ಕೋವಿಡ್ ಎಫೆಕ್ಟ್ : ವೆಂಟಿಲೇಟರ್‌ಗೆ ಪರ್ಯಾಯ ಹುಡುಕಿದರು
Team Udayavani, Apr 3, 2020, 2:30 PM IST
ಹೈದರಾಬಾದ್: ಜಗತ್ತಿನೆಲ್ಲೆಡೆ ಕೋವಿಡ್ ನ್ನು ಮಟ್ಟಹಾಕಲು ನೆರವಾಗುವಂತಹ ಔಷಧ ತಯಾರಿಕೆಯಲ್ಲಿ ವಿಶ್ವದ ಸಾಕಷ್ಟು ರಾಷ್ಟ್ರಗಳ ಸಂಶೋಧಕರು ನಿರತರಾಗಿದ್ದಾರೆ. ಮತ್ತೂಂದೆಡೆ ಅಗತ್ಯ ಚಿಕಿತ್ಸೋಪಕರಣವಾದ ವೆಂಟಿಲೇಟರ್ ಸಮಸ್ಯೆಯಿಂದ ಕೋವಿಡ್ 19 ಪೀಡಿತ ರಾಷ್ಟ್ರಗಳು ಪರದಾಡುತ್ತಿವೆ. ಅಮೆರಿಕಾ ಕೂಡ ವೆಂಟಿಲೇಟರ್ ಅಭಾವದಿಂದ ಬಳಲುತ್ತಿದ್ದು, ನೆರೆಹೊರೆಯ ರಾಷ್ಟ್ರಗಳ ಮುಂದೆ ಸಹಾಯ ಹಸ್ತ ಚಾಚಿದೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅಗತ್ಯ ವಸ್ತುಗಳನ್ನು ಪೂರೈಕೆಗೆ ಮುಂದಾಗಿರುವ ಹೈದರಾಬಾದ್ ಐಐಟಿ ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್‌ಗಳನ್ನು ರೂಪಿಸಲು ಮುಂದಾಗಿದೆ.
ಅಗ್ಗದ ದರದಲ್ಲಿ ವೆಂಟಿಲೇಟರ್
ಹೈದರಾಬಾದ್‌ನ ಐಐಟಿ ಸಂಶೋಧಕರು ಅಗ್ಗದ ವೆಂಟಿಲೇಟರ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಕೋವಿಡ್ ಸೋಂಕಿತರು ಸೇರಿದಂತೆ, ಹಲವು ಉಸಿರಾಟದ ತೊಂದರೆಯಿರುವ ರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಭರವಸೆ ಮೂಡಿದೆ.
ಅಂಬು ಬ್ಯಾಗ್ ಎಂದು ನಾಮಕರಣ
ಈ ವೆಂಟಿಲೇಟರ್‌ಗಳನ್ನು ತುರ್ತು ಸಂದರ್ಭದಲ್ಲಿ ಬಳಸಬಹುದಾಗಿದ್ದು, ಸುಲಭವಾಗಿ ತಯಾರಿಸಬಹುದು. ಕಡಿಮೆ ಖರ್ಚು ತಗಲುವುದರಿಂದ ಅಗ್ಗದ ದರದಲ್ಲಿ ಕೈಗೆಟುಕಲಿದೆ. ದೆಹಲಿ ಐಐಟಿ ಈ ವೆಂಟಿಲೇಟರ್‌ಗಳಿಗೆ ಅಂಬು ಬ್ಯಾಗ್ ಎಂದು ನಾಮಕರಣ ಮಾಡಿದೆ.
5 ಸಾವಿರ ರೂ.ಗಳಿಗೆ ಲಭ್ಯ
ಇವುಗಳ ಖರೀದಿಗೆ 5 ಸಾವಿರ ರೂ.ಗಳ ವೆಚ್ಚ ತಗುಲಲಿದ್ದು, ಒಂದು ಬಾರಿಗೆ ಓರ್ವ ರೋಗಿ ಮಾತ್ರ ಬಳಸಬಹುದು. ಪುನರ್ಬಳಕೆ ಮಾಡಲು ಸಾಧ್ಯವಿಲ್ಲ. ಮುಂಬರುವ ತಿಂಗಳಲ್ಲಿ ಮಿಲಿಯನ್‌ಗಟ್ಟಲೇ ಉತ್ಪಾದನೆ ಮಾಡುವುದಾಗಿ ತಿಳಿಸಿರುವ ಐಐಟಿ ತಜ್ಞರು ಕೋವಿಡ್-19 ವಿರುದ್ಧ ಹೋರಾಡಲು ಸಾಥ್ ನೀಡುವುದಾಗಿ ತಿಳಿಸಿದ್ದಾರೆ.
ನೆರೆಯ ರಾಷ್ಟ್ರಗಳಿಗೂ ನೆರವಾಗಿ
ಕೇಂದ್ರ ಸರಕಾರ ಇವುಗಳ ಉಪಯೋಗ ಮಾಡಿಕೊಂಡು ಪರಿಸ್ಥಿತಿಯನ್ನು ನಿಭಾಯಿಸಲು ಚಿಂತನೆ ನಡೆಸಿದೆ. ಪ್ರಸ್ತುತ ಇರುವ ವೆಂಟಿಲೇಟರ್ ಕೊರತೆಯನ್ನು ಅಂಬು ಬ್ಯಾಗ್ ಅಳವಡಿಸಿಳ್ಳುವ ಮೂಲಕ ಬಗೆಹರಿಸಿಕೊಳ್ಳಬಹುದು. ಇವುಗಳ ಬಳಕೆಯಿಂದ ಕೇವಲ ದೇಶ ಮಾತ್ರವಲ್ಲದೇ ಹೊರದೇಶಗಳಲ್ಲಿರುವ ವೆಂಟಿಲೇಟರ್ ಸಮಸ್ಯೆಯನ್ನು ನೀಗಿಸಬಹುದು ಎಂದು ಸರಕಾರ ಅಭಿಪ್ರಾಯಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.