ಕೇರಳದಲ್ಲಿ ಅಮೆರಿಕದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ
ಬೀಚ್ ಬಳಿ ಕುಳಿತಿದ್ದಾಗ...
Team Udayavani, Aug 2, 2023, 4:12 PM IST
ಕರುನಾಗಪಲ್ಲಿ: ಇತ್ತೀಚೆಗೆ ಕೇರಳಕ್ಕೆ ಆಗಮಿಸಿ ಆಶ್ರಮವೊಂದರಲ್ಲಿ ತಂಗಿದ್ದ ಅಮೆರಿಕದ ಮಹಿಳೆಯ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಮಂಗಳವಾರ ಬಂಧಿಸಲಾಗಿದೆ, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 31 ರಂದು 44 ವರ್ಷದ ಮಹಿಳೆ ಆಶ್ರಮದ ಬಳಿಯ ಕಡಲತೀರದಲ್ಲಿ ಒಬ್ಬಂಟಿಯಾಗಿ ಕುಳಿತಿದ್ದಾಗ ಘಟನೆ ಸಂಭವಿಸಿದ್ದು, ಮಹಿಳೆಯ ದೂರಿನ ಪ್ರಕಾರ, ಪುರುಷರು ಆಕೆಯ ಬಳಿಗೆ ಬಂದು ಸಿಗರೇಟ್ ಹಂಚಿಕೊಳ್ಳಲು ಮುಂದಾದರು ಮತ್ತು ಅವರು ನಿರಾಕರಿಸಿದಾಗ ಅವರು ರಮ್ ನೀಡಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮದ್ಯ ಸೇವಿಸಿದ ಬಳಿಕ ಆಕೆಗೆ ಅಮಲೇರಿದ ಬಳಿಕ ಬೈಕ್‌ನಲ್ಲಿ ಹಾಕಿಕೊಂಡು ಸಮೀಪದ ಖಾಲಿ ಮನೆಗೆ ಕರೆದೊಯ್ದು ಪದೇ ಪದೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮಹಿಳೆ ಆಗಸ್ಟ್ 1 ರಂದು ರಾತ್ರಿ ದೂರು ನೀಡಿದ್ದರು. ಮಹಿಳೆ ಜುಲೈ 22 ರಂದು ಕೇರಳಕ್ಕೆ ಬಂದಿದ್ದರು ಎಂದು ಸಂತ್ರಸ್ತೆಯ ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
“ಇಬ್ಬರು ಆರೋಪಿಗಳ ಬಂಧನವನ್ನು ಇನ್ನಷ್ಟೇ ದಾಖಲಿಸಬೇಕಾಗಿದೆ. ಅವರು ಪ್ರಸ್ತುತ ಬಂಧನದಲ್ಲಿದ್ದಾರೆ ಎಂದು ಕರುನಾಗಪಲ್ಲಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.