಪೂರೈಸಬೇಕೆಂದು ಬಯಸುತ್ತೀರಿ. ಜೊತೆಗೆ ಕಾಶ್ಮೀರ ಭಾರತಕ್ಕೆ ಸಮಾನ ಸ್ಥಾನ ಪಡೆಯಬೇಕೆಂದು ಬಯಸುತ್ತೀರಿ. ಆದರೆ ಇದರಿಂದ ಕಾಶ್ಮೀರದ ಮೇಲೆ ಕೇಂದ್ರ ಸರಕಾರಕ್ಕೆ ಕಡಿಮೆ ಅಧಿಕಾರವಿರುತ್ತದೆ. ಭಾರತದ ಇತರೆ ಜನತೆಗೂ ಕಾಶ್ಮೀರದ ಮೇಲೆ ಹಕ್ಕಿರುವು ದಿಲ್ಲ. ನಿಮ್ಮ ಈ ಶಿಫಾರಸಿಗೆ ನಾನು ಒಪ್ಪಿಗೆ ಸೂಚಿಸಿದರೆ ದೇಶದ ಹಿತಕ್ಕೆ ಘಾತ ಮಾಡಿದಂತಾ ಗುತ್ತದೆ. ದೇಶದ ಕಾನೂನು ಮಂತ್ರಿಯಾಗಿ ನಾನಿದಕ್ಕೆ ಒಪ್ಪಿಗೆ ನೀಡುವುದಿಲ್ಲ’ ಹೀಗೆಂದು ಅಂಬೇಡ್ಕರ್‌ ಖಂಡತುಂಡವಾಗಿ ಹೇಳುತ್ತಾರೆ.

ಆಗ ನೆಹರೂ ನಿರ್ದೇಶನದಂತೆ ಶೇಖ್‌ ಅಬ್ದುಲ್ಲಾ, ಗೋಪಾಲಸ್ವಾಮಿ ಐಯ್ಯಂಗಾರ್‌ರನ್ನು ಸಂಪರ್ಕಿಸುತ್ತಾರೆ. ಆ ವೇಳೆ ನೆಹರೂ ಅಮೆರಿಕ ಪ್ರವಾಸದಲ್ಲಿದ್ದರಿಂದ ಆಗಿನ ಗೃಹ ಸಚಿವ ಸರ್ದಾರ್‌ ವಲ್ಲಭಭಾಯ್‌ ಪಟೇಲರನ್ನು ಗೋಪಾಲಸ್ವಾಮಿ ಭೇಟಿ ಮಾಡುತ್ತಾರೆ. ಸುದೀರ್ಘ‌ ಚರ್ಚೆ ನಡೆಯುತ್ತದೆ. ಕಡೆಗೆ ಪಟೇಲರು ಒಪ್ಪುತ್ತಾರೆ. ಅಂತೂ ಇಂತೂ ಬಹಳ ವಿರೋಧದ ನಡುವೆಯೇ ಪ್ರತ್ಯೇಕ ಸ್ಥಾನಮಾನ ಸಂವಿಧಾನ ಸೇರಿಕೊಳ್ಳುತ್ತದೆ!

ಟಾಪ್ ನ್ಯೂಸ್

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

5-madikeri

ಮಾದಕ ವಸ್ತು ಪತ್ತೆಯಲ್ಲಿ ಕೊಡಗಿನ ಕಾಪರ್ ಗೆ ಚಿನ್ನ, ಅಪರಾಧ ಪತ್ತೆಯಲ್ಲಿ ಬ್ರೂನೊಗೆ ಕಂಚು

4-ut-khader

Manmohan Singh: ನವಭಾರತದ ಚಾಣಕ್ಯ ಅಸ್ತಂಗತ: ದೇಶಕ್ಕೆ ತುಂಬಲಾರದ ನಷ್ಟ: ಯು.ಟಿ. ಖಾದರ್

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

26/11 ದಾಳಿಯ ಸಂಚುಕೋರ ಅಬ್ದುಲ್ ರೆಹಮಾನ್ ಮಕ್ಕಿ ಪಾಕಿಸ್ತಾನದಲ್ಲಿ ಹೃದಯಾಘಾತದಿಂದ ಸಾ*ವು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು

Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Video: ತನ್ನ ಮನೆಯ ಮುಂದೆಯೇ ಚಾಟಿಯಿಂದ ಹೊಡೆದುಕೊಂಡ ಕೆ.ಅಣ್ಣಾಮಲೈ…

Video: ತನ್ನ ಮನೆಯ ಮುಂದೆಯೇ ತನ್ನನ್ನು ಚಾಟಿಯಿಂದ ಹೊಡೆದುಕೊಂಡ ಅಣ್ಣಾಮಲೈ…

Madhya Pradesh Education Minister’s substitute statement sparks political storm

Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ

ಮಾರ್ಗದರ್ಶಕರನ್ನು ಕಳೆದುಕೊಂಡುಕೊಂಡಿದ್ದೇವೆ… ಮನಮೋಹನ್ ಸಿಂಗ್ ನಿಧನಕ್ಕೆ ರಾಹುಲ್ ಸಂತಾಪ

ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: A car fell into a huge pothole near Ambalapadi Junction

Udupi: ಅಂಬಲಪಾಡಿ ಜಂಕ್ಷನ್‌ ಬಳಿ ಬೃಹತ್‌ ಹೊಂಡಕ್ಕೆ ಬಿದ್ದ ಕಾರು

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

watermelon:ಕಲ್ಲಂಗಡಿ ಬೆಳೆ ಯಾವಾಗ ಉತ್ತಮ ಇಳುವರಿ ಕೊಡುತ್ತೆ…ಕೃಷಿ ವಿಜ್ಞಾನಿಗಳ ಸಲಹೆ ಏನು?

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Bidar; ಗುತ್ತಿಗೆದಾರ ಆತ್ಮಹತ್ಯೆ ಕೇಸ್;‌ ಕರ್ತವ್ಯ ನಿರ್ಲಕ್ಷ್ಯ ತೋರಿದ 2 ಪೇದೆಗಳ ಅಮಾನತು

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Tv Actor: ಗೆಳತಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ ಬೆದರಿಕೆ; ಖ್ಯಾತ ಕಿರುತೆರೆ ನಟ ಅರೆಸ್ಟ್

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Gangavathi: ಕ್ಲಿಫ್ ಜಂಪಿಂಗ್‌ ಜಲ ಸಾಹಸ ಕ್ರೀಡೆ ಅಸುರಕ್ಷಿತ..! ಅಪಾಯಕಾರಿ ಸಾಹಸ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.